ಜೀವನ

 

ಅಳಿಯುತ್ತಿದೆ ಯೌವನ,ಅರಳುತ್ತಿದೆ ಜೌವನ
ದಿಕ್ಕು ತೋಚದೆ ಕುಳಿತಿದೆ ಈ  ಮನ.
                                                         
ಜೀವನದ ಧಾರಿಯಲಿ ನಡೆದು ಬಂದ ನೆನಪುಗಳ
ಭಾಲ್ಯದಾ ದಿನದ ಸಂತಸದ ಸಂಭ್ರಮಗಳ
ಹರೆಯದಲ್ಲಿ ಕಾಡಿದ ಆ ಸುಂದರ ಕನಸುಗಳ
ಮೆಲುಕು ಹಾಕುತ್ತಾ ನಡೆದಿದೆ ದಿನ.
 
ಈ ಬಾಳ ಸಂಜೆಯಲಿ ಜೀವನದ ತುದಿಯಲ್ಲಿ
ಮಡದಿ ಮಕ್ಕಳಿಗಾಗಿ ದುಡಿದ ಬಯಲಿನಲಿ
ನಿಂತೊಮ್ಮೆ ನೋಡಲು ಸುತ್ತ ಆವರಿಸಿದೆ
ಶೂನ್ಯತೆಯ ಕಾನನ.
 
ಮುಂದಿರುವ ನಿಲ್ಲದ ಒಂಟಿ ಪಯಣಕೆ
ನಡೆಯುವ ಮುನ್ನ ಒಮ್ಮೆ ತನ್ನವರ
ಪ್ರೀತಿ ಪ್ರೇಮವ ಕಾಣುವ ತುಡಿತದಲಿ
ಮೌನಕೆ ಶರಣಾಗಿದೆ ಮನ.

ಈ ಲೇಖನ ಹೇಗಿದೆ?: 
ಅಂಕಗಳು: 5 (1 ಓಟು)

ಲೇಖನದ ಬಗೆ: 

Subscribe to Comments for "ಜೀವನ"