ಸಾಕು.... ಸಾಕಮ್ಮ ಕಾಡದಿರೆನ್ನ...

ಸಾಕು ಸಾಕೆಂದರು ಕಾಡುತಿಹುದು

ಬೆಂಬಿಡದೆ ನನ್ನವಳ ಸವಿ ಸವಿನೆನಪು

ಕಾಯುತಿಹೆನು ಬರುವ ಹಾದಿಯ

ನಂಬುಗೆಯೆ ಪ್ರೇಮವೆಂದೋಲೈಸಿ...

 

ಬದುಕು ಬೇಡವಾಗಿದೆ ಕನಸಲ್ಲೆ ರಮಿಸಿ

ತುಸು ಕಾಣೋತವಕವೆನಗೆ ಪ್ರೇಯಸಿ

ಮತ್ತೆ ಸೇರಲಾರಳೆ ಎನ್ನತಪ್ಪ ಕ್ಷಮಿಸಿ

ಕಾಯುತಿಹೆನು ಬರುವ ಹಾದಿಯ

ನಂಬುಗೆಯೆ ಪ್ರೇಮವೆಂದೋಲೈಸಿ

 

ಪ್ರೀತಿಯ ಅಗಲಿಕೆಯನು ಸಹಿಸಿ

ದೂರಾದ ಸಂಕಟ ಮರೆಯಿಸಿ

ಮರೆತರು ಮರೆಯದೆ ಮನದಲ್ಲೆ ಪ್ರೇಮಿಸಿ

ಕಾಯುತಿಹೆನು ಬರುವ ಹಾದಿಯ

ನಂಬುಗೆಯೆ ಪ್ರೇಮವೆಂದೋಲೈಸಿ

 

ಕಹಿಯಾದಬಾಳಿಗೆ ಸಿಹಿಬೆರಸಿ

ಬಂದೆ ಬರುವಳೆನ್ನ ಮನದರಸಿ

ನೋಂದ ಎನ್ನ ಮನವ ಅರಸಿ

ಕಾಯುತಿಹೆನು ಬರುವ ಹಾದಿಯ

ನಂಬುಗೆಯೆ ಪ್ರೇಮವೆಂದೋಲೈಸಿ

 

............ಮಂ.ಚಿ.ರ (ರವಿಶಾಂತ್)

ಈ ಲೇಖನ ಹೇಗಿದೆ?: 
ಅಂಕಗಳು: 2 (2 ಓಟುಗಳು)

ಲೇಖನದ ಬಗೆ: 

Subscribe to Comments for "ಸಾಕು.... ಸಾಕಮ್ಮ ಕಾಡದಿರೆನ್ನ..."