Skip to main content

"ಕುಡಕನೆಂಡ್ರ ಬಾಳ ಬಯಲಾಟ"

ಬರೆದಿದ್ದುJanuary 24, 2017
noಅನಿಸಿಕೆ

ಕುಡುಕ ಚಂದಿರನ ಹೆಂಡ್ರು ನಾನು

ಬೆಳಕಿಲ್ಲದ ಮದುವೆಯಾಟ ಬಲು ಚುರುಕು!

ಹೊಟ್ಟೆಗೆ ಮುದ್ದೆಯಿಲ್ಲ, ನಿದ್ದೆಯಲ್ಲಿ ಸದಾ ತುರಿಕೆ

ಮಧ್ಯರಾತ್ರಿಯು ನೆಮ್ಮದಿ ಇರದು ಬರೀ ಗೊರಕೆ

ಇವನ ಬಾಯಿಗೆ ಹಳೇ ಪೊರಕೆ...

ವಿಧಿಬರಹ ದೇಹಗಳೆರಡು ತಳಕು ಬಳಕು..!

ಒಲಿದ ಸಂತಾನ ಭಾಗ್ಯ ಕುಲಕೆ,

ನಾಲ್ಕು ಮುತ್ತು ರತ್ನಗಳ ಗಳಿಕೆ,

ಹರಕು ಚಾದಾರ ಮುರುಕು ನೆರಕೆ,

ಕುಡಿತ ಬಡತನ ಬಾಚಲೂ ಇರದೊಂದು ಬಾಚಣಿಕೆ!

ಆ.. ದೇವನಿಗೆ ಅರಿಯದೆ? ನನ್ನ ಕೊರಿಕೆ...

ಸಾರಾಯಿ ಸಹವಾಸ ಸರ್ವಕಾಲಕು

ಸಂಸಾರಕೆ ಸೆರೆವಾಸ ಬಂದ ಬಿರುಕು

ಇಂತ ಪತಿಯ ಪಡೆದ ಪುಣ್ಯಕೆ

ಖತ್ತಿಯ ಬುಡಕೆ ತಲೆ ಹಾಕು

ಇಲ್ಲವೇ.. ಮಕ್ಕಳೊಡನೆ ಕೆರೆಗೆ ಧುಮುಕು....

                       ಕೆ. ಕುಮಾರ್. ಗದಗ್

 

ಲೇಖಕರು

ಕೆ. ಕುಮಾರ್. ಗದಗ್

ಪಿಸುಮಾತಿನ ಹೆಸರು ಹೇಳಲು ತುಸು ಕಾಯುವೆ, ಮರುಜನ್ಮವಿದ್ದರೆ ತಪ್ಪದೇ ಹೇಳವೆ....

ನಾನ್ಹೇಗೆ ಹೇಳಲಿ ನನ್ನ ಕಥೆಯ..! ನಾ ಸದಾ ಅವಲಂಬಿಸಿರುವೆ ಕರುನಾಡ ಮಾತೆಯ, ಕರುನಾಡ ನುಡಿಯ... ನನಗಿಲ್ಲ ಏನೂ ಭಯ! ನನಗೆಲ್ಲಾ ನಿರ್ಭಯ.. ದಯಮಾಡಿ ಇಡಬೇಡಿ ನನ್ನ ಮೇಲೆ ಸಂಶಯ, ನನಗಿರಲಿ ಕನ್ನಡಿಗರೆಲ್ಲರ ಆಶ್ರಯ, ಎಲ್ಲರಿಗೂ ಒಳಿತಾಗಲಿ ಅದುವೇ ನನ್ನ ಅತಿಶಯ, ನನಗಿಲ್ಲ ನನ್ನ ಬಗ್ಗೆ ಹೇಳುವ ಆಶಯ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.