Skip to main content

"ಕಾಪಾಡು ಭಾರತವ ಕಾಪಾಡು"

ಬರೆದಿದ್ದುJanuary 24, 2017
noಅನಿಸಿಕೆ

೧) ಬೊಗಳುವ ನಾಯಿ

                    ತೆಗಳುವ ಬಾಯಿ,

ಕಾಡಲ್ಲಿನ ತೋಳ

                    ರಾಜಕೀಯ ಕುಳ,

ಭೂತ ಕಾರ್ಯವದು ದುಷ್ಟ

                    ದೇವ ಮಂದಿರದಲ್ಲು ಭ್ರಷ್ಟ,

ಇವರಿಗೆಕಯ್ಯಾ ಹೀನ ಬುದ್ದಿ

                    ಶ್ರೀ ಗುರು ಪುಟ್ಟರಾಜ.....

 

೨)ಸರ್ಕಾರಿ ಕಛೇರಿಗಳು

                      ಭ್ರಷ್ಟಚಾರಗಳು,

ಸೌಧದ ರಾಜಕೀಯಗಳು

                      ಹಗರಣಗಳು,

ಸ್ತ್ರೀಲೋಲ ಕಾಮುಕಗಳು

                      ಅತ್ಯಾಚಾರಿಗಳು,

ಭಾರತಾಂಬೆಯ ದ್ವೇಷಿಗಳು

                      ಉಗ್ರವಾದಿಗಳು,

ದೇಶದ ಪ್ರಜೆಗಳು

                      ಮೂರ್ಖಗಳು,

ಯಾರಯ್ಯ ಮಹಾತ್ಮರುಗಳು

                      ಶ್ರೀ ಗುರು ಪುಟ್ಟರಾಜ......

ಲೇಖಕರು

ಕೆ. ಕುಮಾರ್. ಗದಗ್

ಪಿಸುಮಾತಿನ ಹೆಸರು ಹೇಳಲು ತುಸು ಕಾಯುವೆ, ಮರುಜನ್ಮವಿದ್ದರೆ ತಪ್ಪದೇ ಹೇಳವೆ....

ನಾನ್ಹೇಗೆ ಹೇಳಲಿ ನನ್ನ ಕಥೆಯ..! ನಾ ಸದಾ ಅವಲಂಬಿಸಿರುವೆ ಕರುನಾಡ ಮಾತೆಯ, ಕರುನಾಡ ನುಡಿಯ... ನನಗಿಲ್ಲ ಏನೂ ಭಯ! ನನಗೆಲ್ಲಾ ನಿರ್ಭಯ.. ದಯಮಾಡಿ ಇಡಬೇಡಿ ನನ್ನ ಮೇಲೆ ಸಂಶಯ, ನನಗಿರಲಿ ಕನ್ನಡಿಗರೆಲ್ಲರ ಆಶ್ರಯ, ಎಲ್ಲರಿಗೂ ಒಳಿತಾಗಲಿ ಅದುವೇ ನನ್ನ ಅತಿಶಯ, ನನಗಿಲ್ಲ ನನ್ನ ಬಗ್ಗೆ ಹೇಳುವ ಆಶಯ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.