
ಅಂತರ್ ವಲಯ ಮಟ್ಟದ ಮಹಿಳಾ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ
ಅಂತರ್ ವಲಯ ಮಟ್ಟದ ಮಹಿಳಾ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ
ಎಸ್ ಡಿ ಎಮ್ ಕಲಾ, ವಾಣಿಜ್ಯ ,ವ್ಯವಹಾರ ಆಡಳಿತ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೊನ್ನಾವರ ಕಾಲೇಜಿನಲ್ಲಿ ದಿ.೧೩ರಿಂದ ೧೫ರವರೆಗೆ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಏಕ ವಲಯ ಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕ.ವಿ.ಪ್ರ ಸಮಿತಿಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಮಹಿಳಾ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಹಾವಿದ್ಯಾಲಯದ ಕಬಡ್ಡಿ ತಂಡದ ನಾಯಕಿ ಪೂರ್ಣಿಮಾ ತಿಪ್ಪಣ್ಣವರ, ಉಪ ನಾಯಕಿ ಶಂಕ್ರಮ್ಮ ಬಾಣದ, ಸುಧಾ ಯಲಿಗಾರ್, ಶಿಲ್ಪಾ ಕುರಿ, ಚನ್ನಮ್ಮ ಹೊಸೂರ್, ದಿವ್ಯಾ ಅಂಗಡಿ,ಮಲ್ಲಮ್ಮ ಮ್ಯಾಗೇರಿ, ದ್ರಾಕ್ಷಾಯಣಿ ಐಹೊಳಿ, ನೀಲಮ್ಮ ಯಲಿಗಾರ್ ಪಾಲ್ಗೊಂಡಿದ್ದರು. ತಂಡಕ್ಕೆ ಸಂಸ್ಥೆಯ ಚೇರ್ಮನ್ ವಾಯ.ಎಸ್.ಬೇಲಿ, ಕಾರ್ಯದರ್ಶಿ ಎಸ್.ಜಿ.ಕಲ್ಯಾಣಿ,ಪ್ರಾ.ಡಾ.ಎಸ್ಫ್.ವಿ.ಅಂದಾನಶೆಟ್ರ, ಕ್ರೀಡಾ ವಿಭಾಗದ ಚೇರ್ಮನ ಪ್ರೊ.ಪಿ.ಆರ್.ಸದುಗೋಳ್, ದೈಹಿಕ ನಿರ್ದೇಶಕ ಎ.ಎಸ್.ಪಾಟೀಲ್ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
-ವರದಿ- ಪ್ರಭು.ಅ. ಗಂಜಿಹಾಳ್-೯೪೪೮೭೭೫೩೪೬
ಸಾಲುಗಳು
- 134 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ