Skip to main content

ನನ್ ಕವನಗೋಳ್

ಬರೆದಿದ್ದುAugust 24, 2016
3ಅನಿಸಿಕೆಗಳು

ಹೋ ತಾಯಿ ಮುನಿಸಾದರೂ ಏಕೆ ನಿನಗೆ

ನನ್ನ ತಂದೆ ನಿನ್ನ ಮಡಿಲಿಗೆ ಕೊಡಲಿಯಟ್ಟನೇ

ನಿನ್ನೊಡಲೊಳಗೆ ತ್ಯಾಜ್ಯಗಳ ತುಂಬಿಹನೇ

ಈ ನಿನ್ನ ಮುನಿಸಿಗೆ ನನ್ನ ತಂದೆ ಮಾತ್ರ ಕಾರಣನೇ

ಓ ತಾಯಿ ನೀನೊಮ್ಮೆ ಕರುಣೆಯಿಂದ ಹೇಳು

ನಿನ್ನ ದೇಹವನು ಶುದ್ಧಗೊಳಿಸಬೇಕೆ ಎಂದು

ಉತ್ತಿದರೂ ಬಿತ್ತಿದರೂ ನಾಲ್ಕೆತ್ತು ಮಾರಿ ಒಂದ್

ಚೂರು ಔಷಧಿ ಗೊಬ್ಬರ ಹಾಕಿದರೂ ಮುನಿಸೇಕೆ 

ನನ್ನ ತಂದೆ ಎತ್ತಿನ ಹಗ್ಗದ ಕುಣಿಕೆಗೆ

ಕೊರಳೊಡ್ಡುವ ಮುನ್ನ ನಿನ್ನ ಮುನಿಸನು ತೊರೆದು

ಈ ಬಡ ರೈತನ ಉಸಿರನು ಉಳಿಸು ತಾಯೆ...

ಲೇಖಕರು

ವಿನಾಯಕ ಬಿ.ಟಿ

ವಿನು

ಕನ್ನಡ ಬಾಷೆ,ಸಾಹಿತ್ಯ ಪ್ರೇಮಿ.ಸಧ್ಯ ಸ.ಕಿ.ಪ್ರಾ. ಶಾಲೆ.ಹೊರಬೈಲಿನಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಅನಿಸಿಕೆಗಳು

KiRti ಶುಕ್ರ, 09/09/2016 - 16:51

ನಿಮ್ಮ್ ಕವನಗಳು ಅರ್ಥಪೂರ್ನವಾಗಿವೆ///

ವಿನಾಯಕ ಬಿ.ಟಿ ಶುಕ್ರ, 11/18/2016 - 09:52

ಧನ್ಯವಾದಗಳು ಸರ್.....

ವಿನಾಯಕ ಬಿ.ಟಿ ಶುಕ್ರ, 11/18/2016 - 09:53

ಧನ್ಯವಾದಗಳು....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.