Skip to main content

ನನ್ ಕವನಗೋಳ್

ಬರೆದಿದ್ದುAugust 21, 2016
noಅನಿಸಿಕೆ

         ಎಲ್ಲಿಟ್ಟೆ ನಾನು ಆ ನನ್ನ ಕವನವ

ಕೊನೆಯ ಬಾರಿ ಎಡಗೈಯ್ಯ ಬೆರಳ ತುದಿ

ಅಸಡ್ಡೆಯಿಂದೆಸೆಯಿತೇ ಆ ನನ್ನ ಕವನವ

ನನ್ನ ದೇಹದ ಪ್ರತಿಯೊಂದು ಅಂಗಗಳ

ಕಣ-ಕಣದಲ್ಲೂ ಹುದುಗಿ ಹೋಗಿದ್ದ ಆ ನನ್ನ ಕವನವ

ಪೆನ್ನಿನ ನಿಬ್ಬಿಗೆ ನೀಲಿ ಇಂಕಿನಿಂದ

ಎಡೆ ಬಿಡದೆ ವಾಂತಿಮಾಡಿಸಿ ಬರೆದಿದ್ದ ಆ ನನ್ನ ಕವನವ

ಗೀಚಿ-ಗೀಚಿ ಹರಿದು ಬಿಸಾಕಿದ ಹಾಳೆಗಳ

ಮೇಲೆ ಹರಿಹಾಯ್ದು ಆಯ್ದೀಟ್ಟಿದ್ದ ಆ ನನ್ನ ಕವನವ

ಮನದಲ್ಲಿದ್ದ ಮಣಭಾರ ವಿಷಯವನು

ಮನಬಿಚ್ಚಿ ಮೂಡಿಸಿದ್ದ ಆ ನನ್ನ ಕವನವ

ಮೂಷಿಕನ ದಂತ ಪರಿಚಯವಾಗದಂತೆ ಕಾಪಾಡಿ

ಮಡಿ ಮಾಡಿ ಮಡಚಿಟ್ಟಿದ್ದ ಆ ನನ್ನ ಕವನವ

             ಎಲ್ಲಿಟ್ಟೆ ನಾನು ಆ ನನ್ನ ಕವನವ...

ಲೇಖಕರು

ವಿನಾಯಕ ಬಿ.ಟಿ

ವಿನು

ಕನ್ನಡ ಬಾಷೆ,ಸಾಹಿತ್ಯ ಪ್ರೇಮಿ.ಸಧ್ಯ ಸ.ಕಿ.ಪ್ರಾ. ಶಾಲೆ.ಹೊರಬೈಲಿನಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.