Skip to main content

ಭಾರತ ಸ್ವಚ್ಛವಾಗಲಿ

ಇಂದ Geeta G Hegde
ಬರೆದಿದ್ದುAugust 13, 2016
noಅನಿಸಿಕೆ

ಯಾಕೊ ಮನಸ್ಸಿಗೆ

ಸಮಾಧಾನ ಆಗವಲ್ಲದು

ಒಂದ ಕಿಟ 

ಏನೊ ಬರೀಬೇಕನ್ಸತೈತಿ

ಏನ್ ಬರೀಲಿ?

ವಿಷಯ ಹಲವು ಅದಾವು.

 

ಆದ್ರ ಒಂದ ಮಾತು ಖರೀರಿ

ಅದೇನಂದ್ರ

ನಮ್ಮ ಭಾರತ 

ಮೋದಿ ಸಾರು ಹೇಳ್ದಾಂಗ

ಸ್ವಚ್ಛ ಮಾಡಕ^^^^ ಬೇಕರಿ

ಅಲ್ಲ ಎಲ್ಲಿಂದ

ಸ್ವಚ್ಛ ಮಾಡ್ತಾರೂ^^^^?

ತಲಿ ಮೋರೀನ^^^^?

ದೇಹದ್ ಮೋರೀನ^^^^?

ಇಲ್ಲ

ಧನ ದಾಹ ತುಂಬೀರ

ಸ್ವಿಸ್ ಬ್ಯಾಂಕದೊಳಡಗಿಕೊಂಡ ಮೋರೀನ???

ಯಾವುದು ಮೊದಲ

ಯಾವುದು ಕಡೀಕ ಮಾಡ್ತಾರೂ

ಒಂದೂ ತಿಳೀವಲ್ಲದು.

 

ತಗೀರಿ^^^

ದೇಶದ ಆಡಳಿತ

ಸ್ವಚ್ಛ ಮಾಡಾಕಂತನ

ನಮ್ಮ ಮೋದಿಯವರ ಅದಾರಿ^^

 

ಆದ್ರ ಖರೆ ಹೇಳ್ತೀನ ಮತ್

ಅವರೇಳಿದಂಗ ಪರಿಸರನೂ

ಸ್ವಚ್ಛ ಮಾಡಾಕ ಬೇಕರಿ

ನನ್ನ ಕೈನಲ್ಲಿ ಆಗವಲ್ಲದು

ವಯಸ್ಸಾತು

ಅದಕ ನಾ ದಿನಾ

ನನ್ನ ಮನಿ ಮುಂದ ಬೀದಿ ಗುಡಸಿ

ಸ್ವಚ್ಛ ಮಾಡಿ ವೈನಾಗಿ

ಮಡೀಕಂಡಿವ್ನಿ.

 

ನಮೃತೆಯಿಂದ ನಿಮಗೂ

ಕಿವಿಯಾಗೊಂದ ಮಾತು ಹೇಳ್ತೀನ 

ಸಿಟ್ಟಾಗ್ ಬ್ಯಾಡ್ರಿ ಮತ^^^^

ನೀವೂ ಹಂಗ 

ನಿಮ್ಮ ನಿಮ್ಮ ಮನಿ ಬೀದಿ

ಸ್ವಚ್ಛ ಮಾಡ್ರಲಾ

ನಿಮ್ನಿಮ್ ಏರಿಯಾನೇ

ಸ್ವಚ್ಛ ಆಗೋತೈತಿ

ಯಾಕಿನ್ ತಡ^^^^?

ಬಿರೀನ್ ಹೊಂಡ್ರಲ^^^^^^^

ಮೋದಿ ಮಾತಿಗೂ

ಬೆಲೆ ಕೊಟ್ಟಾಂಗಾತು!

28-6-2016.  1.17pm

ಲೇಖಕರು

Geeta G Hegde

ಸಂಗೀತಾ ಕಲ್ಮನೆ

ನಾನು ಹುಟ್ಟಿದ್ದು ಉತ್ತರ ಕನ್ನಡದ ಚಿಕ್ಕ ಹಳ್ಳಿ.
ಓದಿದ್ದು ಅಲ್ಲಿ ಇಲ್ಲಿ, ಆಗ ಶಾಲೆಯ ಕೊರತೆ.ಕೋ-ಆಪರೇಟಿವ್ ಬ್ಯಾಂಕಿನಲ್ಲಿ 27ವಷ೯ಗುಮಾಸ್ತೆ(Cashier cum Typist)ಆಗಿ ಕೆಲಸ ಮಾಡಿದೆ.ಕಾಯಿಲೆ ಬಂದು ಕೆಲಸ ಬಿಡಬೇಕಾಯಿತು. ದಿನ ನಿತ್ಯ ಯೋಗಾಭ್ಯಾಸದಲ್ಲಿ ಈಗ ನಾ ನಿರೋಗಿ. ಮಧ್ಯೆ ಮದುವೆ, ಮಗಳು, ಸಂಸಾರ ತಾಪತ್ರಯ. ಬುದ್ಧಿ ಬಂದಾಗಿಂದ ಸಾಹಿತ್ಯ ರಚಿಸೋದು ನನ್ನ ಹವ್ಯಾಸ ಈಗ ಪೂತಿ೯ ಅದರಲ್ಲೆ ತೊಡಗಿಸಿಕೊಂಡಿದ್ದೇನೆ. ಇತ್ತೀಚೆಗೆ ಈ ಬರೆಯುವ ಹವ್ಯಾಸ ಹೆಚ್ಚಾಗಿ ನನ್ನದೆ ಬ್ಲಾಗ್ sandhyadeepablog. wordpress. com. ಕನ್ನಡ ಬ್ಲಾಗ್ ಮತ್ತು ಸಂಪದ, ಅವಧಿ, ನಿಲುಮೆ ಕನ್ನಡ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆ. ನನ್ನ ಬರವಣಿಗೆ ಅಲ್ಲೂ ಮನೆ ಮಾಡಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.