Skip to main content

ನನ್ ಕವನಗೋಳ್

ಬರೆದಿದ್ದುAugust 8, 2016
noಅನಿಸಿಕೆ

              ಕಣ್ಣೀರು

ಕಣ್ಣೀರು ಕನಸನ್ನು ಕಮರಿಸುತ್ತದೆ

ಜೀವನದ ಆಸೆಗಳನ್ನು ಕೊಲ್ಲುತ್ತದೆ

ಆದರೆ ನಿಜ ಜೀವನದ ಸೂತ್ರಗಳನ್ನು

                      - ತಿಳಿಸುತ್ತದೆ.

 

                          ನನ್ನ ತಾಯಿ

ಅವಳು ನಕ್ಕರೆ ಮನ ನಲಿಯುವುದು

ಅವಳು ಅತ್ತರೆ ಮನ ಕರಗುವುದು

ಅವಳು ಆಡಿದ ಮಾತು ಪ್ರತಿಧ್ವನಿಸುವುದು

ಅವಳೇ ಇವಳು-ನನ್ನ ತಾಯಿ

 

 

                  ಅನಾ'ರೋಗ್ಯ

 

ಪ್ರತಿನಿತ್ಯ ಬಳಲುವರು

ಅನಾರೋಗ್ಯ ಅನಾರೋಗ್ಯ,ಎಂದು

ಪಾಪ! ಅವರಿಗಿನ್ನೂ ತಿಳಿದಿಲ್ಲ

'ನ' ತೆಗೆದರೆ ಆರೋಗ್ಯ ಇದೆ ಎಂದು

 

 

                     ಹುಡುಗಿ

ನಾ ನೋಡುತ್ತಿದ್ದ ಹುಡುಗಿ

ತಿರುಗಿ ನೋಡುತ್ತಿಲ್ಲ ಬೆಡಗಿ

ಅಪ್ಪ-ಅಮ್ಮನಿಗೆ ಹೆದರಿ

ನೋಡುತ್ತಿರುವಳು ನನ್ನ ಅಡಗಿ-ಅಡಗಿ     

 

ಲೇಖಕರು

ವಿನಾಯಕ ಬಿ.ಟಿ

ವಿನು

ಕನ್ನಡ ಬಾಷೆ,ಸಾಹಿತ್ಯ ಪ್ರೇಮಿ.ಸಧ್ಯ ಸ.ಕಿ.ಪ್ರಾ. ಶಾಲೆ.ಹೊರಬೈಲಿನಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.