Skip to main content

ಇರುವುದಿಲ್ಲ ಬಿಡದೆ

ಬರೆದಿದ್ದುJuly 18, 2016
noಅನಿಸಿಕೆ

ಇರುವುದೆಲ್ಲವ ಬಿಡದೆ

ಇರದುದರ ಕಡೆ ಹೋಗಲಾಗದೆ

ತ್ರಿಶಂಕುವಿನಂತೆ ಜೀಕಾಡಿ

ತೊಳಲಾಡಿದೆ ಮನವು

 

ಆಸೆಯನು ಬಿಡಲಾಗಿದೆ 

ದುರಾಸೆಯನು ಪಡದೆ

ನಿರಾಸೆಯಲಿ ನರಳಾಡಿ

ಅಶಕ್ತವಾಗುತಿದೆ ಬದುಕು

 

ಸತ್ಯವನು ನುಡಿಯದೆ

ಸುಳ್ಳನು ನುಡಿಯಲಾಗದೆ

ಅತಂತ್ರದ ಅಡಕೊತ್ತಲಿ ಸಿಕ್ಕು

ಅಲುಗಾಡಿದೆ ಜೀವನ ತಾಣ

 

ಪ್ರೀತಿಸದೇ ಇರಲಾರೆದೆ

ದ್ವೇಶಿಸಲು ಸಾಧ್ಯವಾಗದೆ

ಕಲ್ಲಾಗಿ ಕುಳಿತು ತನ್ನನ್ನೇ

ತಾನು ಕೊಂದುಕೊಳ್ಳುತಿದೆ ಬದುಕು

 

ನೆರಳನ್ನು ನೀಡಲಾಗದೇ

ಬಿಸಿಲನು ಸಹಿಸಲಾಗದೆ

ನಿಂತ ನಿಲುವಲ್ಲೇ ಒಣಗಿ

ಸೊರಗಿ ಹೋಗಿವೆ ಬಯಕೆಗಳು 

 

ಅತ್ತ ಇತ್ತ ಎತ್ತ  ಸಾಗದೆ

ಬಂದಂತೆ ಬದುಕಲಾಗದೆ

ಅತಂತ್ರದಿ ಅವಸಾನಕೆ

ಆಹ್ವಾನವೀಯುತಿದೆ ಬದುಕು,,,,

 

ಅಮು

 

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.