Skip to main content

ಗೊಂದಲದ ಗೂಡಲ್ಲಿ

ಬರೆದಿದ್ದುJuly 18, 2016
1ಅನಿಸಿಕೆ

ನೊಂದಿವೆ ಜೀವಗಳು 

ಬೆಂದಿವೆ ಭಾವಗಳು

ಈ ಗೊಂದಲದ ಗೂಡಲ್ಲಿ

ಗಲಿಬಿಲಿಗೊಂಡಿಹೆ ಮನದಲ್ಲಿ 

 

ಆರಕ್ಷಕರೇ ಆತ್ಮಹತ್ಯೆಗೆ

ಕೊರಳೊಡ್ಡುತಿರುವಾಗ

ಕಾಪಾಡುವ ಕೈಗಳೇ

ನಡುಗುತಲಿರುವಾಗ,,,,,?//ನೊಂದಿವೆ//

 

ದಕ್ಷತೆಗಿಲ್ಲಿ ಬೆಲೆಯೇ ಇಲ್ಲ 

ಪ್ರಾಮಾಣಿಕತೆಗೆ ಮನ್ನಣೆ ಇಲ್ಲ 

ರಾಜಕೀಯದ ಚದುರಂಗದಲಿ

ನಿತ್ಯ ಉರುಳುವ ಅಮಾಯಕ ಜೀವಗಳಿಗಾಗಿ,,,//ನೊಂದಿವೆವ//

ಆಳುವವರ ಅಟ್ಟಹಾಸದ ಮುಂದೆ 

ಬಾಳುವವರು ಪಟ್ಟ ಕಷ್ಟ  ಕೇಳುವವರಾರು

ದಿಟ್ಟತನದ ಹೋರಾಟವನು ಹತ್ತಿಕ್ಕುವ 

ಹುನ್ನಾರ ನಡೆಯುತಿರಲು,,,,,, //ನೊಂದಿವೆ//

 

ಸಾವಿನ ಮನೆಯಲ್ಲಿ  ರಾಜಕೀಯ 

ಮಾಡುವ ಇವರೆಂತ ಮಹನೀಯ

ಹೋದವರ ಸತ್ಯ ಪತ್ತೆ ಹಚ್ಚಲು 

ಇದ್ದವರ ತೇಜೋವಧೆ ಮಾಡುತಲಿರುವಾಗ,,,//ನೊಂದಿವೆ//

ಲೇಖಕರು

ಅನಿಸಿಕೆಗಳು

ವಿನಾಯಕ ಬಿ.ಟಿ ಶುಕ್ರ, 08/12/2016 - 10:08

ಬಹಳ ಚೆನ್ನಾಗಿದೆ ಸರ್... ಮುಂದುವರಿಸಿ....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.