Skip to main content

ಪ್ರೆಮ ನೌಕೆ (ಭಾಗ - ೨)

ಇಂದ Meena ramesh
ಬರೆದಿದ್ದುJune 27, 2016
1ಅನಿಸಿಕೆ

ಸ್ವಪ್ನ ನೋಡಲು ತುಂಬಾ ಮುದ್ದಾದ ಹುಡುಗಿ. ಅವಳ ಹಿಂದೆ ತುಂಬಾ ಜನ ಹುಡುಗರು ಬಿದ್ದಿದರು. ಆದರೆ ಯಾರಿಗೂ ಅವಳ ಮುಂದೆ  ಬಂದು ಹೇಳುವ ಧ್ಯೆರ್ಯ ಇರಲಿಲ್ಲ. ಇವಳು ಸಹ ಯಾರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಆದರೆ  ಹುಡುಗ ನೋಡಿದ ಮೊದಲ ಕ್ಷಣವೆ ಇವಳನ್ನು ಸೆಳೆದಿದ್ದ. 

  ಅಪರಿಚಿತ ಹುಡುಗನನ್ನು ಇವಳು ತನಗೆ ಗೊತ್ತಿಲ್ಲದೆ ಪ್ರೀತಿಸಲು ಶುರು ಮಾಡಿದ್ದಳು. ಅಂದಿನಿಂದ ಅದೇ ಕ್ರಾಸ್ ನಲ್ಲಿ  ಹುಡಗ ಸಿಗುತ್ತಿದ್ದ. 

 ಇವಳು ಅವನನ್ನು ನೋಡಿ ನಗುತ್ತ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದಳು. ಆದರೆ  ಹುಡುಗನಿಗೆ  ವಿಷಯ ಅರ್ಥವಾಗಲಿಲ್ಲ.

 

ಒಂದು ದಿನ ಸ್ವಪ್ನ ತನ್ನ ಇನೊಬ್ಬ ಸೇಹಿತೆ ಸವಿನಯ ಜೊತೆ ದೇವಸ್ಥಾನಕ್ಕೆ ಹೋಗುವಾಗ ಹುಡುಗ
ಸವಿನಯಳನ್ನು ಮಾತನಾಡಿಸಿದ. ಆಗ ಸ್ವಪ್ನ "ಯಾರೆ ಅವನು
, ನಿನಗೆ
ಗೊತ್ತ
?" ಎಂದು ಕೇಳಿದಳು.
ಆಗ ಅವಳು " ಇವನು ನಮ್ಮ ಪಕ್ಕದ ಮನೆಯಲ್ಲಿ
 ಮೊದಲು ಇದ್ದರು. ಇವನ ಹೆಸರು ಸಾಗರ್. ತುಂಬ ಒಳ್ಳೆಯ ಹುಡುಗ. ನೋಡೋಕ್ಕು ಚೆನ್ನಾಗಿದ್ದಾನೆ. ತುಂಬ ಚೆನ್ನಾಗಿ ಓದುತ್ತಾನೆ. ಆದರು 

ಸ್ವಲ್ಪನೂ ಜಂಬ ಇಲ್ಲ" ಎಂದು ಅವನನ್ನು ಹೊಗಳಿದಳು. ಸ್ವಪ್ನ ಇದನ್ನು ಕೇಳಿ ಮನಸ್ಸಿನಲ್ಲೇ ಖುಷಿಪಟ್ಟಳು. 

ಹೀಗೆ ಸ್ವಪ್ನ ಸವಿನಯಳಿಂದ ಸಾಗರ್ ಬಗ್ಗೆ ಮತ್ತೆ ಅವನ ಮನೆಯವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದಳು. 

ಸಾಗರ್ ಮನೆಯಲ್ಲಿ ಅವನ ಅಪ್ಪ ಅಮ್ಮ ಮತ್ತು ಒಬ್ಬ ತಂಗಿ ಇದ್ದಳು. ಸಾಗರ್ ಇಂಜೀನಿಯರಿಂಗ್ ೨ನೇ ವರ್ಷದಲ್ಲಿ ಓದುತಿದ್ದ. ಅವನ ಅಪ್ಪ ಪೋಲಿಸ್ಅಮ್ಮ ಶಿಕ್ಷಕಿ. ತಂಗಿ ಸಾಹಿತಿ ಬಿ.ಕಾಮ್ ೧ನೇ ವರ್ಷದಲ್ಲಿ ಓದುತಿದ್ದಳು. 

ಹೀಗೆ ಒಂದು ವರ್ಷ ಕಳೆಯಿತು. ಸ್ವಪ್ನ ಮತ್ತು ಸಮಾ ಇಬ್ಬರು ಒಳ್ಳೆಯ ಅಂಕ ಪಡೆದು ಪಾಸ್ ಆಗಿದ್ದರು. ಆದರೆ ಸಮಾನ ಮನೆಯಲ್ಲಿ 

ಇಂಜೀನಿಯರಿಂಗ್ ಹೋಗೋದು ಬೇಡ ಅಂಥ ಹೀಳಿದ್ದರು. ಸಮಾನ ಬಿಟ್ಟು ಬೇರೆ ಕಡೆ ಸೇರಲು ಸ್ವಪ್ನಗೆ ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರು
ಸರ್ಕಾರಿ
 ಕಾಲೇಜಿನಲ್ಲಿ ಬಿ.ಎಸ್.ಸಿ ಗೆ ಸೇರಿಕೊಂಡರು. ಅಲ್ಲಿಗೂ ಇಬ್ಬರು ಒಟ್ಟಿಗೆ ಹೋಗಿ ಬರುತ್ತಿದ್ದರು. 

 

ಹೀಗೆ ಒಂದೆರಡು ತಿಂಗಳು ಕಳೆದವು.

ಒಂದು ದಿನ ಸ್ವಪ್ನ ಮತ್ತು ಸಮಾ ಇಬ್ಬರು ಕಾಲೇಜಿನಿಂದ ಮನೆಗೆ ಬರುವಾಗ ಒಬ್ಬ ಹುಡುಗ ಬಂದು " ಹಾಯ್ನನ್ನ ಹೆಸರು ಸುಶಾನ್ ಅಂಥ. ನಾನು ನಿಮ್ಮ ಕ್ಲಾಸ್ ನಲ್ಲೆ ಓದುತಿದ್ದೇನಿ. 

ನಾನು ಜಾಸ್ತಿ ಕ್ಲಾಸ್ ಗೆ ಬರೋದಿಲ್ಲಹಾಗಾಗಿ ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ. ನಿಮ್ಮಿಬ್ಬರಿಗು ಬೇಜಾರಿಲ್ಲ ಅಂದ್ರೆ ನಾನು ನಿಮ್ಮ 

friend ಆಗೋಕ್ಕೆ ಇಷ್ಟ ಪಡುತ್ತೇನೆ" ಅಂದ. 

 

                                                                                                       ಮುಂದುವರೆಯುತ್ತದೆ........


ಲೇಖಕರು

Meena ramesh

meenu

hellodu bekadhashtu ide.... adre helloke aagolla.

ಅನಿಸಿಕೆಗಳು

Meena ramesh ಧ, 06/29/2016 - 11:23

ಇದು ನನ್ನ ಮೊದಲನೆ ಪ್ರಯತ್ನ. ದಯವಿಟ್ಟು ಅನಿಸಿಕೆಗಳನ್ನು ತಿಳಿಸಿ....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.