ಗುಂಡನ ಹಿಕ್ಮತ್ತು

ಗೆಳೆಯ - ಏನೋ ಗುಂಡಾ, ಎಲ್ಲೂ ಕಾಣ್ತಿಲ್ಲ?  ಅದಕೆ ಮನೆಗೇ ಬಂದೆ ಮಾತಾಡಿಸಿಕೊಂಡು ಹೋಗೋಣಾಂತ.

ಗುಂಡ - ಇಲ್ಲ ಕಣೋ, ನಿನ್ನೆ ಊರ ಕಡೆ ಹೋಗಿದ್ನಾ.  ತೋಟದಲ್ಲಿ ಓಡಾಡುವಾಗ ಜಾರಿ ಬಿದ್ದೆ.  ನೋಡು ಕಾಲು ಹೇಗೆ ಊದಿಕೊಂಡಿದೆ!

ಗೆಳೆಯ - ಹೌದಲ್ಲೊ, ಡಾಕ್ಟರ್ಗೆ ತೋರಿಸಬೇಕಿತ್ತು?

ಗುಂಡ - ಛೆ, ಇದಕ್ಯಾಕೊ ಡಾಕ್ಟರ್ ಹತ್ತಿರ ಹೋಗಬೇಕು?  ನನ್ನ ಫ್ರೆಂಡೂ ಇದೇ ತರ ಜಾರಿ ಬಿದ್ದು ಕೈಗೆ ಏಟು ಮಾಡಿಕೊಂಡಿದ್ದಾನೆ.  ಹೇಗಿದ್ರೂ ಅವನು ಡಾಕ್ಟರ್ ಹತ್ತಿರ ಹೋಗಿ ಔಷಧಿ ತಂದೂಕೊಂಡಿದ್ದಾನೆ.  ಅದೇ ಔಷಧನ ನಂಗೂ  ಸ್ವಲ್ಪ ಕೊಡು ಅಂತ ಕೇಳ್ತೀನಿ.  ಅವನಿಗೆ ಕೈಗೆ, ನನಗೆ ಕಾಲಿಗೆ ಏಟಾಗಿರೋದು.  ಎರಡೂ ಬಿದ್ದಿದ್ದೇ ತಾನೆ.  ಸುಮ್ನೇ ಡಾಕ್ಟರ್ಗೆ ದುಡ್ಡು ಬೇರೆ ದಂಡ!

ಗೆಳೆಯ - ಅಪ್ಪಾ ಶಿವನೆ.  ನಮಸ್ಕಾರ ಕಣೋ, ಬರ್ತೀನಿ.

ಈ ಲೇಖನ ಹೇಗಿದೆ?: 
ಅಂಕಗಳು: 3 (1 ಓಟು)

ಲೇಖನದ ಬಗೆ: 

Subscribe to Comments for "ಗುಂಡನ ಹಿಕ್ಮತ್ತು"