Skip to main content

ಹೆಣ್ಣಿನ ಹುಚ್ಚು ಪ್ರೀತಿ

ಇಂದ Geeta G Hegde
ಬರೆದಿದ್ದುMarch 3, 2016
1ಅನಿಸಿಕೆ

ನಿನಗೆ ನಾನು ಬೇಡವಾ?

ಹಾಗಾದರೆ ಈಗ ಹೇಳು

ಎಲ್ಲಿ ಜಾಗ ಕೊಡ್ತೀಯಾ?

 

ಹೃದಯದ

ಅಪಧಮನಿ, ಅಭಿದಮನಿ ಕವಾಟದಲ್ಲಿ ನಾ ನೆಲೆಸಲೆ

ಕೊನೆಯವರೆಗೂ ರಕ್ತ ಸುರಕ್ಷಿತವಾಗಿ

ಪಂಪು ಮಾಡುವೆ.

 

ಮಿದುಳಿನ

ಪಿಟುಟರಿ ಗ್ರಂಥಿಯಲ್ಲಿ ನಾ ನೆಲೆಸಲೆ

ತಲೆ ತುಂಬ ಹೊಸ ಹೊಸ ವಿಚಾರ, ಯೋಚನೆ ತುಂಬಿ

ಮಹಾನ್ ವ್ಯಕ್ತಿ ಮಾಡುವೆ.

 

ದೇಹದ

ನರನಾಡಿಗಳಲ್ಲಿ ಬಂದು ನಾ ನೆಲೆಸಲೆ

ಹರಿಯುವ ರಕ್ತ ಶುದ್ಧಗೊಳಿಸಿ

ದೇಹ ನಿಮ೯ಲ ಮಾಡುವೆ.

 

ಸಣ್ಣ ದೊಡ್ಡ ಕರುಳಿನಲ್ಲಿ 

ಸುತ್ತಿಕೊಂಡು ನಾ ನೆಲೆಸಲೆ

ತಿನ್ನುವ ಆಹಾರ ಜೀಣ೯ಗೊಳಿಸಿ

ಆರೋಗ್ಯ ಸುಸ್ತಿತಿಯಲ್ಲಿಡುವೆ.

 

ನಿನ್ನ ದೇಹದ ತುಂಬ

ಆವರಿಸಿ ಬಂದು ನೆಲೆಸಲೆ

ರೋಗ ರುಜಿನ ಸುಸ್ತು ಎಲ್ಲ ಮರೆಸಿ

ಹೊಸ ಉತ್ತೇಜನ ತುಂಬುವೆ.

 

ಎಲ್ಲೂ ಬೇಡ ಎಂದು ಹೇಳಬೇಡ

ಯಾಕೆ ಗೊತ್ತಾ?

ಅಳುತ್ತ ನಾ ಬೇಗ ಸಾವಿನ ಮನೆ ಬಾಗಿಲು ತಟ್ಟಿ

ನಿನ್ನ ಮಗಳಾಗಿಯಾದರೂ ಜನಿಸುವೆ!

ಲೇಖಕರು

Geeta G Hegde

ಸಂಗೀತಾ ಕಲ್ಮನೆ

ನಾನು ಹುಟ್ಟಿದ್ದು ಉತ್ತರ ಕನ್ನಡದ ಚಿಕ್ಕ ಹಳ್ಳಿ.
ಓದಿದ್ದು ಅಲ್ಲಿ ಇಲ್ಲಿ, ಆಗ ಶಾಲೆಯ ಕೊರತೆ.ಕೋ-ಆಪರೇಟಿವ್ ಬ್ಯಾಂಕಿನಲ್ಲಿ 27ವಷ೯ಗುಮಾಸ್ತೆ(Cashier cum Typist)ಆಗಿ ಕೆಲಸ ಮಾಡಿದೆ.ಕಾಯಿಲೆ ಬಂದು ಕೆಲಸ ಬಿಡಬೇಕಾಯಿತು. ದಿನ ನಿತ್ಯ ಯೋಗಾಭ್ಯಾಸದಲ್ಲಿ ಈಗ ನಾ ನಿರೋಗಿ. ಮಧ್ಯೆ ಮದುವೆ, ಮಗಳು, ಸಂಸಾರ ತಾಪತ್ರಯ. ಬುದ್ಧಿ ಬಂದಾಗಿಂದ ಸಾಹಿತ್ಯ ರಚಿಸೋದು ನನ್ನ ಹವ್ಯಾಸ ಈಗ ಪೂತಿ೯ ಅದರಲ್ಲೆ ತೊಡಗಿಸಿಕೊಂಡಿದ್ದೇನೆ. ಇತ್ತೀಚೆಗೆ ಈ ಬರೆಯುವ ಹವ್ಯಾಸ ಹೆಚ್ಚಾಗಿ ನನ್ನದೆ ಬ್ಲಾಗ್ sandhyadeepablog. wordpress. com. ಕನ್ನಡ ಬ್ಲಾಗ್ ಮತ್ತು ಸಂಪದ, ಅವಧಿ, ನಿಲುಮೆ ಕನ್ನಡ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆ. ನನ್ನ ಬರವಣಿಗೆ ಅಲ್ಲೂ ಮನೆ ಮಾಡಿದೆ.

ಅನಿಸಿಕೆಗಳು

vishwa.d.hugar ಧ, 05/25/2016 - 15:46

ಚೆನ್ನಾಗಿದೆ ರೀ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.