ಚಿತ್ರ ನೋಡಿ ಕವನ ಬರೆ

3 ಪತ್ರಗಳು / 0 ಹೊಸತು
ಕೊನೆಯ ಪತ್ರ
Geeta G Hegde
Geeta G Hegde's picture
ಚಿತ್ರ ನೋಡಿ ಕವನ ಬರೆ

ಇತ್ತೀಚೆಗೆ ನಾನು ನಂದಿ ಬೆಟ್ಟಕ್ಕೆ ಮೊದಲ ಸಾರಿ ಹೋಗಿದ್ದೆ. ಅಲ್ಲಿಯ ದೇವಸ್ಥಾನದ ಮಂಟಪದ ಚಿತ್ರ ನನ್ನ ಮೊಬೈಲ್ನಲ್ಲಿ ಸೆರೆ ಹಿಡಿದೆ. ಈ ಚಿತ್ರ ನೋಡಿದಾಗೆಲ್ಲ ಖಾಲಿ ಅಲ್ಲ, ಅಲ್ಲೊಂದು ಏನೊ ಇದೆ ಅನ್ನೋ ಭಾವನೆ. ಹೀಗೆ ತಿಂಗಳಾಯಿತು.  ಒಂದಿನ ಇದ್ದಕ್ಕಿದ್ದಂತೆ ಈ ಮಂಟಪದ ಕುರಿತು ಕವನ ಬರೆದೆ. ಅಬ್ಬಾ! ಎಂತಹ ಸಂತೃಪ್ತಿ. ಕಲ್ಲಿನಲ್ಲಿ ಜೀವ ತುಂಬಿದೆ. ಅದೆ ವಿಸ್ಮಯ ನಗರಿಯಲ್ಲಿ ಪ್ರಕಟವಾದ "ಮಂಟಪ" ಕವನ. 

ಮನುಷ್ಯನ ಜೀವನ ಬಗ್ಗೆ ಯೋಚಿಸಿದಾಗ ನಮ್ಮನ್ನು ನಾವು ಯಾವ ರೀತಿ ರೂಪಿಸಿಕೊಳ್ಳುತ್ತೇವೆ ಅದೇ ತರ ಜೀವನ. ಇದೆ ಅಂದರೆ ಇದೆ, ಇಲ್ಲಾ ಅಂದರೆ ಇಲ್ಲ. ಆದುದರಿಂದ ಯಾವಾಗಲೂ ಕೇವಲ ಕಲ್ಲಾಗಿರದೆ ಅಲ್ಲೊಂದು ಕಲಾತ್ಮಕ ರೂಪ ಕೊಟ್ಟಲ್ಲಿ ಶಿಲೆಯಲ್ಲೂ ಜೀವ ಗೋಚರವಾಗುವುದು. ನಾವು ನೋಡುವ ನೋಟ positive ಆಗಿರಬೇಕು. ಸದಾ ನಮ್ಮೊಳಗಿನ ಶಕ್ತಿ ಜಾಗೃತಿಯಾಗಿಟ್ಟುಕೊಳ್ಳುವ ಕಲೆ ರೂಢಿಸಿಕೊಳ್ಳಬೇಕು. ಸೋಂಬೇರಿಗಳಾಗಿ ಕಾಲ ಹರಣ ಮಾಡಬಾರದು. ಸದಾ ಚೈತನ್ಯ ಜಾಗೃತವಾಗಿರಬೇಕು‌  ಆಗ ಈ ಜಗತ್ತೇ ಒಂದು ಸುಂದರ ಚಿತ್ರ!

snn
snn's picture

ಜೀವನ ನಿಜವಾಗಿಯೂ ಸರಳವೇ ಆದರೆ ಅದನ್ನು ನಾವೇ ಕಾಂಪ್ಲಿಕೇಟ್ ಮಾಡೋದು .ನಾವು ದಿನವನ್ನು ನೆನಪಿದುವುದು ಕಷ್ಟ. ಕ್ಷಣಗಳನ್ನು ನಾವು ನೆನಪಿಟ್ಟುಕೊಳ್ಳುವುದು  ಸುಲಭ. ಜೀವನವನ್ನು ಸಂತೋಷದಿಂದ ಇಡುವುದು ನಮ್ಮ ಕೈಯಲ್ಲೇ ಇದೆ. ಆದ್ದರಿಂದ ಇಂದಿನ ದಿನ ನಮ್ಮದೇ. ಖುಷಿಯಾಗಿ ಇರಿ. ಜೀವನದ  ಮಹತ್ವವನ್ನು ಅರಿಯಿರಿ.

snn
snn's picture
Subscribe to Comments for "ಚಿತ್ರ ನೋಡಿ ಕವನ ಬರೆ"