ಮದುವೆ

2 ಪತ್ರಗಳು / 0 ಹೊಸತು
ಕೊನೆಯ ಪತ್ರ
Geeta G Hegde
Geeta G Hegde's picture
ಮದುವೆ

ಪುರಾಣ ಕಾಲದಲ್ಲಿ ಸೀತಾ ಮಾತೆಗೆ ಮದುವೆ ಮಾಡುವಾಗ 

ನೀರಿನಲ್ಲಿಯ ಬಿಂಬ ನೋಡಿ ಚಕ್ರದಲ್ಲಿಯ ಹಕ್ಕಿಗೆ ಯಾರು ಗುರಿ ಇಡುತ್ತಾರೋ ಅವರನ್ನು ವರಿಸುವ ಪಣ. ಆಗ ಮದುವೆ ಮಾಡಲು ಜಾತಕದ ಹೊಂದಾಣಿಕೆ ಬೇಕಿರಲಿಲ್ಲವೇ?  ಶಾಕುಂತಲೆ ದುಷ್ಯಂತನೊಂದಿಗೆ ಗಾಂಧವ೯ ವಿವಾಹ ಆಗಿ ಮಗು ಪಡೆದಿರುತ್ತಾಳೆ. ಅವಳನ್ನು ಗೌರವಿಸುತ್ತಾರೆ ಜನ. ಇನ್ನು ಕೃಷ್ಣ ಪರಮಾತ್ಮ ಸ್ತ್ರೀ ಲೋಲ. ಆದರೂ ಯಾರು ದೂರೋದಿಲ್ಲ. ಇರಲಿ ಅವರೆಲ್ಲ ದೇವಾನು ದೇವತೆಗಳು.  ಆದರೆ ಕಲಿಯುಗ ಇಷ್ಟು ಮುಂದುವರಿದರೂ ಮದುವೆ ವಿಷಯ ಬಂದಾಗ ಕೆಲವು ಜಾತಿಗಳಲ್ಲಿ 'ಅಯ್ಯೊ ಜಾತಕ ಹೊಂದಾಣಿಕೆ ಆಗಬೇಕು' ಅಂತ ಮದುವೆ ವಯಸ್ಸು ಮೀರುತ್ತಿದ್ದರು  ಜಾತಕದ ನಂಬಿಕೆ ಬಿಡೋದಿಲ್ಲ.  ಬೇರೆ ಧಮ೯ದಲ್ಲಿಲ್ಲದ ಈ ಜಾತಕ ನಮ್ಮಲ್ಲಿ ಹೇಗೆ ಹುಟ್ಟಿಕೊಂಡಿತು.  ಪುರಾಣದಲ್ಲಿ ಹೇಳುತ್ತಾರೆ ಮದುವೆ ಅಂದರೆ 'ಮೊದಲ ಬಾರಿ ಹೆಣ್ಣು ಗಂಡಿನ ದೃಷ್ಟಿ ಸೇರುತ್ತಲ್ಲ, ಅದೇ ಮದುವೆ.' ಆಗ ಈ ತಾಳಿ ಕರಿಮಣಿ ಇರಲಿಲ್ಲ. ಇವೆಲ್ಲ ಯಾವಾಗ  ಹುಟ್ಟಿಕೊಂಡಿತು? ಸಂಸಾರ ಮಾಡಲು ಇಬ್ಬರ ಹೊಂದಾಣಿಕೆ ಮುಖ್ಯ ಅಲ್ಲವೆ?  ಮನುಷ್ಯನ ಮೂಲಾಧಾರ ಮನಸ್ಸು. ಈ ಜನಗಳು ಯಾಕೆ ಇದಕ್ಕೆ ಬೆಲೆ ಕೊಡುತ್ತಿಲ್ಲ? ಎಷ್ಟೋ ಮದುವೆಗಳು ಈ ಜಾತಕದ ಹೊಂದಾಣಿಕೆಯಲ್ಲಿ ನಡೆದು, ಸಮಾಜಕ್ಕೆ ಹೆದರಿಯೋ ಇಲ್ಲ ಪಾಲಿಗೆ ಬಂದ ಪಂಚಾಮೃತ ಎಂದು ಜೀವನ ನಡೆಸುತ್ತಿದ್ದಾರೆ. ಇದೆಷ್ಷು ಸರಿ.

Geeta G Hegde
Geeta G Hegde's picture

ಕ್ಷಮಿಸಿ ಇಲ್ಲಿ ತಪ್ಪಾಗಿದೆ."  ಪುರಾಣ ಕಾಲದಲ್ಲಿ ದ್ರೌಪತಿಗೆ ಮದುವೆ ಮಾಡುವಾಗ" ಎಂದು ಓದಿಕೊಳ್ಳಿ.

Subscribe to Comments for "ಮದುವೆ"