Skip to main content

  ಬದುಕು ಯಾವಾಗಲೂ ನಾವು ಊಹಿಸಿದಂತೆ ನಡೆದುಕೊಂಡು ಹೋಗುವುದಿಲ್ಲ‌  ಯಾವ ವೇಳೆಯಲ್ಲಿ ಯಾವ ರೀತಿ ಜೀವನ ಏರು ಪೇರಾಗುವುದೊ ಊಹಿಸಲು ಅಸಾಧ್ಯ.  ಆದುದರಿಂದ ಎಲ್ಲ ವಿಚಾರದಲ್ಲು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.  ಅದರಲ್ಲೂ ಈಗಿನ ಕಾಲದಲ್ಲಿ ವಿದ್ಯೆ ಮತ್ತು ಹಣ ಅತ್ಯಂತ ಮುಖ್ಯ.  ಇವೆರಡು ನಮ್ಮ ಕೈಯಲ್ಲಿ ಇದ್ದರೂ ಮುಂದಾಲೋಚನೆ ಇಲ್ಲದೆ ಐಷಾರಾಮಿ ಜೀವನ ನಡೆಸುತ್ತ ನಾಳಿನ ಬಗ್ಗೆ ಯೋಚನೆ ಮಾಡದೆ ಯಾರು ಜೀವನ ನಡೆಸುತ್ತಾರೊ ಅವರಿಗೆ ಜೀವನದಲ್ಲಿ ಏನಾದರೂ ಏರುಪೇರಾದರೆ ಬದುಕೋದೆ ಕಷ್ಟ ಅನ್ನೋ ಮನೋಭಾವನೆ ಬಂದು ಬಿಡುತ್ತದೆ. ಆದುದರಿಂದ  ಹೆತ್ತವರಾಗಲಿ, ಮಕ್ಕಳಾಗಲಿ ಅಥವಾ ಮದುವೆಯಾದವರೇ ಆಗಲಿ ಪ್ರತಿಯೊಬ್ಬರೂ ಈ ವಿಚಾರವನ್ನು ಮನದಟ್ಟು ಮಾಡಿಕೊಳ್ಳುವುದು ಕ್ಷೇಮ.  ಏಕೆಂದರೆ ನಮ್ಮ ಜೀವನ ನಮ್ಮ ಕೈಯಲ್ಲಿ ಇದೆ.  ನಮಗೆ ನಾವೇ ಶತ್ರು, ನಮಗೆ ನಾವೇ ಮಿತ್ರ.ದೇವರು ಕೊಟ್ಟಿದ್ದರಲ್ಲೆ ಸಂತೃಪ್ತಿಪಟ್ಟುಕೊಂಡು ಆಸೆ ಆಮಿಷಕ್ಕೆ ಬಲಿಯಾಗದೆ ಇರುವಷ್ಟು ಕಾಲ ಯಾರಿಗೂ ಹೊರೆಯಾಗದೆ 'ಕೊಡುವ ಕೈ ಕೊಡು ದೇವ, ಬೇಡುವ ಕೈ ಕೊಡಬೇಡ' ಪ್ರಾರ್ಥಿಸುತ್ತ ಸಮಾಜಕ್ಕೆ ನಮ್ಮ ಕೈಲಾದ ಸೇವೆ ಮಾಡುತ್ತ ಆರೋಗ್ಯವನ್ನು ಕಾಪಾಡಿಕೊಂಡು ಎಲ್ಲರೂ ಜೀವನ ನಡೆಸುವಂತಾಗಬೇಕು‌.

ಅನಿಸಿಕೆಗಳು

ಧನಪಾಲ್ ಧನು ಮಂಗಳ, 02/16/2016 - 01:57

ಈಗಿನ ಕಾಲದ ಎಲ್ಲಾರಿಗೂ ಅರ್ಥ ಆಗಿದೆ ಈ ವೇಲ್ಲಾ 

  • 456 views