Skip to main content
ಅಮ್ಮ

ಕೊನೆಯ ಕ್ಷಣ

ಇಂದ Geeta G Hegde
ಬರೆದಿದ್ದುJanuary 21, 2016
5ಅನಿಸಿಕೆಗಳು

ದು ಇಂದಿಗೆ 26ವಷ೯ದ ಹಿಂದೆ ನಡೆದ ಕ್ಷಣ. ಅಮ್ಮನ ಇಡೀ ದೇಹ ರೊಮೈಟೆಡ್ ಅಥ್ಲೆಟಿಕ್ಸ್ ಕಾಯಿಲೆ ಆವರಿಸಿ ನೋವಿನಿಂದ ನರಳುತ್ತ ಹಾಸಿಗೆಯಿಂದ ಏಳಲಾರದ ಪರಿಸ್ಥಿತಿ ಯಲ್ಲಿ ಮಲಗಿದ್ದರು. ರಾತ್ರಿ 8ಕ್ಕೆ ನಾನೇ ಊಟ ಮಾಡಿಸಿ ಮಲಗಿಸಿದ್ದೆ.  ಮಗಳ ಬಾಳಂತನಕ್ಕೆ ಊರಿಗೆ ಹೋದವಳು ಅಮ್ಮ ಇಹಲೋಕದ ಯಾತ್ರೆ ಮುಗಿಸಿದ್ದು ನೋಡುವ ಹಾಗಾಯಿತು. ಅದು ಉತ್ತರಾಯನ ಪುಣ್ಯ ಕಾಲ, ಜನವರಿ ಇಪ್ಪತ್ತು, ಮುತ್ತೈದೆ ಸಾವು.

ಕರೆದುಕೊಂಡು ಹೋಗುವಾಗಲೇ ಅದಾವ ದೈವ ಅವರ ಬಾಯಲ್ಲಿ ಹೇಳಿಸಿತ್ತೊ'ಮಗಳೆ ಐದು ತಿಂಗಳು ಬಾಳಂತನ ಮುಗಿಸಿಕೊಂಡು ಹೋಗು'. ರಾತ್ರಿ 12ಗಂಟೆ ಐದು ತಿಂಗಳು ಮುಗಿದ ವೇಳೆ ನನ್ನ ಕೈಯಾರೆ, 'ಗಂಗಾ ಜಲ ಅರೆಬರೆ ಕುಡಿದು, ಗಂಟಲಲ್ಲಿ ಗೊಟಕ್ ಅನ್ನುವ ಶಬ್ದ, ಕಣ್ಣು ನಿದಾನವಾಗಿ ಮುಚ್ಚಿತು'  ಪ್ರಾಣ ಹೋಗುವ ಸಮಯ ಕಣ್ಣಾರೆ ಕಂಡೆ. ಆ ಸಂಕಟ ಅಳು ಮುಗಿಲು ಮುಟ್ಟಿತು ಕರುಳು ಕಿತ್ತು ಬರುವ ಹಾಗೆ. ಊಹಿಸಿರಲಿಲ್ಲ ಸಾವು!

ಅದುವರೆಗೂ ಓಡಾಡಿಕೊಂಡಿದ್ದವರು ಐದು ತಿಂಗಳು ಮುಗಿಯುವ ನಾಲ್ಕು ದಿನ ಮೊದಲು ಹಾಸಿಗೆ ಹಿಡಿದಿರೋದು ಸಾಯಲು ಹುಲ್ಲುಕಡ್ಡಿ ನೆವ ಬೇಕು ಎಂಬ ಮಾತು ಅಕ್ಷರ ಸಹ ನಿಜ ಆಗೋಯ್ತು. ಎಂಥ ಕಾಕತಾಳೀಯ!

ಸಾವಿನ ನಿಜವಾದ ದುಃಖದ ತೀವ್ರತೆ ನಮ್ಮ ಹತ್ತಿರದವರ ಮರಣದಲ್ಲಿ ತಿಳಿಯುವುದು, ಎಲ್ಲೊ ಓದಿದ ನೆನಪು.  ನಿಜಕ್ಕೂ ಹೌದು. ಸ್ವತಃ ಅನುಭವಿಸಿದೆ. ಹುಟ್ಟಿನಿಂದ ಅಮ್ಮನಿಲ್ಲದ ಪ್ರಪಂಚ  ಹೊಂದಿಕೊಳ್ಳಲು ವಪ೯ಗಳೇ ಬೇಕಾಯಿತು.  ಆ ದಿನಗಳು ಯಾವತ್ತೂ ಮಾಸೋದಿಲ್ಲ.  ಅಮ್ಮನಿಲ್ಲದ ತವರಿಗೆ ಹೋಗುವ ಕಾತರ ಈಗಿಲ್ಲ.

ದಿನ ಕಾಯ೯ ಮುಗಸಿ ವಾಪಸ್ಸು ಬರುವಾಗ ಮಗಳು ಕೈಯಲ್ಲಿ ಹಸು ಗೂಸು ನೆನಪಿಸುತ್ತಾಳೆ ಅಮ್ಮ ನಾನಿದಿನಿ.

1997ರಲ್ಲಿ ಇದೇ ಕಾಯಿಲೆ ನನಗೂ ಬಂತು. 2007 ರವರೆಗೆ ಹೋಮಿಯೊಪತಿ,ಅಲೋಪತಿ,ಆಯುವೆ೯ದಿಕ ಎಲ್ಲ ಔಷಧಿ ತೆಗೆದುಕೊಂಡೆ. ಕಡಿಮೆ ಆಗಲಿಲ್ಲ. ಚಿಕನ್ ಗುನ್ಯಾ,ಸಯಾಟಿಕ(ಸೊಂಟ ನೋವು)ಬಂತು. ಕೆಲಸ ಬಿಟ್ಟೆ. ಕೊನೆಗೊಂದು ದಿನ ಯೋಗಕ್ಕೆ ಸೇರಿದೆ. ನಡೆಯೋಕೆ ಆಗದಿದ್ದವಳು ಕೇವಲ 15ದಿನದಲ್ಲಿ ಮಡಿಕೇರಿ'ಬ್ರಹ್ಮಗಿರಿ' ಬೆಟ್ಟ ಹತ್ತಿ ಬಂದೆ. ಈಗ ಶುಗರ ಬಂದಿದೆ. ಯೋಗದಲ್ಲೇ ಎಲ್ಲ ಕಂಟ್ರೋಲ್ ಇದೆ‌ ಯಾವ ಮಾತ್ರೆ ಇಲ್ಲದೆ.

ನನ್ನ ಸ್ವಂತ ಅನುಭವದಲ್ಲಿ ಪ್ರತಿಯೊಬ್ಬರಿಗೂ ಹೇಳುವುದಿಷ್ಟೆ, ಕಾಯಿಲೆ ಮನುಷ್ಯನಾದವನನ್ನು ಯಾರನ್ನೂ ಬಿಟ್ಟಿಲ್ಲ.  ಅದು ಬಂದಾಗ ದೃತಿಗೆಡದೆ ಸ್ವ ಮನಸ್ಸನಿಂದ ಅದರ ಪರಿಹಾರಕ್ಕಾಗಿ ಛಲ ತೊಡಬೇಕು.  ನಮ್ಮಲ್ಲಿರುವ Willpower ಅಧ೯ ಕಾಯಿಲೆ ಗುಣ ಮಾಡುತ್ತದೆ.  ಆರು ತಿಂಗಳು ಹಾಸಿಗೆ ಹಿಡಿದ ನನ್ನನ್ನು 'ಇವಳೂ ಅಮ್ಮನ ದಾರೀನೆ ಹಿಡಿಯೋದು' ಅಂತ ಆಡಿಕೊಂಡಾಗ ನನ್ನಲ್ಲಿ ಒಂದು ರೀತಿ ಛಲ ,ಈಗ ನಿಮ್ಮ ಮುಂದೆ ಬದುಕಿದ್ದೇನೆ.

ಬಹುಶಃ ಅಮ್ಮನಿಗೂ ಯೋಗದ ಶ್ರೀ ರಕ್ಷೆ ಸಿಕ್ಕಿದ್ದರೆ ಅಕಾಲಿಕ ಮರಣ ಹೊಂದುತ್ತಿರಲಿಲ್ಲವೇನೊ! ನೆನೆದಾಗ ಕಣ್ಣು ಮಂಜಾಗುತ್ತದೆ. ಕೊನೆಯ ಕ್ಷಣ ನೆನಪಾಗುತ್ತದೆ. ಅಮ್ಮಾ....

ಲೇಖನದ ಬಗೆ

ಲೇಖಕರು

Geeta G Hegde

ಸಂಗೀತಾ ಕಲ್ಮನೆ

ನಾನು ಹುಟ್ಟಿದ್ದು ಉತ್ತರ ಕನ್ನಡದ ಚಿಕ್ಕ ಹಳ್ಳಿ.
ಓದಿದ್ದು ಅಲ್ಲಿ ಇಲ್ಲಿ, ಆಗ ಶಾಲೆಯ ಕೊರತೆ.ಕೋ-ಆಪರೇಟಿವ್ ಬ್ಯಾಂಕಿನಲ್ಲಿ 27ವಷ೯ಗುಮಾಸ್ತೆ(Cashier cum Typist)ಆಗಿ ಕೆಲಸ ಮಾಡಿದೆ.ಕಾಯಿಲೆ ಬಂದು ಕೆಲಸ ಬಿಡಬೇಕಾಯಿತು. ದಿನ ನಿತ್ಯ ಯೋಗಾಭ್ಯಾಸದಲ್ಲಿ ಈಗ ನಾ ನಿರೋಗಿ. ಮಧ್ಯೆ ಮದುವೆ, ಮಗಳು, ಸಂಸಾರ ತಾಪತ್ರಯ. ಬುದ್ಧಿ ಬಂದಾಗಿಂದ ಸಾಹಿತ್ಯ ರಚಿಸೋದು ನನ್ನ ಹವ್ಯಾಸ ಈಗ ಪೂತಿ೯ ಅದರಲ್ಲೆ ತೊಡಗಿಸಿಕೊಂಡಿದ್ದೇನೆ. ಇತ್ತೀಚೆಗೆ ಈ ಬರೆಯುವ ಹವ್ಯಾಸ ಹೆಚ್ಚಾಗಿ ನನ್ನದೆ ಬ್ಲಾಗ್ sandhyadeepablog. wordpress. com. ಕನ್ನಡ ಬ್ಲಾಗ್ ಮತ್ತು ಸಂಪದ, ಅವಧಿ, ನಿಲುಮೆ ಕನ್ನಡ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆ. ನನ್ನ ಬರವಣಿಗೆ ಅಲ್ಲೂ ಮನೆ ಮಾಡಿದೆ.

ಅನಿಸಿಕೆಗಳು

Nagendra prasad ಮಂಗಳ, 01/26/2016 - 13:06

ಮೇಡಮ್ ಬೇಸರಿಸಿಕೊಳ್ಳಬೇಡಿ. ಸಾವು ನೋವುಗಳು ಎಲ್ಲರಿಗೂ ಸಾಮಾನ್ಯ. ಸಾವಿಗಿಂತ ಯಾತನಾಮಯವೆಂದರೆ ಅವಮಾನಗಳು. ನೀವು ತುಂಬಾ ಸಾಧನೆ ಮಾಡಿದ್ದೀರಿ. ಧನ್ಯವಾದಗಳು

Geeta G Hegde ಧ, 01/27/2016 - 20:05

     ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಇಲ್ಲಿ ಅಮ್ಮನ ಸಾವು ಹೇಗೆ ಬಂತು, ಅದೇ ಖಾಯಿಲೆಯಿಂದ ನಾ ಹೇಗೆ ಬದುಕುಳಿದೆ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದ ನೋವು ಕಾಡುತ್ತಿತ್ತು. ಹಂಚಿಕೊಂಡೆ. ಛಲವನ್ನು ಪ್ರತಿಯೊಬ್ಬ ರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು ಅನ್ನೋದು ನನ್ನ ಉದ್ದೇಶ.

bhavya amrutha ಮಂಗಳ, 02/02/2016 - 15:23

ನಿಮ್ಮ ಅತ್ಮವಿಶ್ವಾಸಕ್ಕೆ ನನ್ನ ವಂದನೆ.

JAYARAM NAVAGRAMA ಸೋಮ, 02/15/2016 - 17:35

ಸಾವು ಬೇರೆಲ್ಲೊ ಸಂಭವಿಸಿದಾಗ ಅಷ್ಟು ನೋವಾಗದೇನೋ. ಅದು ನಮ್ಮ ನಮ್ಮ ಮನೆಯೊಳಗೇ ಸಂಭವಿಸಿದಾಗ, ಅದೂ ಹೊತ್ತು ಹೆತ್ತು ಸಾಕಿ ಬೆಳೆಸಿದ ತಾಯಿ! ನೆನೆದಾಗಲೇ ಕರುಳು ಕಿತ್ತು ಬರುತ್ತದೆ. ನನ್ನ ಅಮ್ಮ ಮರಣಿಸಿದ ಬಳಿಕ ಪುಚ್ಚೇರಿಗೆ ಹೋಗೋದೆ ಕಡಿಮೆ. ಯಾವತ್ತೋ ಒಮ್ಮೆ ಅಷ್ಟೇ
ಅಮ್ಮಾ ಅಂದರೆ ಅಮ್ಮನೇ ನನಗೆ ಆ ಅನುಭವ ಇದೆ.

Shivayogi ಶುಕ್ರ, 02/19/2016 - 17:54

ನಿಮ್ಮ ಅತ್ಮವಿಶ್ವಾಸಕ್ಕೆ ನನ್ನ ವಂದನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.