Skip to main content

ಭಾಗ೯ವನಿಗೆ ನಮನ

ಇಂದ Geeta G Hegde
ಬರೆದಿದ್ದುDecember 31, 2015
noಅನಿಸಿಕೆ

 

ಉದಯಿಸುವ ಸೂಯ೯

ಹೊಂಗಿರಣ ಬೀರಿ

ಕತ್ತಲೆಯ ಕೋಟೆಯ

ಬೆಳಕಾಗಿಸುತಿಹನು‌.

 

ಶುಭೋದಯದ ಗಾನ

ನನ್ನಿಂದ ಹಾಡಿಸಿ

ದಿನದ ಗಳಿಗೆಗಳೆಲ್ಲ

ಸರ್ವರಿಗೂ ಶುಭವಾಗಲೆಂದು.

 

ಹಚ್ಚು ನೀ ಜ್ಯೋತಿಯನು

ನಿಸ್ವಾಥ೯ದಿಂದ

ಬತ್ತಲಾರದು ಬದುಕು,

ಪ್ರೀತಿಯೇ ಉಳಿಯುವುದೆಂದೆಂದೂ.

 

ಈ ಹೊಸ ವಷ೯ದ

ಬರುವಿಕೆಯೊಂದಿಗೆ

ಹೊಸತನವು ಮೇಳೈಸಿ

ಕಳೆಯಲಿ ಕಾಲವೇಲ್ಲ.

 

ಬನ್ನಿ, ವಿಸ್ಮಯ ನಗರಿಯ

ಬಂದುಗಳೇ ಬನ್ನಿ 

ಭಾಗ೯ವನಿಗೆ ನಮಿಸುವ ಒಂದಾಗಿ,

ಹಳೆ ವಷ೯ಕ್ಕೆ ವಿದಾಯ ಹೇಳಿ.

31-12-2015.

 

 

 

 

 

ಲೇಖಕರು

Geeta G Hegde

ಸಂಗೀತಾ ಕಲ್ಮನೆ

ನಾನು ಹುಟ್ಟಿದ್ದು ಉತ್ತರ ಕನ್ನಡದ ಚಿಕ್ಕ ಹಳ್ಳಿ.
ಓದಿದ್ದು ಅಲ್ಲಿ ಇಲ್ಲಿ, ಆಗ ಶಾಲೆಯ ಕೊರತೆ.ಕೋ-ಆಪರೇಟಿವ್ ಬ್ಯಾಂಕಿನಲ್ಲಿ 27ವಷ೯ಗುಮಾಸ್ತೆ(Cashier cum Typist)ಆಗಿ ಕೆಲಸ ಮಾಡಿದೆ.ಕಾಯಿಲೆ ಬಂದು ಕೆಲಸ ಬಿಡಬೇಕಾಯಿತು. ದಿನ ನಿತ್ಯ ಯೋಗಾಭ್ಯಾಸದಲ್ಲಿ ಈಗ ನಾ ನಿರೋಗಿ. ಮಧ್ಯೆ ಮದುವೆ, ಮಗಳು, ಸಂಸಾರ ತಾಪತ್ರಯ. ಬುದ್ಧಿ ಬಂದಾಗಿಂದ ಸಾಹಿತ್ಯ ರಚಿಸೋದು ನನ್ನ ಹವ್ಯಾಸ ಈಗ ಪೂತಿ೯ ಅದರಲ್ಲೆ ತೊಡಗಿಸಿಕೊಂಡಿದ್ದೇನೆ. ಇತ್ತೀಚೆಗೆ ಈ ಬರೆಯುವ ಹವ್ಯಾಸ ಹೆಚ್ಚಾಗಿ ನನ್ನದೆ ಬ್ಲಾಗ್ sandhyadeepablog. wordpress. com. ಕನ್ನಡ ಬ್ಲಾಗ್ ಮತ್ತು ಸಂಪದ, ಅವಧಿ, ನಿಲುಮೆ ಕನ್ನಡ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆ. ನನ್ನ ಬರವಣಿಗೆ ಅಲ್ಲೂ ಮನೆ ಮಾಡಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.