Skip to main content

ನೆನಪು

ಇಂದ Geeta G Hegde
ಬರೆದಿದ್ದುDecember 26, 2015
noಅನಿಸಿಕೆ

ಭೌತಿಕ ದೇಹದ, ಶೂನ್ಯ ಬದುಕಿನ

ಸವೆಸಿದ ದಿನಗಳ ಲೆಕ್ಕ ಬೇಡವೆಂದರೂ

ಸುತ್ತೆಲ್ಲ ಗೋರಿಗಳ ಸತ್ತ ಜೀವಗಳ ಕರುಹು

ಹಾರಿ ಹಾರಿ ಬಂದು, ಮತ್ತಲ್ಲೆ ಜೀವ ತಳೆದು

ನೆತ್ತರು ಸುರಿಸುತಿದೆ ಹರಿದ ಹಾಳೆಗಳ ಒಡಲಲ್ಲಿ.

ಬಿಡದೆ ಕಾಡಿ ಕೊಲ್ಲುವ, ಕುಳಿತಲ್ಲಿ ನಿಂತಲ್ಲಿ

ಎಲ್ಲೆಂದರಲ್ಲಿ ಅದರದ್ದೆ ಕಾರುಬಾರು,

ಎತ್ತ ನೋಡಿದರೂ ಕೊಳ್ಳಿ ದೆವ್ವಗಳ

ಅಟ್ಟಹಾಸ, ಕೇಕೆ ನಗು

ಸಾಕಾಯ್ತು ಜೀವಕ್ಕೆ

ಹೇಳಿ

ಸೃಷ್ಟಿಯಲ್ಲಿ ಸಿಗುವುದೇ

ಮಡುಗಟ್ಟಿದ ನೆನಪುಗಳ ಕಿತ್ತೊಗೆಯುವ

ಒಂದು ದಿವ್ಯ ಮಂತ್ರ!

26-12-2015.

 

ಲೇಖಕರು

Geeta G Hegde

ಸಂಗೀತಾ ಕಲ್ಮನೆ

ನಾನು ಹುಟ್ಟಿದ್ದು ಉತ್ತರ ಕನ್ನಡದ ಚಿಕ್ಕ ಹಳ್ಳಿ.
ಓದಿದ್ದು ಅಲ್ಲಿ ಇಲ್ಲಿ, ಆಗ ಶಾಲೆಯ ಕೊರತೆ.ಕೋ-ಆಪರೇಟಿವ್ ಬ್ಯಾಂಕಿನಲ್ಲಿ 27ವಷ೯ಗುಮಾಸ್ತೆ(Cashier cum Typist)ಆಗಿ ಕೆಲಸ ಮಾಡಿದೆ.ಕಾಯಿಲೆ ಬಂದು ಕೆಲಸ ಬಿಡಬೇಕಾಯಿತು. ದಿನ ನಿತ್ಯ ಯೋಗಾಭ್ಯಾಸದಲ್ಲಿ ಈಗ ನಾ ನಿರೋಗಿ. ಮಧ್ಯೆ ಮದುವೆ, ಮಗಳು, ಸಂಸಾರ ತಾಪತ್ರಯ. ಬುದ್ಧಿ ಬಂದಾಗಿಂದ ಸಾಹಿತ್ಯ ರಚಿಸೋದು ನನ್ನ ಹವ್ಯಾಸ ಈಗ ಪೂತಿ೯ ಅದರಲ್ಲೆ ತೊಡಗಿಸಿಕೊಂಡಿದ್ದೇನೆ. ಇತ್ತೀಚೆಗೆ ಈ ಬರೆಯುವ ಹವ್ಯಾಸ ಹೆಚ್ಚಾಗಿ ನನ್ನದೆ ಬ್ಲಾಗ್ sandhyadeepablog. wordpress. com. ಕನ್ನಡ ಬ್ಲಾಗ್ ಮತ್ತು ಸಂಪದ, ಅವಧಿ, ನಿಲುಮೆ ಕನ್ನಡ ಬ್ಲಾಗ್ ನಲ್ಲಿ ಬರೆಯುತ್ತಿದ್ದೇನೆ. ನನ್ನ ಬರವಣಿಗೆ ಅಲ್ಲೂ ಮನೆ ಮಾಡಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.