Skip to main content

ಕಾರಣ ಇವಳೇನಾ?.......

ಇಂದ Spurthikashyap
ಬರೆದಿದ್ದುDecember 11, 2015
1ಅನಿಸಿಕೆ

ರಾಗ ಇರದ ಹಾಡಿನಲಿ

ಭಾವಗಳ ತೆರೆದಿಡಬಹುದೆ?

ಆಸೆ ಇರದ ಜೀವದಲಿ

ಹೊಸ ಹುರುಪ ತುಂಬುಹುದು ಹೇಗೆ?

ಮಾತಿನ ಲಹರಿಯ ಒಳಗೆ

ಏತಕೊ ಕದಡಿದೆ ಶ್ರುತಿಯು

ನುಡಿಗಳಲಿ ಏರಿಳಿತಗಳು

ಮೂಡುತಿದೆ ಸ್ಪಂದನೆ ಇರದೆ

       ಇದಕೆಲ್ಲ ಕಾರಣ ಇವಳೇನಾ?.......

 

ಸಾವೇ ಇರದ ಪ್ರೀತಿಯಿದು

ಅವಳಿಗಿದು ತಿಳಿಯದು ಏಕೆ?

ಮುಪ್ಪೇ ಬರದ ಬಂಧವಿದು

ಕಣ್ತೆರೆದು ನೋಡಳು ಏಕೆ?

ಮನಸಿನ ಬೇಲಿಯ ತೆರೆದು

ನನ್ನ ಮನಕೆ ಕಾಲಿಡು ನೀನು

ಬರಡಾದ ಜಾಗಕೆ ಬಂದು 

ಚಿಗುರಿನ ಪರಿಚಯ ನೀಡು

        ನನ್ನ ಸ್ಮಿತಕೆ ಪೂರಕ ನೀನೇನಾ?.........

 

ಸದ್ದೇ ಇರದ ಆದಿಯಿದು

ಅಂತ್ಯಕೆ ನಾಂದಿಯು ಬೇಕೆ?

ಮೌನ ಮುರಿವ ಕ್ಷಣವಿದು

ಹಾದಿಯಲಿ ನೀರವವೇಕೆ?

ಆಗಸದ ಮಡಿಲಿನ ಒಳಗೆ

ಭೂಮಿಯು ಮಲಗಿದೆ ನೋಡು

ನಿನ್ನಯ ಮಡಿಲಿನ ಒಳಗೆ

ನನಗೆ ತುಸು ಜಾಗವ ನೀಡು

         ನನ್ನ ಮನಕೆ ಒಡತಿಯು ನೀನೇನಾ?..........

 

ಲೇಖಕರು

Spurthikashyap

ಅರಳಿದ೦ತರಾಳ:)

:)

ಅನಿಸಿಕೆಗಳು

Geeta G Hegde ಭಾನು, 12/13/2015 - 22:35

ಶಬ್ದ ಜೋಡಣೆ ಚೆನ್ನಾಗಿದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.