Skip to main content

ಹುಚ್ಚು ಮನಸ್ಸೆ

ಇಂದ vishwa.d.hugar
ಬರೆದಿದ್ದುNovember 17, 2015
noಅನಿಸಿಕೆ

 
ಚಂಚಲವೇಕೆ ಹುಚ್ಚು ಮನಸ್ಸೆ 
ಹಾರಡದೇ ಮಂಕಾಗಿ ಮಲಗಿರುವೆ ನೀ ಹೀಗೇಕೆ 
ಸಾವಿರ ಕಲ್ಪನೆಗಳ ಹೂದೋಟ ನಿನ್ನದೆಯಲಿ 
ಚಿಟಿಕೆಯೆಷ್ಟು ಈಡೇರಿತೆನಿಸುವ ಆಸೆಗಳು ವಾಸ್ತವದಲಿ
ಸಾಗರದಾಳದ ಸಂಕಟಗಳು ಸಾಲು-ಸಾಲು ನಿಂತಿವೆ
ಅವುಗಳ ಹಿಂಸೆಯ ನಡುವೆ ನೀ ಹೇಗೆ ಕುಳಿತಿರುವೆ?
ಮಾರ್ಧನಿಸುವ ದನಿ ತರಂಗಗಳ ನಡುವೆ ನಿನ್ನ ಮುಗುಳ್ನಗೆಯಾದರೂ ಹೇಗೆ
ನಿನ್ನೋಡಲ ಸುಡಲು ಕಾತರದಿ ಎದರು ನೋಡುತಿವೆ
ಕಾಣದಿರುವ ಭಾವನೆಗಳು ನಿನ್ನ ಹೊಳಪಾಗಿಸಿವೆ
ಕಾಣುವ ಕನಸುಗಳು ನಿನ್ನ ನೇನಪಾಗಿಸಿವೆ
ನಿನ್ನಂತರಾಳದಲ್ಲಿ ಸಿಹಿ ಜೇನಿನ ಹನಿ ತುಂಬಿರುವಾಗ
ದು:ಖದ ಮುಳ್ಳೊಂದು ಚುಚ್ಚಿ ಕೆಂಪುರಕ್ತವನ ಹರಿಸುತಿದೆ
ಕಣ್ಣಿರ ನೆಪದಲಿ ಆಚೆ ಬಂದು ಬಿಡುವೆಯಾ ನೀ..
ನಿನ್ನ ಹೋತ್ತ  ದೊಡ್ಡ ದೇಹ ನಿನ್ನ ಕಪಿಮುಷ್ಠಿಯಲ್ಲಿದೆ
ನಿನಗಾಗುವ ಸಣ್ಣಗಾಯಕೆ ನರುಳುತಿದೆ
ನಿನಗಾಗುವ ಒಂದು ನೋವಿಗೂ ಅಳುತಾ ದಂಡ ತೆರುತಿದೆ
 ಬದುಕು ಕತ್ತಲೆಗೆ ಸರಿಸುವ ಮುನ್ನ ಒಮ್ಮೆ ತೋರಿಸುವೆಯಾ ಸುಂದರ ಬೆಳಕನ.
                                                                   
                                                                 ವಿಶ್ವನಾಥ.ಡಿ.ಹೂಗಾರ
MOB:9449443484

ಲೇಖಕರು

vishwa.d.hugar

ನನ್ನ ಕನಸಿನ ಹಾದಿಯಾ ಮೇಲೊಂದು ಕವನ

ಮಾನವೀಯತೆ ಮಾನವನ ಗುಣಾ ಅದು ಸಧಾ ನನ್ನ ಜೋತೆಗಿರಬೇಕು,ಇದು ನನ್ನತನ ಕೂಡ ಹೌದು.
ಹಾಗೆಯೆ ನನ್ನೂರು
ಗ್ರಾಮೀಣ ಪ್ರದೇಶ, ಇಲ್ಲಿ ಎಲ್ಲವು ಚೆಂದ ಆದರೆ ಇಂದು ನನ್ನೂರು ಗ್ರಾಮವಾಗಿ ಉಳಿದಿಲ್ಲಾ ಅದು ನಗರೀಕರಣದ ವಾಸ್ತವವಾಗಿ ಬದಲಾಗಿದೆ, ಆದರೂ ಅದು ಚಿಕ್ಕ ಗ್ರಾಮವಾಗಿದೆ ನೋಡಾಲು ಮಾತ್ರ, ಇಂತಹ ಗ್ರಾಮ ನನ್ನ ಹುಟ್ಟೂರು, ಸಿಂಪಲ್ಲಾಗಿ ಇರೋದು ನನ್ನ ಹವ್ಯಾಸ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.