Skip to main content

ನಿನ್ನೊಂದಿಗೆ ಕಳೆದ ಪ್ರತಿ ಕ್ಷಣ.......

ಇಂದ yashaswi thonse
ಬರೆದಿದ್ದುSeptember 4, 2015
noಅನಿಸಿಕೆ

ನಿನ್ನೊಂದಿಗೆ ಕಳೆದ ಪ್ರತಿ ಕ್ಷಣ

ಮರಣ ಶಯ್ಯೆಯ ಮೇಲೆಯೂ ಮರೆಯಲಾರೆನು ನಾ....

ಒಂದೊಂದು ಕ್ಷಣವೂ

ಒಂದೊಂದು ಯುಗದಂತೆ

ನೋಟದಲ್ಲೇ ನೀ ನನ್ನ ಸೆರೆ ಹಿಡಿದ ಆ ಕ್ಷಣ 

ನಾ ಮೋಹಗೊಂಡ ಆ ಕ್ಷಣ

ನೀ ನನ್ನ ಬಳಸಿದ ಆ ಕ್ಷಣ

ಪರಿವೆಯೇ ಇಲ್ಲದೆ ಇಬ್ಬರೂ ಚುಂಬಿಸಿದ ಆ ಕ್ಷಣ

ಯಾವುದು ನ್ಯಾಯವೋ....

ಯಾವುದು  ಭಾವವೋ....

ಇಬ್ಬರಿಗು ತಿಳಿಯಲಿಲ್ಲ

ಹಗಲೋ ಇರುಳೋ

ಪರಾಂಭರಿಸುವ ಗೋಜಿಗೆ ಹೋಗಲಿಲ್ಲ

ಯಾರ ಆರಂಭ ಯಾರ ಮುಕ್ತಾಯ 

ಯಾರು ಯೋಚಿಸಲಿಲ್ಲ....

ಮೋಹವೋ... ಪ್ರೀತಿಯೋ...

ಇಬ್ಬರೂ ಜೊತೆಗೂಡಿದೆವು

ಇದುವರೆಗು ಪ್ರಶ್ನೆಯಿಲ್ಲ...

ನಿನ್ನೊಂದಿಗೆ ಕಳೆದ ಪ್ರತಿ ಕ್ಷಣ

ಮರಣ ಶಯ್ಯೆಯ ಮೇಲೆಯೂ ಮರೆಯಲಾರೆನು ನಾ....

(ಮೂಲಃ ತಮಿಳು ಕವಿತೆಯಿಂದ ಪ್ರೇರೆಪಿತ)

ಲೇಖಕರು

yashaswi thonse

unpredictable...

ಕನಸು... ಕನಸುಗಾತಿ ನಾನು, ಭಾವ ಜೀವಿ ಕೂಡ... ತರ್ಕಕ್ಕೆ ನಿಲುಕದವಳು....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.