Skip to main content

ಕಲಾಂ... ಸಲಾಂ..

ಇಂದ ಹಕೀಂ
ಬರೆದಿದ್ದುJuly 28, 2015
noಅನಿಸಿಕೆ

ಅಸ್ತಮಿಸಿದಾಗ ಸೂರ್ಯನು,
ಮರೆಯಾಯಿತು ತೇಜನು..

ಮಿನುಗಿದಾಗ ತಾರೆಗಳು,
ಶೋಭಿಸಿತು ನೆನಪುಗಳು..

ಭೂಮಿಯು ಅತ್ತಾಗ,
ಬಾನಂಗಳವು ನಕ್ಕಿತು..

ಕಲಾಮರ ವಿದಾಯದಿಂದ,
ಜನ ಮನಸ್ಸುಗಳು ಮಿಡಿಯಿತು..

ಅರಳಿದ್ದ ಹೂವುಗಳು
ಬಾಡಿ ಹೋಗಿತ್ತು..

ಹಸಿರಾದ ಎಲೆಗಳು,
ಉದುರಿ ಬಿದ್ದಿತ್ತು..

ಮಲ್ಲಿಗೆಯ ಸುವಾಸನೆ,
ಎಲ್ಲೆಡೆ ಹಬ್ಬಿತ್ತು..

ಆಗಲೇ,, ಕ್ಷಿಪಣಿ ಪಕ್ಷಿ
ಹಾರಿ ಹೋಗಿತ್ತು..

ಕಲಾಮರ ಪಾವನ
ಜೀವನವು ಕಾಲವಾಯಿತು..

ನೆನಪುಗಳು ಮಾತ್ರವೇ
ಅಳಿದುಳಿದಿತ್ತು..

ಭಾರತೀಯರ ಕಣ್ಣ ರೆಪ್ಪೆಗಳು,
ಅದಾಗಲೇ ಒದ್ದೆಯಾಗಿತ್ತು..

#ಸರ್_ಕಲಾಂ, ನಿಮ್ಮ ಶರೀರ ನಮ್ಮಿಂದ ಮರೆಯಾದರೂ, ನಿಮ್ಮ ಸಾಧನೆಯನ್ನು, ನಿಮ್ಮ ಪರಿಶ್ರಮವನ್ನು ನಾವೆಂದೂ ಮರೆಯಲಾರೆವು..
ಕಲಾಮರ ಕನಸುಗಳನ್ನು ಸಾಕಾರಗೊಳಿಸಲು ನಾವೆಲ್ಲರೂ ಒಂದಾಗೋಣ..

ಜೈ ಕಲಾಂ..
ತಮಗಿದೋ ಸಲಾಂ..

#ಹಕೀಂ_ಪದಡ್ಕ

ಲೇಖಕರು

ಹಕೀಂ

ಹಕೀಂ.ಪದಡ್ಕ

ನಾನು ನಾನೇ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.