Skip to main content

ಬಾಹುಬಲಿ ಸಿನಿಮಾ ಕರ್ನಾಟಕದಲ್ಲಿ ಸೂಪರ್ ಹಿಟ್??

ಬರೆದಿದ್ದುJuly 24, 2015
noಅನಿಸಿಕೆ

"ಬಾಹುಬಲಿ ಸಿನಿಮಾ ಮೊದಲ ಹತ್ತು ದಿನದಲ್ಲಿ ೫೦ ಕೋಟಿ ಹಣ ಕರ್ನಾಟಕದಲ್ಲಿ ಗಳಿಸಿದೆ" ಬೆಂಗಳೂರು ಮಿರರ್ ರಿಪೋರ್ಟ್ ನೋಡಿ ದಂಗಾದೆ.

ಆ ರಿಪೋರ್ಟ್ ಪ್ರಕಾರ ಬಾಹುಬಲಿ ಅಂದಾಜು ಗಳಿಕೆ ಮೊದಲ ಹತ್ತು ದಿನ ಹೀಗಿದೆ.

ಕರ್ನಾಟಕ - ೫೦ ಕೋಟಿ

ತಮಿಳು ನಾಡು - ೩೦ ಕೋಟಿ

ಹಿಂದಿ ಬೆಲ್ಟ್ - ೬೦ ಕೋಟಿ

ಕೇರಳ - ೧೦ ಕೋಟಿ

ಗಮನಿಸಿ ಎಲ್ಲಾ ಹಿಂದಿ ರಾಜ್ಯಗಳಲ್ಲಿ ಅದರ ಗಳಿಕೆ ಕೇವಲ ೬೦ಕೋಟಿ ಮಾತ್ರ. ಆದ್ರೆ ಕರ್ನಾಟಕ ಒಂದರಲ್ಲೆ ೫೦ಕೋಟಿ! ಇನ್ನೊಂದು ವಿಷಯವಿದೆ. ಆಂಧ್ರದಲ್ಲಿ ತೆಲುಗಲ್ಲಿ, ಉತ್ತರ ಭಾರತದಲ್ಲಿ ಹಿಂದಿಯಲ್ಲಿ, ತಮಿಳು ನಾಡಿನಲ್ಲಿ ತಮಿಳಲ್ಲಿ, ಕೇರಳದಲ್ಲಿ ಮಲೆಯಾಳಂ ಅಲ್ಲಿ ಅಲ್ಲಿನ ಜನ ನೋಡಿದ್ದಾರೆ. ಕನ್ನಡದ್ದೇ ಆದ ರಂಗಿತರಂಗ ಬರೀ ೨ ಕೋಟಿ ಗಳಿಸಿದೆ ಅನ್ನುವ ವರದಿ ಇದೆ!

ಆದರೆ ಕರ್ನಾಟಕದಲ್ಲಿ ಯಾವ ಯಾವ ಭಾಷೆಯಲ್ಲಿ ಎಷ್ಟು ಜನ ನೋಡಿದ್ದಾರೊ ಗೊತ್ತಿಲ್ಲ ಆದರೆ ಆ ಲಿಸ್ಟ್ ಅಲ್ಲಿ ಕನ್ನಡದ ಸುಳಿವು ಇರಲ್ಲ ಬಿಡಿ. ನಾವು ಡಬ್ಬಿಂಗ್ ವಿರೋಧಿಸಿ ತಪ್ಪು ಮಾಡುತ್ತಿದ್ದೇವೆಯೆ?

ಇನ್ನೊಂದು ವಿಷಯ ಇದು ಕೇವಲ ಬಾಹುಬಲಿ ಸಿನಿಮಾ ಕಲೆಕ್ಷನ್ ಆದ್ರೆ ಪರವಾಗಿಲ್ಲ. ಆದರೆ ಇದು ದೂರಗಾಮಿ ಪರಿಣಾಮ ಬೀರಲಿದೆ. ಕರ್ನಾಟಕದಲ್ಲಿ ತೆಲುಗು ಸಿನಿಮಾಗೆ ಇನ್ನಷ್ಟು ಹೊಸ ವೀಕ್ಷಕರು ಹೆಚ್ಚಲು, ಟಿವಿಯಲ್ಲಿ ಬಾಹುಬಲಿ ಬಂದಾಗ ಅದನ್ನು ಮತ್ತೆ ವೀಕ್ಷಿಸಲು ಕಾರಣ ಆದೀತು. ಬಾಹುಬಲಿ ಭಾಗ ೨ ಕೂಡಾ ಹೀಗೆ ಹಣ ಗಳಿಸಬಹುದು.

ಈ ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿದ್ದರೆ ಅದನ್ನು ಕನ್ನಡ ಭಾಷೆಯಲ್ಲಿ ಜನ ನೋಡಿದ್ದರೆ ಕನ್ನಡದ ಬೆಳವಣಿಗೆಗೆ ಕೊಡುಗೆ ನೀಡುತಿತ್ತು ಅನ್ನುವದು ನನ್ನ ಅನಿಸಿಕೆ.

ಇತ್ತೀಚೆಗೆ ಬಿಡುಗಡೆ ಆದ ಬಜರಂಗಿ ಭಾಯಿಜಾನ್ ಕೂಡಾ ಮೊದಲ ವೀಕೆಂಡ್ ಅಲ್ಲಿ ೪.೫ ಕೋಟಿಗೂ ಹೆಚ್ಚು ಕರ್ನಾಟಕದಲ್ಲಿ ಗಳಿಸಿದೆ.

ಇತರ ಭಾಷೆಗಳ ಸಿನಿಮಾ ಈ ರೀತಿ ಗಳಿಸಲು ಮುಖ್ಯ ಕಾರಣ ಅವು ಹೆಚ್ಚು ಮಲ್ಟಿಪ್ಲೆಕ್ಸ್ ಅಲ್ಲಿ ಓಡುವದು, ಅವುಗಳಲ್ಲಿರುವ ದೃಶ್ಯ ವೈಭವತೆ. ಇಂದು ಟಿವಿ ಮನೋರಂಂಜನೆಗೆ ಒಗ್ಗಿ ಹೋಗಿರುವ ಜನರನ್ನು ಬರ ಸೆಳೆಯಲು ಅಧ್ಧೂರಿ ಸಿನಿಮಾಗಳು ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಕಾಲದಲ್ಲಿ ಟಿವಿಗಳಿಂದ ಪೆಟ್ಟು ತಿಂದ ಹಾಲಿವುಡ್ ಮೇಲೆ ಬಂದಿದ್ದು ದೊಡ್ಡ ತೆರೆಗಳ ಮೇಲೆ ಆನಂದಿಸಬಹುದಾದ ಅದ್ಧೂರಿ ಸಿನಿಮಾಗಳ ಮೂಲಕ. ಕನ್ನಡದ ಸೀಮಿತ ಮಾರುಕಟ್ಟೆಯಿಂದಾಗಿ ಅದ್ದೂರಿ ಸಿನಿಮಾ ಮಾಡಿದರೆ ನಿರ್ಮಾಪಕ ಮನೆ ಮಠ ಮಾರಬೇಕಾಗಿ ಬರುವದು ಖಚಿತ. ಡಬ್ಬಿಂಗ್ ಒಂದೇ ಇದಕ್ಕೆ ಸುಲಭ ಮಾರ್ಗ.

ಕರ್ನಾಟಕಾದ್ಯಂತ ನಡೆಯುತ್ತಿರುವ ಇಂಗ್ಲಿಷ್ ಶಿಕ್ಷಣ ಮಾಧ್ಯಮ ಕ್ರಾಂತಿ ಗಮನಿಸಿದಾಗ ಕರ್ನಾಟಕದಲ್ಲಿ ಇಂಗ್ಲಿಷ್ ಸಿನಿಮಾಗಳು ಬೆಳೆದು ಕನ್ನಡ ಸಿನಿಮಾಗಳಿಗೆ ಕಾಂಪಿಟೇಶನ್ ಕೊಡುವ ದಿನ ತುಂಬಾ ದೂರವಿಲ್ಲ.

ನಿಮ್ಮ ಅನಿಸಿಕೆ ಕಮೆಂಟ್ ಹಾಕಿ.

ಮಾಹಿತಿಃ

http://www.bangaloremirror.com/entertainment/south-masala/Has-Bahubali-smashed-state-BO-record/articleshow/48179414.cms

http://www.bollymoviereviewz.com/2015/07/bajrangi-bhaijaan-territorial-breakdown.html

 

 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.