ಎಡವಟ್ಟಾಯ್ತು... ತಲೆಕೆಟ್ಟೊಯ್ತು..!
"ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬಿಡಿಗಾಸು ಬಂದಿಲ್ಲ" ರಾಜ್ಯ ಸರ್ಕಾರದ ಸಚಿವರೊಬ್ಬರ ಆಲಾಪ..!
"ನಮ್ಮ ರಾಜ್ಯಕ್ಕೆ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ"..! ಕೇಂದ್ರ ಸರ್ಕಾರದ ಸಚಿವರೊಬ್ಬರ ಹೇಳಿಕೆ..!
"ನಮ್ಮ ರಾಜ್ಯಕ್ಕೆ ಕಳೆದ ವರ್ಷದ ಅನುದಾನಕ್ಕಿಂತ ಅರ್ಧದಷ್ಟು ಕಡಿಮೆ ಅನುದಾನ ಕೇಂದ್ರ ಬಿಡುಗಡೆ ಮಾಡಿದೆ"..! ಮತ್ತೊರ್ವ ರಾಜ್ಯ ಸರ್ಕಾರದ ಸಚಿವನ ಸಿಡಿಮಿಡಿ..!
"ಕೇಂದ್ರ ಸರ್ಕಾರ ಕಳೆದ ವರ್ಷಕ್ಕಿಂತ ಏರಡು ಪಟ್ಟು ಹೆಚ್ಚಿನ ಅನುದಾನ ನಮ್ಮ ರಾಜ್ಯಕ್ಕೆ ನೀಡಿದೆ".. ಕೇಂದ್ರ ಸರ್ಕಾರದ ಸಚಿವರ ಸಮಜಾಯಿಷಿ..!
ಯಾವುದು ಸತ್ಯ ಯಾವುದು ಮಿಥ್ಯ..! ಭಟ್ಟರ ಹಾಡಿನಂತೆ ಎಡವಟ್ಟಾಯ್ತು... ತಲೆಕೆಟ್ಟೊಯ್ತು.. ಉಪ್ಪು ಖಾರ ತಿಂದ ಪ್ರಜೆಗೆ ಬಾಯಿ ಬಡಕ್ಕೊಳ್ಳಂಗಾಯ್ತು.! ಅಂತಾ ನಾವೆಲ್ಲ ಸೇರಿ ಕಮಂಗಿಗಳ ತರಹ ಕೋರಸ್ ಹಾಡುವಂಗಾಯ್ತು ನೋಡಿ..!
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ,ಮಂತ್ರಿ,ಮುಖ್ಯಮಂತ್ರಿ ತಮ್ಮ ಸ್ಥಾನದ ಘನತೆ ಏನು ಅನ್ನೊದನ್ನೆ ಮರೆತು ಉಢಾಳರಂತೆ ಉಢಾಫೆಯ ಮಾತಾಡ್ತರಲ್ಲ..? ಒಬ್ಬರಲ್ಲಾದರೂ ( ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆಲವು ಸಮರ್ಥ ನಾಯಕರ ಹೊರತು ) ದೇಶ ಪ್ರೇಮದ ಘಮಲು ಇದೇಯಾ...? ಬರಿ ಸ್ವಾರ್ಥ..! ಅಸಲಿಗೆ ಯಾವುದೇ ಸರ್ಕಾರದ ಯೋಜನೆಯ ಬಗ್ಗೆ ಪರಿಪೂರ್ಣ ಮಾಹಿತಿ ಅವರಿಗಿರೊದಿಲ್ಲ..! ಯಾರೊ ಅಧಿಕಾರಿಗಳು ಕೊಟ್ಟ ಅರ್ಧಂಬರ್ಧ ಮಾಹಿತಿ ಮೇರೆಗೆ ಸಾರ್ವಜನಿಕವಾಗಿ ಬುರುಡೆ ಬಿಡುತ್ತಾರೆ..! ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದೆನೆಂಬ ಅಂಜಿಕೆ ಅಳುಕು ಲವಲೇಶವು ಅವರಲ್ಲಿರೊದಿಲ್ಲ..! ಹೋಗಲಿ ತಮ್ಮ ಆತ್ಮಸಾಕ್ಷಿಗಾದ್ರೂ ಅಂಜುತ್ತಾರಾ..? ಊಹು..ಅದಿದ್ದರೆ ತಾನೆ..? ತಮ್ಮ ಆತ್ಮಸಾಕ್ಷಿಯನ್ನು ಎಂದೂ ಯಾವತ್ತೊ.. ಅದ್ಯಾರಿಗೊ ಅದೇಷ್ಟೊ ಕೋಟಿಗೊ ಮಾರಿಕೊಂಡಿರುತ್ತಾರೆ..! ಇನ್ನೆಲ್ಲಿಯ ಆತ್ಮಸಾಕ್ಷಿ ಅವರಿಗೆ..? ದೇಶ ಪ್ರೇಮ ಅನ್ನೊದಂತೂ ಕೇಳಲೆಬೇಡಿ...ಒಟ್ಟಿನಲ್ಲಿ.. ರಾಜ್ಯ ದೇಶ ಎಕ್ಕುಟ್ಟಿ ಹೋದ್ರು ಚಿಂತೆಯಿಲ್ಲ ತಮ್ಮ ತಮ್ಮ ಬೇಳೆಕಾಳು ಬೇಯುತ್ತಿರಬೇಕು ಅನ್ನೊ ಆದರ್ಶ ಅವರಿಗೆಲ್ಲಾ..! ಎಲ್ಲಿಗೆ ಬಂತಪ್ಪ ನಮ್ಮ ಪ್ರಜಾಪ್ರಭುತ್ವದ ಮಹಿಮೆ..!
ನಮ್ಮ ರಾಜ್ಯದಲ್ಲಿ ಆಡಳಿತ ಪಕ್ಷದ ಕೆಲವರಿದ್ದಾರೆ.... ಕೆಲವು ವಿಷಯಗಳ ಬಗ್ಗೆ ಉಗ್ರವಾಗಿ ಮಾತಾಡ್ತಾರೆ..ಬಹಿರಂಗ ಸವಾಲ್ ಹಾಕ್ತಾರೆ..ಸಾರ್ವಜನಿಕ ಚರ್ಚೆಗೆ ಒಬ್ಬ್ರನ್ನೊಬ್ಬರು ಅಹ್ವಾನಿಸುತ್ತಾರೆ..! ಮೂಗಿನ ಮೇಲೆ ಬೆರಳಿಟ್ಟುಕೊಂಡು ನೀವು ಅವ್ರನ್ನೆನು ಸತ್ಯಹರಿಶ್ಚಂದ್ರನ ತುಂಡು ಅಂದುಕೊಂಡಿದ್ದಿರೇನು..? ಮಂಕುಬೂದಿ ಏರಚೊದಂದ್ರೆ ಇದೆ ನೋಡಿ..ಅವರೆಲ್ಲಾ ಪಕ್ಕಾ ಉತ್ತರಕುಮಾರನ ವಂಶದವರು ..! ಚರ್ಚೆಗೆ ಕರೆದರೆ ಸಿನಿಮಾ ಶೈಲಿಯಲ್ಲಿ ಎಸ್ಕೆಪ್ ಆಗಿಬಿಡ್ತಾರೆ...ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆಯಲ್ಲ ಅದಕ್ಕೆ ಅವರದೆನಿದ್ದರೂ ಹಿಟ್ & ರನ್ ಪಾಲಿಸಿ...! ಅದೇ ಪಕ್ಷದ ಕೇಂದ್ರದ ನಾಯಕರೊಬ್ಬರು ಪುಟ್ಟ ಶಾಲಾ ಬಾಲಕನಂತೆ ಅದೇ ರಾಗ ಅದೇ ಹಾಡು ಹೇಳೊದನ್ನು ದಿನವೂ ನೋಡ್ತಿದ್ದಿರಲ್ಲ..? ಇದನ್ನೆಲ್ಲಾ ನಾವು ಇಂಗು ತಿಂದ ಮಂಗನ ಹಾಗೆ ಇವರಾಡೊ ನಾಟಕ ನೋಡುತ್ತಿರಬೇಕಷ್ಟೆ..
ಮೊದಲು ನಮ್ಮ ದೇಶ..ಅಮೇಲೆ ಪಕ್ಷ..ನಂತರವಷ್ಟೆ ನಾನು ಅನ್ನುವ ಸಿದ್ದಾಂತ ಯಾರಿಗಾದ್ರೂ ಇದೇಯಾ...? ಮೊದಲು ನಾನು ಅಮೇಲೆ ಪಕ್ಷ..ನಂತರ ಏನಾದ್ರೂ ಉಳಿದಿದ್ರೆ ದೇಶ ಅನ್ನುವ ಕಿರಾತಕ ಸಿದ್ದಾಂತ ಅವರದು..! ಅದಿಕ್ಕೆ ನೋಡಿ ನಾವೆಲ್ಲಾ ಎಡವಟ್ಟಾಯ್ತು...ತಲೆಕೆಟ್ಟೊಯ್ತು...ಅನ್ಕೊತಾ ತಲೆ ಚಚ್ಕೊಬೇಕಷ್ಟೆ..!
ಸಾಲುಗಳು
- 402 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ