ಕೃಷಿ 1
ಕೃಷಿ! (ಭಾಗ 1)
''ಏನು ಭುಜಂಗಣ್ಣಾ, ಚೆನ್ನಾಗಿದ್ದೀರಾ?"
ಮುದ್ದಣ್ಣನವರು ಬದಿಗೆ ಸರಿಯದೇ ಕೇಳಿದರು.
ಭುಜಂಗಣ್ಣ ಮುದ್ಧಣ್ಣನನ್ನು ಒಮ್ಮೆ ಅಡಿಯಿಂದ ಮುಡಿವರೆಗೆ ನೋಡಿದರು. ಅರಡಿ ದೇಹದ ಮುದ್ದಣ್ಣ ಕಟ್ಟುಮಸ್ತಾದ ಆಳು. ಪ್ರಾಯ ಅರವತ್ತು ಆಗಿದೆ. ಕೂದಲು ಈಗಲೂ ಕಪ್ಪು ಕಪ್ಪಾಗಿ ದಟ್ಟವಾಗಿಯೇ ಇದೆ!!..
ಅವರಿಬ್ಬರೂ ರಸ್ತೆಯನ್ನು ಅಡ್ಡಡ್ಡ ನುಂಗಲು ಬಂದಿರುವ ಆ ಕೆಸರು ತುಂಬಿದ ಕಿರುದಾರಿಯಲ್ಲಿ ಒಬ್ಬರಿಗೊಬ್ಬರು ಎದುರಾಗಿದ್ದರು.
"ಬೆಳೆ ಎಲ್ಲ ಹೇಗುಂಟು ಮುದ್ದೂ?"
"ಓ.. ಚೆನ್ನಾಗಿದೆ. ಕೊಯ್ಯೋದಿಕ್ಕೆ ಆಳುಗಳದೇ ಸಮಸ್ಯೆ..
ಆಗುವುದಿಲ್ಲಪ್ಪಾ, ಈಗಿನ ಕೂಲಿ ಆಳುಗಳೋ! ಅವರ ಪ್ಯಾಷನ್ನೊ! ಒಂಭತ್ತಕ್ಕೆ ಬಂದರೆ ಐದಕ್ಕೆ ವಾಪಸ್! ನಲ್ವತ್ತು ಸೂಡಿ ಕೊಯ್ಯುವ ಮೊದಲೇ ಮುವತ್ತು ಕಾಲ್ ರಿಸೀವ್ ಮಾಡಿರುತ್ತಾರೆ. ಐವತ್ತು ಮೆಸೆಜ್ ಕಲಿಸಿರುತ್ತಾರೆ."
"ಅದಕ್ಕೇ ನಾನು ಪೂರ್ತಿ ರಬ್ಬರ್ ಹಾಕಿಬಿಟ್ಟೆ.."
ಬೀಜದ ಫ್ಯಾಕ್ಟರಿಗೆ ಹೊರಟ ಐದಾರು ಹುಡುಗಿಯರು ಆ ದಾರಿಯಲ್ಲಿ ಬಸ್ಗೆಂದು ಓಡು ನಡಿಗೆಯಲ್ಲಿ ಬರುವುದು ಕಂಡು ಇಬ್ಬರೂ ಕೊಂಚ ಸರಿದು ನಿಂತರು.
ಈಗ ಮುದ್ದಣ್ಣ ತನ್ನ ಬಲಗೈಯನ್ನು ಕಂಪೌಂಡಿಗಾನಿಸುತ್ತಾ ನಡುಬೆರಳ ಹರಳುಂಗುರದ ಪ್ರದರ್ಶನಕ್ಕೆ ಅಣಿಯಾದರು.
ಇದನ್ನು ಗಮನಿಸಿದ ಭುಜಂಗಣ್ಣ 'ಥುತ್, ಸೆಕೆ' ಎನ್ನುತ್ತ ಎದೆಯ ಎರಡು ಬಟನ್ ತೆಗೆದು ಎದೆ ಪ್ರದರ್ಶನಕ್ಕಿಟ್ಟರು
ಸಾಲುಗಳು
- 518 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ