Skip to main content

ಸಮರ್ಥ ನಾಯಕ.... ಸಂಮೃದ್ದ ಭಾರತ..!

ಇಂದ Praveen kumar
ಬರೆದಿದ್ದುApril 17, 2015
noಅನಿಸಿಕೆ

   ದೇಶದಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ..! ನಿಂತಲ್ಲೆ ನಿಂತು ಜಡ್ಡುಗಟ್ಟಿದ್ದ ವ್ಯವಸ್ಥೆ ನಿಧಾನವಾಗಿ ಚಲಿಸಲು ಪ್ರಾರಂಭಿಸಿದೆ..! ಆಕಳಿಸಿಕೊಂಡು ನಿದ್ರಾವಸ್ಥೆಯಲ್ಲಿದ್ದ ಆಡಳಿತಶಾಹಿ ಅಧಿಕಾರಿ ವರ್ಗ ಗಡದ್ದು ನಿದ್ರೆಯಿಂದ ಎಚ್ಚೆತ್ತು ಮೈ ಕೊಡವಿಕೊಂಡಿದೆ..! ಇನ್ನೂ ಎಲ್ಲಿ ಬಂದೈತ್ರಿ ಅಚ್ಚೆ ದಿನ್ ಅಂತಾ ಆ ಜಡ್ಡು ವ್ಯವಸ್ಥೆಯಲ್ಲೆ ಸುಖದ ಸೋಪಾನ ಕಂಡಿದ್ದ ಹೋಣೆಗೇಡಿ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ..! ಸುಳ್ಳು ಭರವಸೆಗಳನ್ನು ಕೊಟ್ಟು ಮತದಾರನ್ನೆಲ್ಲಾ ಮಂಗ ಮಾಡಿದ್ದ ರಾಜಕಾರಣಿಗಳಿಗೆ ಕನಸಲ್ಲೂ ನರೇಂದ್ರ ಮೋದಿನ ಕಂಡ್ರೆ ಬೆಚ್ಚಿ ಬೀಳುವಂತಾಗಿದೆ..!

    ಒಂದೇ ಒಂದು ಕ್ಷಣ ಪ್ರಾಮಾಣಿಕವಾಗಿ ಪ್ರಾಂಜಲ ಮನಸ್ಸಿನಿಂದ ಯೋಚಿಸಿ ನಮ್ಮ ದೇಶ ಯಾಕಿಷ್ಟು ಹದಗೆಟ್ಟು ಹೋಗಿತ್ತು.. ಸಮಾಜದಲ್ಲಿ ಒಳ್ಳೆಯ ಗುಣಗಳಿಗಿಲ್ಲದ ಮಾನ್ಯತೆ... ಹಣಕ್ಕೆ ಮಾತ್ರ ಯಾಕೆ ಸಿಕ್ಕಿತು..? ಭ್ರಷ್ಟಚಾರಿಗಳು,ಸಮಾಜ ಘಾತುಕರು,ಕಳ್ಳರು ದರೋಡೆಕೊರರೆಲ್ಲಾ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಅನಿಸಿಕೊಂಡರಲ್ಲ ಅದು ಹೇಗೆ ಸಾಧ್ಯವಾಯ್ತು...? ಪ್ರಾಮಾಣಿಕರೆಲ್ಲ ನಿಷ್ಪ್ರಯೋಜಕರಾಗಿ... ಅಪ್ರಾಮಾಣಿಕರೆಲ್ಲ ಹೇಗೆಲ್ಲಾ  ಸಮಾಜದಲ್ಲಿ ಮೇರೆದಾಡಿದ್ರು...? ನಿಜ ತಾನೆ.... ? ಒಂದಲ್ಲ ಒಂದು ದಿನ ನಮಗೆ ನಾವೇ ಈ ಪ್ರಶ್ನೆಗಳಿಗೆಲ್ಲ ಉತ್ತರ ಕೊಡಲೇಬೇಕಲ್ಲವೇ...? ಹೌದು.. ಅಷ್ಟಕ್ಕೂ ನಾವು ನಮ್ಮ ಮುಂದಿನ ಪೀಳಿಗೆಗೆ ಏನೂಂತ ಉತ್ತರ ಕೊಡಬಲ್ಲೆವು..?

    ಒಂದು ಒಳ್ಳೆಯ ಮನಸ್ಸು ಒಳ್ಳೆಯ ವ್ಯಕ್ತಿತ್ವವನ್ನು ಹುಟ್ಟು ಹಾಕಬಲ್ಲದು... ಒಂದು ಒಳ್ಳೆಯ ವ್ಯಕ್ತಿತ್ವ ಒಂದು ಒಳ್ಳೆಯ ಕುಟುಂಬವನ್ನು ಸೃಷ್ಟಿಸಬಲ್ಲದು... ಒಂದು ಒಳ್ಳೆಯ ಕುಟುಂಬ ಒಂದು ಒಳ್ಳೆಯ ಸಮಾಜವನ್ನು ಸೃಷ್ಟಿಸಬಲ್ಲದು...ಒಂದು ಒಳ್ಳೆಯ ಸಮಾಜ ಒಂದು ಒಳ್ಳೆಯ ದೇಶವನ್ನು ಸೃಷ್ಟಿಸಬಲ್ಲದು..ಒಂದು ಒಳ್ಳೆಯ ದೇಶ ಒಂದು ಒಳ್ಳೆಯ ಪ್ರಪಂಚವನ್ನೆ ನಿರ್ಮಿಸಬಲ್ಲದು... ಅಲ್ಲವೇ..?  ಹಾಗಿದ್ರೆ ನಾವು ಎಡವಿದ್ದೆಲ್ಲಿ..?  ಎಲ್ಲದಕ್ಕೂ ಮೂಲ ನಮ್ಮ ವ್ಯಕ್ತಿತ್ವ ತಾನೆ..?  ಅಂತಹ ನಮ್ಮ ವ್ಯಕ್ತಿತ್ವವನ್ನು ಕಾಪಿಡಲು ಯಾಕೆ ನಾವು ಪ್ರಯತ್ನಿಸುತ್ತಲೇ ಇಲ್ಲ..? ನಮ್ಮ ಇಂತಹ ಹೀನ ಮನಸ್ಥಿತಿಗೆ ಕಾರಣ ಯಾರು..?  

    ಉತ್ತರ ನಮಗೆಲ್ಲಾ ಸ್ಪಷ್ಟವಾಗೆ ಗೊತ್ತಿದೆ.. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ನ ದುರಾಡಳಿತ...! ಭ್ರಷ್ಟಚಾರ, ವಂಶಾಡಳಿತ, ಅಧಿಕಾರ ಮೋಹ,ಸ್ವಜನ ಪಕ್ಷಪಾತ,ಓಲೈಕೆ ರಾಜಕಾರಣ..!! ಒಂದಾ...ಏರಡಾ...? ದೇಶದ ಜನರ ಮನಸ್ಥಿತಿಯನ್ನು ಹಾಳು ಮಾಡಿ ಅದರ ಮೇಲೆ ಅಧಿಕಾರದ ಕೋಟೆ ಕಟ್ಟಿದ ಕಾಂಗ್ರೆಸ್ ಇವತ್ತಲ್ಲ ನಾಳೆಯಾದ್ರೂ ಜನಸಾಮಾನ್ಯರ ಪ್ರಶ್ನೆಗೆ ಉತ್ತರ ಕೊಡಲೇಬೇಕು..! ಭ್ರಷ್ಟಾಚಾರವನ್ನೆ ಹಾಸಿ ಹೊದ್ದು ಮಲಗಿದ ಕಾಂಗ್ರೆಸ್ ಗೆ ದೇಶದ ಹಿತಕ್ಕಿಂತಾ ತನ್ನ ಹಿತವೇ ಮುಖ್ಯವಾಗಿತ್ತು..! ತನ್ನ ಕೈಲಿ ಎಷ್ಟೆಲ್ಲಾ ಸಾಧ್ಯವೋ ಅಷ್ಟೆಲ್ಲ ವ್ಯವಸ್ಥೆಯನ್ನು ಹಾಳುಗೆಡುವಿ ಬಿಟ್ಟಿತು..! ಹುಚ್ಚು ಮುಂಡೆ ಮದ್ವೆಲಿ ಉಂಡವನೇ ಜಾಣ ಎಂಬ ತತ್ವವನ್ನು ಅಕ್ಷರಸಹ ಪಾಲಿಸಿದ ಕಾಂಗ್ರೆಸ್ ಹೊಟ್ಟೆ ಬಿರಿಯುವಷ್ಟು ಉಂಡೆದ್ದಿತು. ಜನ ಸಾಮಾನ್ಯರ ಶಾಪ ತಟ್ಟಲಾರದೆ ಬಿಟ್ಟಿತೆ..? ಮೊನ್ನೆ ಚುನಾವಣೆಯಲ್ಲಿ ಮಕಾಡೆ ಮಲಗಿದ ಕಾಂಗ್ರೆಸ್ ಇನ್ನು ಎದ್ದು ನಿಲ್ಲುವುದು ಅಸಾಧ್ಯದ ಮಾತು ಬಿಡಿ..!  ಆದರೂ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ..! ಅದಕ್ಕೆ ಭ್ರಷ್ಟ ವ್ಯವಸ್ತೆಯಲ್ಲಿ ಇನ್ನಷ್ಟು ಮೃಷ್ಟಾನ್ನ ಭೋಜನ ಸವಿಯುವ ಆಸೆ..! ಈಗಂತೂ ಜನ ಕಾಂಗ್ರೆಸ್ ನ್ನು  ಚೀ...ಥೂ ಅಂತಾ ಉಗಿದಿದ್ದಾರೆ..! ಇನ್ನೂ ಮುಂದಾದರೂ ಅದು ತನ್ನ ಹಳೇ ಚಾಳಿಯನ್ನು  ಬದಲಿಸಿಕೊಳ್ಳದಿದ್ದರೆ..  ಜನಸಾಮಾನ್ಯರೇ ಅದನ್ನು ಮ್ಯೂಸಿಯಂನಲ್ಲಿ ಇಡಲು ತಯಾರಾಗಿದ್ದಾರೆ..!   

    ಅಂದ ಹಾಗೆ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೂ ನಮ್ಮ ವ್ಯಕ್ತಿತ್ವಕ್ಕೂ ಎಷ್ಟೊಂದು ಅಜಗಜಾಂತರ ವ್ಯತ್ಯಾಸ ಇದೆ ಅಲ್ಲವೇ..? ಮನೆ, ಮಡದಿ, ಸಂಸಾರ, ಕುಟುಂಬ ಎಲ್ಲವನ್ನೂ ತ್ಯಾಗ ಮಾಡಿ ಇಡಿ ದೇಶವೇ ನನ್ನ ಕುಟುಂಬ ಅಂತ ಟೊಂಕ ಕಟ್ಟಿ ನಿಂತ..ಅಂಥಾ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವೆಲ್ಲ ಒಳ್ಳೆ ಮನಸ್ಸಿನಿಂದ ಕಿಂಚಿತ್ತಾದರೂ ಬೆಂಬಲ ನೀಡದಿದ್ರೆ ನಮ್ಮ ಆತ್ಮಸಾಕ್ಷಿಗೆ ನಾವೇ ಮೋಸ ಮಾಡಿಕೊಂಡ ಹಾಗೆ ಅಲ್ಲವೇ..? ರಾಮನಿಗೊಸ್ಕರ ಕಾದ ಶಬರಿಯಂತೆ ಭಾರತದ ಜನತೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕನಿಗೊಸ್ಕರ ಕಾದಿದ್ದು ಸಾರ್ಥಕವಾಗಿದೆ..! ಮೋದಿಯಂತಹ ನಿಷ್ಕಲ್ಮಶ ವ್ಯಕ್ತಿ ನಮ್ಮ ದೇಶಕ್ಕೆ ಪ್ರಧಾನಿಯಾಗಿದ್ದು ನಮ್ಮೆಲ್ಲರ ಸೌಭಾಗ್ಯ..! ಮೋದಿಯಂತಹ ಸಮರ್ಥ ನಾಯಕನಿಂದ ಮಾತ್ರ ನಮ್ಮ ದೇಶ ಸಂಮೃದ್ದಿಯಾಗಲು ಸಾಧ್ಯ..! ನಾವೆಲ್ಲಾ ಅವರ ಜೊತೆಗೂಡಿ ದೇಶದಲ್ಲಿ ಬದಲಾವಣೆಯನ್ನು ತರೋಣ.. ನೀವೇನಂತಿರಿ....?

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.