ಸ್ವಚ್ಚ ಭಾರತ ಅಂದೋಲನ.
ಆತ್ಮೀಯ ವಿಸ್ಮಯ ನಗರಿಯ ಓದುಗರೆ..... ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಮೊಟ್ಟ ಮೊದಲ ಬಾರಿಗೆ ಸ್ವಚ್ಚ ಭಾರತದ ಅಂದೋಲನಕ್ಕೆ ಕರೆ ಕೊಟ್ಟಾಗ ಈ ಪತ್ರವನ್ನು ಅವರಿಗೆ ಕಳಿಸಿದ್ದೆ..!
ಗೆ,
ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ,
ಪ್ರಧಾನ ಮಂತ್ರಿಗಳು,ಭಾರತ ಸರ್ಕಾರ
ಭಾರತದ ಪ್ರಭಾವಶಾಲಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ ಪ್ರಣಾಮಗಳು..! ನೇರ,ದಿಟ್ಟ,ಸ್ಪಷ್ಟ ಗುರಿಗಳೊಂದಿಗೆ ನಮ್ಮ ದೇಶವನ್ನು ಮುನ್ನಡೆಸುತ್ತಿರುವ ನಿಮ್ಮ ಆಡಳಿತ ಶ್ಲಾಘನೀಯ..! ನಮ್ಮ ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಸ್ವಚ್ಚತೆಯೂ ಕೂಡ ಒಂದು..! ಸ್ವಾರ್ಥ,ಅಜ್ನಾನಗಳಿಂದಾಗಿ ನಮ್ಮಲ್ಲಿ ಸ್ವಚ್ಚತೆಯ ಬಗ್ಗೆ ಅರಿವಿನ ಕೊರತೆ ಇರುವುದು ನಮ್ಮ ದೇಶದ ದುರಂತವೂ ಹೌದು..! ಹಿಂದೆ ಆಡಳಿತ ನಡೆಸಿದ್ದವರಾರೂ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದೆ ಇದ್ದದ್ದು ನಮ್ಮ ದೌರ್ಭಾಗ್ಯವೆ ಸರಿ..!
ಈಗ ಕಾಲ ಕೂಡಿ ಬಂದಿದೆ... ನಿಮ್ಮ ಆಡಳಿತದಿಂದ ಭಾರತ ಸ್ವಚ್ಚ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ..! ನಿಮ್ಮ ಈ ಪರಿಯ ಕಲ್ಪನೆಯೆ ಅದ್ಬುತವಾದದ್ದು....ನಿಮಗೊಂದು ಹೃದಯಪೂರ್ವಕ...ಸಲಾಮ್...!
ನಿಮ್ಮ ಸ್ವಚ್ಚ ಭಾರತ ಪ್ರಚಾರೊಂದಲನದಿಂದ ದೇಶದ ಯುವ ಜನತೆ ಈಗಾಗಲೆ ಸ್ವಚ್ಚತೆಯ ಬಗ್ಗೆ ಗಮನ ಹರಿಸಿದ್ದಾರೆ..! ಹಳೆಯ ತಲೆಮಾರಿಗೆ ಬದಲಾಗಲು ಕೊಂಚ ಸಮಯ ಹಿಡಿದಿತು..! ಮುಂದೆ ಎಲ್ಲಾರೂ ಬದಲಾಗಲಿದ್ದಾರೆ..! ಕಸ ಅನ್ನೊದು ಜನರ ಜೀವನದ ನಿರಂತರ ಸಮಸ್ಯೆ ಇದ್ದಂತೆ..! ಪ್ರದೇಶವನ್ನಾಗಲಿ, ಅವರಣಗಳನ್ನಾಗಲಿ ಸ್ವಚ್ಚವಾಗಿಟ್ಟುಕೊಳ್ಳಬಹುದು... ಆದರೆ ಜನರ ಜೀವನದಿಂದ ನಿರಂತರ ಉತ್ಪತ್ತಿಯಾಗುವ ಕಸವನ್ನು ತಡೆಯಲಾಗದು..! ಎಲ್ಲೊ ಒಂದು ಕಡೆಯಾದ್ರೂ ಕಸದ ಗುಡ್ಡೆ ಹಾಕಲೆ ಬೇಕಾಗುತ್ತೆ..! ಕಸವನ್ನೆ ರಸವಾಗಿಸಿಕೊಂಡರೆ ಮಾತ್ರ ಸ್ವಚ್ಚ ಭಾರತ ಅಂದೊಲನ ಸಂಪೂರ್ಣ ಯಶಸ್ವಿಯಾದಂತೆ..! ರಕ್ತ ಬೀಜಾಸುರನಂತೆ ನಿರಂತರ ಉತ್ಪತ್ತಿಯಾಗುವ ಕಸವನ್ನು ನಿಯಂತ್ರಣ ಮಾಡುವುದಾದ್ರು ಹೇಗೆ ಸಾದ್ಯ..?
ನಮ್ಮಲ್ಲಿ ವಿದ್ಯುತ್ ಸಮಸ್ಯೆ ಕೂಡ ತುಂಬಾ ಇದೆ.... ಕೆಲವು ದೇಶಗಳಲ್ಲಿ ತಂತ್ರಜ್ನಾನ ಬಳಸಿ ಕಸದಿಂದಾನೆ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುತ್ತಿದ್ದಾರೆ..! ನಾವೂ ಕೂಡ ಯಾಕೆ ನಮ್ಮಲ್ಲಿ ನಿರಂತರ ಉತ್ಪತ್ತಿಯಾಗುತ್ತಿರುವ ಕಸದಿಂದ... ತಂತ್ರಜ್ನಾನ ಬಳಸಿ ನಿರಂತರ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಾರದು..? ನಮ್ಮ ದೇಶದಲ್ಲಿ ವಿದ್ಯುತ್ ಗೆ ತುಂಬಾ ಬೇಡಿಕೆ ಇರೊದ್ರಿಂದ ಕಸಕ್ಕೂ ಬೇಡಿಕೆ ಬಂದು ತನ್ನಿಂತಾನೆ ಭಾರತ ಸ್ವಚ್ಚ ಆಗೊದ್ರಲ್ಲಿ ಯಾವುದೆ ಸಂಶಯ ಇರಲಾರದು..! ಹೇಗಿದ್ದರೂ ನಮಗೆ ಕಸ ಹಾಗೂ ವಿದ್ಯುತ್ ಎರಡೂ ಬಗೆಹರಿಯದ ಸಮಸ್ಯೆಗಳಾಗಿವೆ...! ಆದ್ದರಿಂದ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವುದರ ಮೂಲಕ ಎರಡೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು..! ಒಂದು ಕಡೆ ಕಸ ನಿರ್ಮೂಲನೆ ಆಗುವುದರಿಂದ ಸ್ವಚ್ಚ ಭಾರತ ಅಂದೊಲನ ಯಶಸ್ವಿಯಾಗುತ್ತದೆ...ಇನ್ನೊಂದು ಕಡೆ ವಿದ್ಯುತ್ ಉತ್ಪಾದನೆಯಿಂದ ಭಾರತ ಪ್ರಕಾಶಮಾನವಾಗುತ್ತದೆ..!
ಇಂತಿ ನಮಸ್ಕಾರಗಳೊಂದಿಗೆ ದೇಶದ ಸಾಮಾನ್ಯ ಪ್ರಜೆ.... ಪ್ರವೀಣ್ ಕುಮಾರ್ ಕಾಕಡೆ..!
ಜೈ ಹಿಂದ್....ಜೈ ಭಾರತ ಮಾತೆ...!
ಸಾಲುಗಳು
- Add new comment
- 1253 views
ಅನಿಸಿಕೆಗಳು
ಪ್ರಿಯರೇ ಕಸದಿಂದ ರಸ ಎಂಬ ನಿಮ್ಮ
ಪ್ರಿಯರೇ ಕಸದಿಂದ ರಸ ಎಂಬ ನಿಮ್ಮ ಚಿಂತನೆ ಅತಿ ಅಮೋಘವಾಗಿದೆ. ಕಲ್ಲಿದ್ದಲಿನ ಬದಲಿಗೆ ಕಸವನ್ನು ನಾವಿಲ್ಲಿ ಉಪಯೊಗಿಸಬಹುದು. ದೇಶಪ್ರೇಮಿಗಳಾದ ನಿಮಗೆ ನನ್ನ ಹೃದಯಾಂತರಾಳದ ವಂದನೆಗಳು
jayaramnavagrama@gmail.com
ಜಯರಾಮ್ ನವಗ್ರಾಮ ಅವರಿಗೆ
ಜಯರಾಮ್ ನವಗ್ರಾಮ ಅವರಿಗೆ ಧನ್ಯವಾದಗಳು.