Skip to main content

ಅಹಾ...ಅದೇನ್ ಮತಿಗೆಟ್ಟ ಜನಾ..ರೀ ಇವ್ರು...?

ಇಂದ Praveen kumar
ಬರೆದಿದ್ದುApril 10, 2015
1ಅನಿಸಿಕೆ

ಈಗ ಶುರುವಾಯ್ತು ನೋಡ್ರಿ ವರಸೆ...! ಇಷ್ಟು ದಿನ ಬಾಯಲ್ಲಿ ಬೆಟ್ಟು ಇಟ್ಟುಕೊಂಡಿದ್ದ ಇವರೆಲ್ಲಾ... ಈಗ ಗೋಮಾಂಸ ತಿನ್ನೊದಕ್ಕೆ ಬಾಯಿ ತೆರೆದಿದ್ದಾರೆ ನೋಡಿ..! ನಮ್ಮ ನಾಡು ಕಂಡ ಅತಿ ಪ್ರಾಮಾಣಿಕ ಐ ಎ ಎಸ್ ಅಧಿಕಾರಿ ರವಿಯವರ ಅಸಹಜ ಸಾವಿನ ಬಗ್ಗೆ ತುಟಿಕ್ ಪಿಟಿಕ್ ಅನ್ನದ ಸ್ವಘೋಷಿತ ಬುದ್ದಿಜೀವಿಗಳೆಲ್ಲಾ ಈಗ ಲಬೊ ಲಬೊ ಅಂತ ಬಾಯಿ ಬಡೆದುಕೊಳ್ಳುತ್ತಿದ್ದಾರೆ..! ಗೀರಿಶ್ ಕಾರ್ನಾಡ್.ಮರುಳಸಿದ್ದಯ್ಯ.ಹನುಮಂತಯ್ಯ ಎನಾಗಿದೆ ಇವರಿಗೆಲ್ಲ..? ಇಷ್ಟೊಂದು ಕೀಳು ಮಟ್ಟಕ್ಕೆ ಇವರು ಇಳಿದಿದ್ದಾರಲ್ಲ...?  ನಮ್ಮ ನಾಡಿನ ಹುಸಿ ಪ್ರಗತಿಪರ ಚಿಂತಕರೆನಿಸಿಕೊಂಡ ಇವರನ್ನೆಲ್ಲಾ ಇನ್ನೂ ನಾವೆಲ್ಲಾ ಸಹಿಸಿಕೊಳ್ಳಬೇಕಾ...? ನಮ್ಮ ನಾಡು, ನುಡಿ , ಸಂಸ್ಕೃತಿ ಬಗ್ಗೆ ಕಿಂಚಿತ್ತಾದರೂ ಅಭಿಮಾನವಿರೊರು ಹೀಗೆಲ್ಲ ನಡೆದುಕೊಳ್ಳಲು ಸಾಧ್ಯವೇ ಇಲ್ಲ ಬಿಡಿ..! ಲಜ್ಜೆಗೆಟ್ಟ ರಾಜ್ಯ ಸರ್ಕಾರದ ರಾಗಕ್ಕೆ ಇವರೆಲ್ಲಾ ಸೇರಿ ತಾಳ ತಂಬೂರಿ ಬಾರಿಸುತ್ತಿದ್ದಾರೆ..!  ಗೋಮಾತೆಯ ಬಗ್ಗೆ ಇಷ್ಟೊಂದು ಅಸಡ್ಡೆನಾ ಸರ್ಕಾರಕ್ಕೆ...?  

ಅಸಲಿಗೆ ಗೋಮಾತೆಯ ಬಗ್ಗೆ ಏನು ಗೊತ್ತಿದೆ ಢೋಂಗಿ ಬುದ್ದಿಜೀವಿಗಳಿಗೆ...?  ಗೋವು ಪುರಾಣ ಕಾಲದಿಂದಲೂ ಹಿಂದುಗಳ ಆರಾಧ್ಯ ದೈವ. ಆದರಿಂದ ಪ್ರಯೋಜನ ಏಷ್ಟಿದೆ ಅನ್ನೊದೆ ಗೊತ್ತಿಲ್ಲದ ಗೊಸುಂಬೆ ಬುದ್ದಿಜೀವಿಗಳೆಲ್ಲಾ ಗೋಭಕ್ಷಣೆಗೆ ಇಳಿದಿದ್ದಾರೆ..! ಇನ್ನಾದರೂ ನಾವೆಲ್ಲ ಏಚ್ಚೆತ್ತು ಕೊಂಡು ಇಂತಹ ಢೋಂಗಿ ಬುದ್ದಿಜೀವಿಗಳನ್ನೆಲ್ಲಾ ಹಿಡಿದು ಬಡಿದರೆ ಮಾತ್ರ ನಮ್ಮ ನಾಡು. ನುಡಿ,ಸಂಸ್ಕೃತಿಗಳೆಲ್ಲಾ ಉಳಿದಾವು...ಇಲ್ಲವಾದಲ್ಲಿ  ಢೋಂಗಿ ಬುದ್ದಿಜೀವಿಗಳು ಗೋಮಾಂಸದ ಜೊತೆಗೆ ನಮ್ಮ ನಾಡು.ನುಡಿ,ಸಂಸ್ಕೃತಿಗಳನ್ನು ಭಕ್ಷಿಸಿಬಿಟ್ಟಾರು ಜೋಕೆ...!  

ಲೇಖಕರು

ಅನಿಸಿಕೆಗಳು

shivakumar KM ಸೋಮ, 04/13/2015 - 14:15

ಆಳುವ ಪಕ್ಷದ ದಯೆ ದಾಕ್ಶಿಣ್ಯ ಲಾಭಕ್ಕೋಸ್ಕರ ಮನುಷ್ಯರು, ದೇವರು, ಪ್ರಾಣಿಗಳು ಯಾರನ್ನು ಬಿಡದೆ ತಮ್ಮ ಮೂಗಿನ ನೇರಕ್ಕೆ ಮಾತಾಡುವವರಿಗೆ ಏನು ಹೇಳಿದರು ಸಾಲದು. ಇವರನ್ನು ಉದಾಸೀನ ಮಾಡುವುದೆ ಲೇಸು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.