ಅಸಮಾನತೆ ನಿವಾರಣೆ
ವಿಸ್ಮಯನಗರಿಯ ಆತ್ಮೀಯ ಓದುಗರೆ.... ನಾನು ಈ ಪತ್ರವನ್ನು ಏಳೆಂಟು ತಿಂಗಳುಗಳ ಹಿಂದೆ ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಕಳಿಸಿರುತ್ತೇನೆ ...ಹೀಗೆಯೆ ಹಲವಾರು ಪತ್ರಗಳನ್ನು ನಮ್ಮ ಪ್ರಧಾನ ಮಂತ್ರಿಗಳಿಗೆ ಬರೆದಿದ್ದೇನೆ.. ಅದರಲ್ಲಿ ಕೆಲವು ಪತ್ರಗಳನ್ನು ಹಂತ ಹಂತವಾಗಿ ವಿಸ್ಮಯನಗರಿಯ ಓದುಗರ ಮುಂದೆ ಪ್ರಸ್ತುತಪಡಿಸಲಿದ್ದೇನೆ.. ನಿಮ್ಮ ಅಭಿಪ್ರಾಯ,ಸಲಹೆ ಸೂಚನೆ ಹಾಗೂ ಟೀಕೆ ಟಿಪ್ಪಣಿಗಳಿಗೆ ನನ್ನ ಮುಕ್ತವಾದ ಸ್ವಾಗತವಿದೆ..!
ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ,
ವಿಷಯ: ಅಸಮಾನತೆ ನಿವಾರಣೆ ಬಗ್ಗೆ
ವಿಶ್ವದ ಸಮರ್ಥ ಜನಪ್ರಿಯ ನಾಯಕನಾಗುವುದಕ್ಕೆ ದಾಪುಗಾಲಿಟ್ಟಿರುವ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೆಂದ್ರ ಮೋದಿಯವರಿಗೆ ಹಾರ್ಧಿಕ ಅಭಿನಂದನೆಗಳು..! ನಿಮ್ಮ ನಡೆ, ನುಡಿ, ಹಾವ, ಭಾವಗಳಿಂದ ನೀವು ನಮ್ಮನ್ನೆಲ್ಲಾ ಗೆದ್ದಿದ್ದಿರಿ..! ನಮಗೆ ನಿಜವಾಗಿಯೂ ನಿಮ್ಮಂಥ ಧೀಮಂತ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾಗುವ ಅವಶ್ಯಕತೆ ಇತ್ತು.. ನಿಮ್ಮ ಬಗ್ಗೆ ನಮಗೆ ತುಂಬು ಹೃದಯದ ಅಭಿಮಾನವಿದೆ..! ನೀವು ನಮ್ಮ ದೇಶದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಗೆಲ್ಲುತ್ತಿರಿ ಎಂಬ ವಿಶ್ವಾಸ ನಮ್ಮಲ್ಲಿದೆ... ನಿಮಗೆ ಆ ದೇವರು ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ದಯಪಾಲಿಸಲಿ ಎಂದು ಹಾರೈಸುತ್ತೇನೆ..!
ನಿಮಗೊಂದು ನನ್ನ ಪುಟ್ಟ ಸಲಹೆ ಇದೆ..! ನೀವು ಪ್ರತಿ ತಿಂಗಳಿಗೊಮ್ಮೆ ದೇಶದ ಪ್ರಜೆಗಳಿಗೊಸ್ಕರ ಒಂದು ಔತಣ ಕೂಟ ಏರ್ಪಡಿಸಿ..! ಅದರಲ್ಲಿ ಎಲ್ಲಾ ವರ್ಗದ ಜನತೆ ಪಾಲಿರಲಿ..! ಹನ್ನೆರಡು ವರ್ಷದೊಳಗೆ ಇರುವ ಮಕ್ಕಳ ಕೂಟ, ಪ್ರತಿಭಾವಂತ ಕಾಲೇಜ್ ವಿಧ್ಯಾರ್ಥಿಗಳ ಕೂಟ, ಶಿಕ್ಷಕರುಗಳ ಕೂಟ, ರೈತಾಪಿಗಳ ಕೂಟ, ದೀನ ದಲಿತರ ಕೂಟ,ಅಂಗ ವಿಕಲಚೇತನರ ಕೂಟ,ದೃಷ್ಟಿ ಹೀನರ ಕೂಟ,ಬುದ್ದಿ ಮಾಂದ್ಯರ ಕೂಟ,ಅನಾಥ ಮಕ್ಕಳ ಕೂಟ, ಸೈನಿಕರ ಕೂಟ,ವಿಕಲಾಂಗ ಕ್ರೀಡಾಪಟುಗಳ ಕೂಟ, ವೈದ್ಯರುಗಳ ಕೂಟ,ಇಂಜಿನಿಯರ್ ಗಳ ಕೂಟ,ವಿಜ್ನಾನಿಗಳ ಕೂಟ, ಮಂಗಳ ಮುಖಿಯರ ಕೂಟ,ಬೀದಿಬದಿಯ ಸಣ್ಣ ವ್ಯಾಪಾರಿಗಳ ಕೂಟ,ವಕೀಲರ ಕೂಟ, ಪತ್ರಕರ್ತರ ಕೂಟ ಹೀಗೆ ಸಮಾಜದ ಹತ್ತು ಹಲವು ಅವಕಾಶ ವಂಚಿತರ ಕೂಟಗಳನ್ನು ರಚಿಸಿರಿ. ಪ್ರತಿ ತಿಂಗಳಿಗೊಮ್ಮೆ ಇಂತಹ ವರ್ಗದ ಪ್ರಜೆಗಳೊಂದಿಗೆ ಪ್ರತ್ಯೇಕವಾಗಿ ನೀವು ನಿಮ್ಮ ಔತಣ ಕೂಟಗಳನ್ನು ಏರ್ಪಡಿಸಿರಿ..! ಆಗ ದೇಶದ ಎಲ್ಲಾ ವರ್ಗದ ಜನರೊಂದಿಗೆ ನಿಮ್ಮ ಬಾಂದವ್ಯ ಇನ್ನಷ್ಟು ಗಟ್ಟಿಯಾಗುತ್ತದೆ..! ದೇಶದ ಪ್ರಧಾನ ಮಂತ್ರಿಗಳಾದ ನಿಮ್ಮ ಈ ಪ್ರಯತ್ನ ಪ್ರಜೆಗಳಲ್ಲಿರುವ ಅಸಮಾನತೆಯನ್ನು ಹೊಗಲಾಡಿಸುವಲ್ಲಿ ಯಶಸ್ವಿಯಾಗುತ್ತದೆ..! ಅಸಮಾನತೆ ನಿವಾರಣೆಯಾದರೆ ಪ್ರಜೆಗಳಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಬಲಿಷ್ಟವಾಗುತ್ತದೆ..! ನಾವೆಲ್ಲರೂ ಒಂದೇ ಆದರೆ ನಮ್ಮ ದೇಶ ಇನ್ನಷ್ಟು ಬಲಿಷ್ಟವಾಗುತ್ತದೆ...! ದಯವಿಟ್ಟು ಪ್ರಯತ್ನಿಸಿ ನೋಡಿ..!
ಇಂತಿ ನಮಸ್ಕಾರಗಳೊಂದಿಗೆ ದೇಶದ ಸಾಮಾನ್ಯ ಪ್ರಜೆ...ಪ್ರವೀಣ್ ಕುಮಾರ್ ಕಾಕಡೆ..!
ಸಾಲುಗಳು
- 429 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ