Skip to main content

ಬೆಳಕು ಹರಿಸಿದ ರವಿಗೆ ಗ್ರಹಣ ಹಿಡಿಸಿದ ವ್ಯವಸ್ತೆ..!

ಇಂದ Praveen kumar
ಬರೆದಿದ್ದುMarch 18, 2015
noಅನಿಸಿಕೆ

ನಮ್ಮ ನಾಡಿನ ನೇರ, ನಿಷ್ಟುರ,ಪ್ರಾಮಾಣಿಕ ಅಧಿಕಾರಿಯಾಗಿದ್ದ ಡಿ ಕೆ ರವಿಯವರ ಅಕಾಲಿಕ ನಿಧನ ಕರ್ನಾಟಕವನ್ನಷ್ಟೆ ಅಲ್ಲ ಇಡಿ ದೇಶವನ್ನೆ ಬೆಚ್ಚಿ ಬಿಳಿಸಿದೆ. ಸರ್ಕಾರದ ಲಜ್ಜೆಗೇಡಿ ವರ್ತನೆಯಿಂದ ಜನ ಸಮುದಾಯ ತೀವ್ರ ಆಕ್ರೋಶಗೊಂಡಿದೆ. ಅದು ಆತ್ಮಹತ್ಯೆಯೋ...ಕೊಲೆಯೋ ಅನ್ನೋದು ನಿಷ್ಪಕ್ಷಪಾತ ತನಿಖೆಯಿಂದಷ್ಟೆ ತಿಳಿಯಲು ಸಾಧ್ಯ..! ಸರ್ಕಾರದ ಶಿಖಂಡಿ ವರ್ತನೆ ನೋಡಿದ್ರೆ ನಿಷ್ಪಕ್ಷಪಾತ ತನಿಖೆ ಹಗಲುಗನಸೆ ಸರಿ..! ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ವರ್ಗ ಮಾಡಿದ್ದುದ್ದಲ್ಲದೆ ಅವರ ಕಾರ್ಯವ್ಯಾಪ್ತಿಯಲ್ಲಿ ಮೂಗು ತೂರಿಸಿ ತನಗೆ ಹೇಗೆ ಬೇಕೊ ಹಾಗೆ ಕುಣಿಸಲು ಪ್ರಯತ್ನಿಸಿ...ಈಗ ರವಿಯವರ ಆತ್ಮಹತ್ಯೆಗೆ ಅವರ ವೈಯಕ್ತಿಕ ಸಮಸ್ಯೆಗಳೇ ಕಾರಣ ಅಂತ ತಿಪ್ಪೆ ಸಾರಿಸಲು ಹೊರಟಿರುವ ಶಿಖಂಡಿ ಸರ್ಕಾರಕ್ಕೊಂದು ಧಿಕ್ಕಾರವಿರಲಿ.


ಯಾರಾದ್ರೂ ಆತ್ಮಹತ್ಯೆ ಮಾಡಿಕೊಂಡರೆ ಅವರ ತಲೆ ದೇಹದ ಮುಂಭಾಗಕ್ಕೆ ವಾಲಿಕೊಂಡಿರುತ್ತದೆ. ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ನೇತು ಹಾಕಿದರೆ ತಲೆ ದೇಹದ ಹಿಂಭಾಗಕ್ಕೆ ವಾಲಿರುತ್ತೆ... ಕೊಲೆ ಮಾಡಿ ಬಿಡುವ ಆತುರದಲ್ಲಿರೊ ಕೊಲೆಗಾರನಿಗೆ ಆ ತರ್ಕ ಹೊಳೆಯೊದಿಲ್ಲ ಬಿಡಿ..! ಇದು ಪ್ರತಿ ಪೋಲಿಸ್ ಆಧಿಕಾರಿಗಳಿಗೆ ಗೊತ್ತಿರುವ ಸಾಮಾನ್ಯ ವಿಚಾರ. ಕೊನೆಯುಸಿರೆಳೆದಿದ್ದ ರವಿಯವರ ತಲೆ ದೇಹದ ಹಿಂದಕ್ಕೆ ಬಾಗಿತ್ತು..ಅಂದರೆ ಅದು ಮೇಲ್ನೋಟಕ್ಕೆ ಕೊಲೆ ಅಂತಾನೆ ತಿಳಿದಿದ್ರೂ ಕೂಡ ನಮ್ಮ ಬೆಂಗಳೂರು ಪೋಲಿಸ್ ಆಯುಕ್ತರಾದ ಕೆ ಎನ್ ರೆಡ್ಡಿಯವರಿಗೆ ಗೊತ್ತಾಗಲಿಲ್ಲವೆ..? ಅವರೇಕೆ ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಅನಿಸುತ್ತಿದೆ ಅನ್ನೊ ಹೇಳಿಕೆ ಯಾರನ್ನು ಮೆಚ್ಚಿಸಲು ಕೊಟ್ಟರು..? ಸರ್ಕಾರವೇನಾದ್ರೂ ಅವರಿಗೆ ಪ್ರಸಾದ ದಯಪಾಲಿಸಿತ್ತಾ...? ಈಗ ಜನರೇನೂ ದಡ್ಡರಲ್ಲ..ಎನು ನಡೇದಿದೆ ಅನ್ನೊ ಅಂದಾಜು ಹಾಕುವ ಬುದ್ದಿವಂತರಿದ್ದಾರೆ. ಸಾಮಾಜಿಕ ತಾಣಗಳಲ್ಲಿ ದೇಶದ ಉದ್ದಗಲಕ್ಕೂ ಈ ಬಗ್ಗೆ ಚರ್ಚೆ ಹುಟ್ಟು ಹಾಕಿದೆ..!

ಜನ ಸಾಮಾನ್ಯರು ರೊಚ್ಚಿಗೆದ್ದರೆ ಯಾವ ಸರ್ಕಾರಗಳು ಅವರ ಮುಂದೆ ಉಳಿಯೊದಿಲ್ಲ..! ವಿಧಾನಸಭೆಯಲ್ಲಿ ಅದು ಆತ್ಮಹತ್ಯೆ ಎಂದ ನಮ್ಮ ಗೃಹ ಸಚಿವರು... ವೈಯಕ್ತಿಕ ಕಾರಣಗಳಿಂದ ರವಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ತಿಪ್ಪೆ ಸಾರಿಸಿದ ನಮ್ಮ ಮುಖ್ಯಮಂತ್ರಿಗಳು..! ಯಾವುದೆ ತನಿಖೆ ನಡೆಸದೆ ಮರಣೋತ್ತರ ಪರೀಕ್ಷೆಯ ರಿಪೊರ್ಟ್ ಇಲ್ಲದೆ ಮೇಲ್ನೋಟಕ್ಕೆ ಅತ್ಮಹತ್ಯೆ ಅನಿಸುತ್ತಿದೆ ಎಂದ ಪೋಲಿಸ್ ಆಯುಕ್ತರು.. ಇವರೆಲ್ಲಾ ಎನನ್ನು ಬಯಸುತ್ತಿದ್ದಾರೆ ಅನ್ನೊದು ತಿಳಿಯಲಾರದಷ್ಟು ಮೂರ್ಖರಲ್ಲ ಜನ ಸಾಮಾನ್ಯರು..! ಇಂತಾ ಕೊಳಕು ಅಧಿಕಾರಸ್ತರಿಗೆ ಬಚವಾಗಲು ಸಿ ಐ ಡಿ ತನಿಖೆನೇ ಬೇಕು ಸಿ ಬಿ ಐ ತನಿಖೆ ಮಾತ್ರ ಬೇಡ..ಯಾಕೇಂದ್ರೆ ಅಲ್ಲಿ ಪ್ರಭಾವ ಬೀರಲು ಇವರ ಕೈಯಲ್ಲಿ ಆಗೊದಿಲ್ಲವಲ್ಲ...ಕೇಂದ್ರ ಸರ್ಕಾರದ ಹಿಡಿತ ಈಗ ಒಬ್ಬ ಪ್ರಾಮಾಣಿಕ ವ್ಯಕ್ತಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಕೈಯಲ್ಲಿದೆ. ಅವರಂತೂ ಇಂತಹ ದುಷ್ಟ ಶಕ್ತಿಗಳನ್ನು ಹತ್ತಿರಕ್ಕೂ ಸೇರಿಸುವುದಿಲ್ಲ.
ಒಟ್ಟಿನಲ್ಲಿ ರವಿಯಂತಹ ಪ್ರಾಮಾಣಿಕ ಅಧಿಕಾರಿಗಳ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿಯುವುದೊಂದೆ ನಮ್ಮಂತ ನತದೃಷ್ಟರ ಭಾಗ್ಯ. ಕೊಳಕು ಮನಸ್ತಿತಿಯ ರಾಜಕಾರಣಿಗಳಿಗೆ ಧಿಕ್ಕಾರವಿರಲಿ.

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.