ಪ್ರಿಯಾಂಕ ವಾದ್ರರನ್ನು ಪ್ರಿಯಾಂಕ ಗಾಂಧಿ ಎನ್ನುವುದು ಸರಿಯೇ..?

2 ಪತ್ರಗಳು / 0 ಹೊಸತು
ಕೊನೆಯ ಪತ್ರ
Praveen kumar
Praveen kumar's picture
ಪ್ರಿಯಾಂಕ ವಾದ್ರರನ್ನು ಪ್ರಿಯಾಂಕ ಗಾಂಧಿ ಎನ್ನುವುದು ಸರಿಯೇ..?

ಗಾಂಧಿ ಎನ್ನುವ ನಾಮಕ್ಕೆ ಅದೆಷ್ಟು ಬೆಲೆ ಇದೆ ನೋಡಿ... ಕೇವಲ ಗಾಂಧಿ ಅನ್ನುವ ನಾಮ ಬಲವೇ ಗಾಂಧಿಯವರ ಕುಟುಂಬಕ್ಕೆ ಅನಾಮತ್ತು ನಲವತ್ತರಿಂದ ನವವತ್ತೈದು ವರ್ಷಗಳ ಕಾಲ ಅಧಿಕಾರ ತಂದು ಕೊಟ್ಟಿತ್ತು. ವಿಪರ್ಯಾಸ ಅಂದರೆ ಗಾಂಧಿ ಅನ್ನುವ ಹೆಸರು ಅಷ್ಟೊಂದು ದುರ್ಬಳಿಕೆ ಆಗಿತ್ತು.ಈಗಲೂ ಅಷ್ಟೆ ಕಾಂಗ್ರೆಸ್ ಗೆ ಗಾಂಧಿ ಅನ್ನುವ ಹೆಸರೆ ಅಧಿಕಾರ ತಂದು ಕೊಡುವ ಸಂಜೀವಿನಿ.
ದಿವಂಗತ ಸನ್ಮಾನ್ಯ ಶ್ರೀ ಇಂದಿರಾ ನೆಹರುರವರು ಫಿರೋಜ್ ಗಾಂಧಿಯವರನ್ನು ವರಿಸಿದ್ದರಿಂದ ಅವರಿಗೆ ಇಂದಿರಾ ಗಾಂಧಿ ಎಂಬ ಹೆಸರು ಬಂದಿದ್ದು ಎಲ್ಲರಿಗೂ ತಿಳಿದ ವಿಷಯ. ಅದರೆ ಇಂದಿರಾ ಗಾಂಧಿಯವರ ಮೊಮ್ಮಗಳು ಹಾಗೂ ಸೊನಿಯಾ ಗಾಂಧಿಯವರ ಪುತ್ರಿಯಾದ ಪ್ರಿಯಾಂಕ ಗಾಂಧಿಯವರು ರಾಬರ್ಟ್ ವಾದ್ರರನ್ನು ವರಿಸಿದರೂ ಪ್ರಿಯಾಂಕ ವಾದ್ರ ಆಗದೆ ಪ್ರಿಯಾಂಕ ಗಾಂಧಿಯೆ ಆಗಿ ಉಳಿವುದು ಹೇಗೆ ಸಾಧ್ಯ..? ಆಕೆಯನ್ನು ಪ್ರಿಯಾಂಕ ಗಾಂಧಿ ಅಂತ ಕರೆಯುವುದು ಎಷ್ಟರ ಮಟ್ಟಿಗೆ ಸರಿ...ಮೀಡಿಯಾದವರಿಗೆ, ಮಾಧ್ಯಮಗಳಿಗೆ, ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಆಕೆ ಪ್ರಿಯಾಂಕ ಗಾಂಧಿಯೆ ಆಗಿ ಉಳಿಯಲು ಕಾರಣವೇನು..? ಇದೇನು ಜಾಣ ಮರೆವಿನ ಸೋಗಲಾಡಿತನವೇ.?
ಮಾಧ್ಯಮಗಳಾದ್ರು ವಾಸ್ತವ ಅರಿತು ಮಾತನಾಡುವುದು ಒಳ್ಳೆದಲ್ಲವೇ...?

Geeta G Hegde
Geeta G Hegde's picture

ಸ್ವಾಮಿ ಗಾಂಧಿ ಮನೆತನದವರು ಏನು ಮಾಡಿದರೂ ಸರಿ.  ಯಾರಿಗಿದೆ ಅವರ ವಿರುದ್ಧ ಮಾತಾಡೊ ಗುಂಡಿಗೆ ಕಾಂಗ್ರೆಸ್ ನಲ್ಲಿ. ಕಾಂಗ್ರೆಸ್ ಈಗ ತಲೆ ಎತ್ತಿರೋದೆ ಸೋನಿಯಾ ಗಾಂಧಿ ಬಂದ ಮೇಲೆ. ಆದುದರಿಂದ ಎಲ್ಲರೂ ಗಾಂಧಿನೆ! ಬೇರೆಯವರ ಮಾತು ಕಿವಿಗೆ ಬೀಳೋದಿಲ್ಲ. ನಮ್ಮಲ್ಲಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ಗಂಡನ ಮನೆತನಕ್ಕೆ ಸೇರಿಕೊಳ್ಳುತ್ತಾರೆ. ಅವರಲ್ಲಿ ಹಾಗಿಲ್ವೇನೊ ಬಿಡಿ. ಸದ್ಯ ದೇಶ ಕಾಪಾಡೋಕೆ ಮೋದಿ ಮಹಾಷಯರು ಬಂದಿದಾರೆ.  ಅವರು ಗಾಂಧಿ ಅಂತಾದರೂ ಹೇಳಿಕೊಳ್ಳಲಿ ಅಥವಾ ವಾದ್ರಾ ಅಂತಾದರೂ ಹೇಳಿಕೊಳ್ಳಲಿ.  ಇದರಿಂದ  ದೇಶಕ್ಕೆ ಯಾವ ನಷ್ಟನೂ ಇಲ್ಲ.

Subscribe to Comments for "ಪ್ರಿಯಾಂಕ ವಾದ್ರರನ್ನು ಪ್ರಿಯಾಂಕ ಗಾಂಧಿ ಎನ್ನುವುದು ಸರಿಯೇ..?"