Skip to main content

ಕಳಚಿದ ಪೊರೆ ಸಣ್ಣ ಕತೆ - ೧೬ -ತರಲೆ

ಬರೆದಿದ್ದುFebruary 23, 2015
noಅನಿಸಿಕೆ

                                                       ಕಳಚಿದ ಪೊರೆ ಸಣ್ಣ ಕತೆ - ೧೬ -ತರಲೆ


                                    ಹರೀಶ್, ಮನೆಲಿ ನಮ್ಮ್ ಮದ್ವೆ ವಿಷ್ಯ ಮಾತಾಡ್ದ, ಮನೆಲಿ ಏನಂದ್ರೂ, 'ಅನಾಥೆ ಅದೂ ಅಲ್ದೆ ಬಡವ್ಳು ಬೇರೆ, ಅಂಥ ಅಂದಿರ್ಬೇಕು, ಅಲ್ವಾ ಹರೀ', ಅಲ್ಗೆ ನನ್ನ ನಿನ್ನ ಪ್ರೀತಿ ಇಲ್ಗೆ ಮುಗ್ದು ಹೋಯ್ತಾ, ನನ್ನಂತವಳಿಗೆ ಎಲ್ಲೋದ್ರೂ ಬರೀ ಕಷ್ಟಗಳೇ, ಏನ್ ಜೀವ್ನಾನೋ ಏನೋ ಸರೀ ಬಿಡು ಹರೀ ನನ್ ಹಣೆಲೀ ಬರದಂಗೆ ನಡೀಲಿ. ಅದ್ರೆ ನಮ್ ಸ್ನೇಹ ಮಾತ್ರ ಹೀಗೆ ಇರ್ಲಿ ಕಣೋ. ನೀನು ಯಾರಾದ್ರೂ ಚೆನ್ನಾಗಿ ಒದಿರೋ, ತುಂಬಾ ಹಣ ಇರೋ ಹುಡ್ಗೀನ ಮದ್ವೆಯಾಗಿ ಸುಖವಾಗಿ ಇರು ಹರೀ, ಯಾವ್ದೆ ಕಾರ್ಣುಕ್ಕೂ ಮನೆವ್ರನ್ನ ದೂರ ಮಾಡ್ಕೋಬೇಡ. ಕಣೋ. ಬರ್ಲಾ ನಾಳೆ ಆಫೀಸಲ್ಲಿ ಸಿಕ್ತೀನಿ, ಬಾಯ್ ಎನ್ನುತ್ತ ಮೇಲಕ್ಕೇಳುತ್ತಿದ್ದಂತೆ ಹರೀಶ್ ರಪ್ಪನೆ ಎಳೆದು ಕೆನ್ನೆಗೆ ಬಲವಾಗಿ ಬಾರಿಸಿದ. ವೀಣಾ ದೊಪ್ಪೆಂದು ಕೆಳಗೆ ಬಿದ್ದಳು. ಯಾಕೋ ಹೊಡ್ದಿದ್ದು ಎಂದು ವೀಣಾ ಮೇಲಕ್ಕೆ ಏಳುತ್ತಿದ್ದಂತೆ ಹರೀ ಅವಳನ್ನು ಬಾಚಿ ತಬ್ಬಿಕೊಂಡು ಮುಖಕ್ಕೆ ಮುತ್ತಿಡುತ್ತಾ ಹೇಳಿದ 'ನನ್ಗೆ ನೀನು ಬೇಕು, ಮನೆವ್ರು ಬೇಕು, ಅಪ್ಪ ಅಮ್ಮ ನನಗೆ ದೈವವಾದ್ರೆ ನೀನು ನನ್ನ ಜೀವ ಕಣೆ, ನಿನ್ನ ಯಾವ್ದೆ ಕಾರ್ಣುಕ್ಕೂ ಬಿಡೋದಿಲ್ಲ ಇವತ್ತಲ್ಲಾ ನಾಳೆ ಮನೇಲಿ ಒಪ್ಪಿಸ್ತೀನಿ, ನೀನು ಸುಮ್ನೆ ಏನೇನೋ ತರ್ಲೆ ಮಾತಾಡಿ ನನ್ನ ಕೆಣಕ್ಬೇಡ. ದಿನ ಆಫೀಸ್ನಲ್ಲಿ ಒಟ್ಗೆ ಕೆಲ್ಸ ಮಾಡ್ತೀವಿ, ಒಟ್ಗೆ ಊಟ ಮಾಡ್ತೀವಿ, ಒಟ್ಗೆ ಓಡಾಡ್ತೀವಿ, ನಿನ್ನಂತ ದೇವತೇನಾ ನಾನು ಕೈಬಿಡ್ತೀನಾ ಎನ್ನುತ್ತಿದ್ದಂತೆ ವೀಣಾ ಸಹ ಆನಂದ ಅಭಿಮಾನದಿಂದ ಹರೀನ ಆಲಂಗಿಸಿ ಅವನ ಬೆನ್ನು ತಟ್ಟಿದಳು. ತರ್ಲೆ ನನ್ಗೆ ಮುತ್ತಿಡ್ಬೇಕಂತ ನಾಟ್ಕ ಮಾಡ್ತಾ ನನ್ನ ಕಪಾಳ ಕಿತ್ತೋದಂಗೆ ಹೊಡಿತಿಯಾ, ಮದ್ವೆ ಆದ್ರೆ ನಿನ್ಗೆ ನಾನು ಮುತ್ತೇ ಕೊಡೋಲ್ಲ ಅನ್ನುತ್ತ ಕೆನ್ನೆಯಿಂದ ಕೈ ತೆಗೆಯದೇ ಹೇಳಿದಳು, ಸರೀ ದೋಸೆ, ಕಾಫಿ ಕೊಡ್ಸಿ ನನ್ನನ್ನ ಪಿಜಿ ಹತ್ರ ಡ್ರಾಪ್ ಮಾಡು. ಇನ್ನ ನಾಲ್ಕೈದು ತಿಂಗ್ಳು ಮದ್ವೆ ವಿಷ್ಯ ಮಾತಾಡಲ್ಲ ಸರೀನಾ ಎನ್ನುತ್ತ ಒಂದು ಕೈನಲ್ಲಿ ಕೆನ್ನೆ ಹಿಡ್ಕೋಂಡೆ ಅವನ ಬೈಕ್ ಹತ್ತಿ ಅವನ ತಬ್ಬಿಕೊಂಡು ಕುಳಿತಳು. ಕೆಲವು ತಿಂಗಳ ಬಳಿಕ ಹರಿ ತಂದೆಯೇ ಒಂದು ದಿನ ಮಗನ ಬಳಿ ವೀಣಾ ವಿಷಯ ಮಾತಾಡಿದರು, ನೋಡಪ್ಪ ನಮ್ಗೆ ವೀಣಾ ಮೇಲೆ ಕೋಪ ಇಲ್ಲಾ, ಬೇಜಾರು ಇಲ್ಲ, ಸ್ವಲ್ಪ ಸ್ತಿತಿವಂತ್ರಾದ್ರೆ  ನಿನ್ಗೆ ಸ್ವಲ್ಪ ಅನ್ಕೂಲ ಅಂತ ನಾವ್ ಯೋಚನೆ ಮಾಡಿದ್ವಿ  ನಿನ್ಗೆ ಅವ್ಳೆ ಇಷ್ಟಾಂದ್ರೆ ಮಾಡ್ಕೋ, ಯಾವ್ದಾದ್ರೂ ದೇವಸ್ಥಾನದಲ್ಲಿ ಸರಳವಾಗಿ ಮಾಡಿದ್ರಾಯ್ತು. ಒಟ್ನಲ್ಲಿ ನೀವಿಬ್ರೂ ಸುಖ್ವಾಗಿ, ಸಂತೋಷವಾಗಿದ್ರೆ ನಮ್ಗೆ ಅಷ್ಟೇ ಸಾಕು ಎಂದಾಗ ಹರಿಗೆ ತಂದೆಯ ಭಾವನೆಗಳಿಗೆ ಏನೂ ಹೇಳಲಾರದೇ ಹೋದ. ಕೊನೆಗೆ ಹರಿ ಹೇಳಿದ ಅಪ್ಪ ಭಾನುವಾರ ಅವ್ಳನ್ನ ಮನೆಗೆ ಕರ್ಕೊಂಡ್ ಬರ್ತೀನಿ ನೀವೇ ನೋಡಿ ಎಂದಾಗ ಅವರು ಸರಿ ಎಂದು ಒಪ್ಪಿದರು. ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಒಬ್ಬಳೆ ಆಟೋದಲ್ಲಿ ಮನೆಗೆ ಬಂದಾಗ ಎಲ್ಲರೂ ಅವಳನ್ನು ಸ್ವಾಗತಿಸಿದರು. ಸರಳ ಸುಂದರ ಹುಡುಗಿಯನ್ನು ಕಂಡು ಹರಿ ತಂದೆ ತಾಯಿ ಆನಂದ ಪಟ್ಟರು. ಕೊನೆಗೆ ವೀಣಾಳೇ ಅಡುಗೆ ಮಾಡಿ ಬಡಿಸಿದಾಗ ಹರಿಯ ತಾಯಿ ಭಾವಿ ಸೊಸೆಯನ್ನು ತೊಂಬು ಹೃದಯದಿಂದ ಹಾಡಿ ಹೊಗಳಿದರು. ಅವಳ ಮಾತು ಕೆಲಸ ನಡೆ ನುಡಿಯಿಂದ ಎಲ್ಲರ ಮನಸ್ಸನ್ನು ಗೆದ್ದು ಮುಂದೆ ಹರೀಶನ ಭಾಳ ಬೆಳಕಾಗಿ ಬಂದಳು.


                                       * ರವಿಚಂದ್ರವಂಶ್ *

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.