Skip to main content

ಎತ್ತ ಹೋದೆ ಮನಸೆ?

ಇಂದ smruthy
ಬರೆದಿದ್ದುDecember 19, 2014
1ಅನಿಸಿಕೆ

ಎತ್ತ ಹೋದೆ ಮನಸೆ?

ಸಮುದ್ರದ ದಂಡೆಯ ಮೇಲೆ ನಾ ಒಂಟಿಯಾಗಿ ಕೂತಿರಲು...

ತಂಗಾಳಿಯಂತೆ ಬಂದು ಒಬ್ಬಂಟಿ ಎನ್ನದಿರು ನಾನಿರುವೆನಲ್ಲ

ಎಂದ ಮನಸೆ ಎತ್ತ ಹೋದೆ..?

ಹೊಸ ಕನಸುಗಳ ಪೋಣಿಸ ಹೋರಟಿದ್ದೆ ನಾನಾಗ

ದಾರವಾಗಿ ನೀನಿರುವೆ ಎಂಬ ನಂಬಿಕೆಯಿಂದ

ಕಂಡ ಕನಸುಗಳ ಹಿಚುಕಿ ಹೊರಟು ಹೋದೆಯ

ಬದುಕ ನಾವೆಗೆ ಆಗೊಮ್ಮೆ-ಈಗೊಮ್ಮೆ ಬರುವ ಪಯಣಿಗನಂತೆ

ನೀ ಬಂದು ಹೋದೆಯ...?

ನೀನೆ ಕಾಣಿಸಿದ್ದ ಕನಸುಗಳ ಹಾದಿಗೆ

ಮುಳ್ಳ ಹಾಸಿಗೆ ಹಾಸಿ, ಮನಸೆಂಬ ಕನ್ನಡಿಯ ಒಡೆದು

ಎತ್ತ ಹೋದೆ ಮನಸೇ.............?

ಜೀವನದುದ್ದಕ್ಕೂ ನನ್ನ ಬಾಳ ಬೆಳಕು ನೀನಾಗುವೆ ಎಂದೇ ತಿಳಿದಿದ್ದೆ

ಆದರೆ ನೀನನಗೆ ಮರೀಚಿಕೆಯಾದೆ..

ಎತ್ತ ಎನ್ನದೆ ಮತ್ತೆ ಬರಲಾರೆಯಾ???

ಮರಳ ಗೂಡಿನಲಿ ಕನಸ ಕಟ್ಟೋಣ

ಮತ್ತೆ ಬರಲಾರೆಯಾ............?

 

 

           ಸ್ಮ್ರತಿ

 

 

ಲೇಖಕರು

ಅನಿಸಿಕೆಗಳು

arpithagowda ಗುರು, 01/08/2015 - 16:41

ತುಂಬ ವಿಸ್ಮಯವಾಗಿದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.