Skip to main content

ಸರ್ವಧರ್ಮದ ಪ್ರತೀಕ ಹೊಳೆಆಲೂರ ಎಚ್ಚರಸ್ವಾಮಿಗಳು

ಇಂದ prabhu
ಬರೆದಿದ್ದುDecember 10, 2014
noಅನಿಸಿಕೆ

ಕಾಷ್ಠಕಲೆಯ ತವರು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಸರ್ವಧರ್ಮದ ಸಮನ್ವಯದ ಪ್ರತೀಕವಾದ ಎಚ್ಚರಸ್ವಾಮಿಗಳು ನೆಲೆ ನಿಂತ ತಪೋಭೂಮಿ.ಈ ಜಾಗೆಯಲ್ಲಿ ಎಲ್ಲರೂ ಎಚ್ಚರದಿಂದ ಬದುಕಬೇಕು.ಎಚ್ಚ ರ ತಪ್ಪಿದರೆ ಇಲ್ಲಿ ಬದುಕಿಲ್ಲ.ಎಂಬುದಿಲ್ಲಿನ ಭಕ್ತರ ನಂಬಿಕೆ.ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಲಿಂಗನಬಂಡಿ  ಗ್ರಾಮದಲ್ಲಿ ಶಕೆ ೧೬೮೨ರ ಶುಕ್ರವಾರದಂದು ಅಯ್ಯಪ್ಪಯ್ಯ ಹಾಗೂ ಕೋಣಮ್ಮ ದಂಪತಿಗಳ ಉದರದಲ್ಲಿ ಎಚ್ಚರಸ್ವಾಮಿಗಳು ಜನಿಸುತ್ತಾರೆ. ವಿಶ್ವಕರ್ಮ ಸಂಪ್ರದಾಯದಂತೆ ತಂದೆ ಅಯ್ಯಪ್ಪಯ್ಯರು ಹಿರಿಯ ಪಂಡಿತರಾದ ಕೊಪ್ಪಳದ ಮಾನಪ್ಪಯ್ಯನವರಿಂದ ಶಾಸ್ತ್ರೋಕ್ತವಾಗಿ ಉಪನಯನ ಮಾಡಿಸಿದರು.ಮದುವೆಯ ವಯಸ್ಸಿಗೆ ಬರುತ್ತಿದ್ದಂತೆ ಕನ್ಯೆಯನ್ನು ನೋಡಲು ತೋಡಗುತ್ತಾರೆ.ಆಗ ಶ್ರೀಗಳು ತಾವು ಮದುವೆಯಾಗಿ ಸಂಸಾರ ಬಂಧನದಲ್ಲಿ ಸಿಲುಕದೆ ಈ ಭೂಮಿಯ ಮೇಲೆ ತಾವು ಮಾಡಬೇಕಾದ ಕಾರ್ಯಗಳು ಸಾಕಷ್ಟಿವೆ.ನಾನು ಲೋಕಸಂಚಾರ ಕೈಗೊಳುತ್ತೇನೆ. ನೀವು ಸಹೋದರ ಉಳಿವೆಪ್ಪನಿಗೆ ಮದುವೆ ಮಾಡುವಂತೆ ಸೂಚಿಸಿ ಲೋಕ ಕಲ್ಯಾಣಕ್ಕಾಗಿ ಮನೆಯಿಂದ ಹೊರಡುತ್ತಾರೆ. ಊರುಗಳ ಸುತ್ತುತ್ತ ,ಪುಣ್ಯಕ್ಷೇತ್ರಗಳ ದರ್ಶನ ಪಡೆದು ,ಮಹಾತ್ಮರ ಆಶೀರ್ವಾದಗಳೊಂದಿಗೆ ಸಾಗಿದ ಎಚ್ಚರೇಶ್ವರರು ತಾವು ಸುತ್ತಿದ ಊರುಗಳಲ್ಲೆಲ್ಲ ಒಂದಿಲ್ಲೊಂದು ಪವಾಡಗಳನ್ನು ಮಾಡುತ್ತ ಭಕ್ತರ ಭಾಗ್ಯದ ದೈವವಾಗುತ್ತಾರೆ.ಕೊನೆಗೆ ಬಾಗಲಕೋಟೆಯ ಹತ್ತಿರದ ಗದ್ದನಕೇರಿ ಗ್ರಾಮಕ್ಕೆ ಆಗಮಿಸಿ ಅಲ್ಲಿ ಜಗದ್ಗುರು ಮಳೆಯಪ್ಪಯ್ಯ ಸ್ವಾಮಿಗಳ ಸೇವೆಯನ್ನು ಮಾಡಿ ಆಶೀರ್ವಾದ ಪಡೆದು ಗುರುಗಳ ಅಪ್ಪಣೆಯಂತೆ ಎಲ್ಲಮ್ಮನಗುಡ್ಡ,ಸವದತ್ತಿ, ಕೆಲೂಡಿ,ರಾಮತೀರ್ಥ ಮೊದಲಾದ ಊರುಗಳನ್ನು ಸುತ್ತಿ ವಟುಪುರಕ್ಕೆ ಬಂದು ನೆಲೆಸುತ್ತಾರೆ. ಆ ವಟುಪುರವೇ ಈಗಿನ ಮಲಪ್ರಭೆಯ ದಡದಲ್ಲಿರುವ ಹೊಳೆಆಲೂರ ಆಗಿದೆ.


          ಹಠಯೋಗಿಯಾಗಿ ಧರ್ಮ ಕಾರ್ಯ ಕೈಗೊಂಡ ಎಚ್ಚರಸ್ವಾಮಿಗಳು ಅಹಂಕಾರ,ದರ್ಪದಿಂದ ನಡೆಯುವವರಿಗೆ ಒಳಗಣ್ಣು ತೆರೆಯುವಂತೆ ಮಾಡುತ್ತ ಅಧರ್ಮದ ಹಾದಿ ತುಳಿದವರಿಗೆ ಧರ್ಮದಲ್ಲಿ ನಡೆಯುವಂತೆ ಮಾಡುತ್ತ ,ಸರ್ವರಿಗೂ ಎಚ್ಚರ ನೀಡುತ್ತ ಎಚ್ಚ್ರೇಶ್ವರರಾಗಿ ಹಲವಾರು ಪವಾಡಗಳನ್ನು ತೋರಿಸಿ ಕೊನೆಗೆ ಜೀವಂತ ಗುಹೆಯನ್ನು ಪ್ರವೇಶ ಮಾಡಿ ಅಲ್ಲೆ ಐಕ್ಯರಾದರು.ಆ ಮೂಲಕ ಭಕ್ತರ ಆರಾಧ್ಯ ದೈವವಾದರು. ಎಚ್ಚರೇಶ್ವರ ಶ್ರೀಗಳಿಂದ ಹೊಳೆಆಲೂರು ಜಾಗೃತಭೂಮಿಯಾಯ್ತು.ಸುಕ್ಷೇತ್ರವಾಗಿ ನಾಡಒಳಗೂ ,ಹೊರಗೂ ಹೆಸರಾಯಿತು.ಅಂದಿನಿಂದ ಇಂದಿನವರೆಗೂ ಪ್ರತಿವರ್ಷವೂ ಮಹಿಮಾಪುರುಷನಾದ ಎಚ್ಚರೇಶ್ವ್ರರ ಮಹಾಸ್ವಾಮಿಗಳ ಜೋಡು ಮಹಾರಥೋತ್ಸವ ಸಹಸ್ರಾರು ಸದ್ಭಕ್ತರ ಸಮ್ಮುಖದಲ್ಲಿ ನೆರವೇರುತ್ತಿದೆ.ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವರ್ಷದುದ್ದಕ್ಕೂ ನಡೆಯುತ್ತಲೇ ಇವೆ. ಪ್ರತಿವರ್ಷ ಶ್ರೀಮಠದಿಂದ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ಸಕಲ ಸದ್ಭಕ್ತ ಮಂಡಳಿಯಿಂದ ನಡೆಸಲಾಗುತ್ತ್ದೆ. ಇದೆ ಡಿಸೆಂಬರ ೧೧ರಂದು ನಡೆಯುವ ಜಾತ್ರೆಗೆ ಕರ್ನಾಟಕ,ಗೋವಾ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ದೇಶದ ಇತರ ಕಡೆಗಳಿಂದ ನೂರಾರು ಸದ್ಭಕ್ತರು ಆಗಮಿಸಿ ರಥೋತ್ಸವ ದಲ್ಲಿ ಪಾಲ್ಗೊಳುತ್ತಾರೆ.ರಥೋತ್ಸವದ ನಿಮಿತ್ಯ ಶ್ರೀಮಠದಿಂದ ಸಂಗೀತ ಸಂಜೆ, ಕೀರ್ತನೆ, ವಿಶೇಷ ಉಪನ್ಯಾಸಗಳು ನಡೆಯಲಿವೆ.ಇದರ ಜೊತೆಗೆ ಹವ್ಯಾಸಿ ಕಲಾವಿದರಿಂದ ಎಚ್ಚರ ತಂಗಿ ಎಚ್ಚರ ಮತ್ತು ನನ್ನ ಗಂಡ ನೀ ಹೌದು, ನಿನ್ನ ಹೆಂಡತಿ ನಾನಲ್ಲ ಎಂಬ ಎರಡು ನಾಟಕಗಳ ಪ್ರದರ್ಶನ ಕೂಡ ನಡೆಯುತ್ತಿವೆ.ಬನ್ನಿ ನೀವೂ ನಮ್ಮೂರ ಜಾತ್ರೆಗೆ ಒಮ್ಮೆ.


ಚಿತ್ರಗಳು- ಈಗಿನ ಮಠಾಧೀಶ ಎಚ್ಚರಸ್ವಾಮಿಗಳು, ಮತ್ತು ಮೂಲ ಎಚ್ಚರಸ್ವಾಮಿಗಳು ಹಾಗೂ ಎಚ್ಚರಸ್ವಾಮಿಗಳ ಗದ್ದುಗೆ.


ಲೇಖನ-ಡಾ.ಪ್ರಭು.ಅ.ಗಂಜಿಹಾಳ್.ಹೊಳೆಆಲೂರ್(ಗದಗ್)-ಮೊ-೯೪೪೮೭೭೫೩೪೬

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.