Skip to main content

ಕನಸು

ಇಂದ smruthy
ಬರೆದಿದ್ದುDecember 5, 2014
noಅನಿಸಿಕೆ

 

ಬಾನಂಚಿನ ಅಂಗಳದಿ ನಾ ಕಂಡ ಆ ಕನಸು

ತಾರೆಗಳ ಆಗಸದಿ ಚಿತ್ತಾರವ ಬಿಡಿಸಿದಂತೆ

ಚಂದಿರನ ಬೆಳದಿಂಗಳಲಿ ನಾ ನಗುವ ಕಂಡೆ

ನಗುವಿನಾಳದ ನೋವ ಮರೆತು

ಮೋಡಗಳು ಬಂಧಿಸಿದ ಆ ಚಂದ್ರನ ಪರದಾಟ

ಜೀವನದಿ ಕಮರಿದ ಕನಸುಗಳ ಹುಡುಕಾಟ

ಕಪ್ಪಗಿನ ಮೋಡದ ಅಂಚಿನಲಿ ನಿಂತ ಮಳೆಯ ಹನಿ

ಕಣ್ಣಂಚಿನಲಿ ತುಂಬಿದ ಕಣ್ಣೀರ ಹನಿಯ ಸಾಲು

ಮೋಡಗಳ ಪ್ಯೆಪೋಟಿ ಭಾವನೆಗಳ ಮಿಡುಕಾಟ

ದೂರದಾಗಸದ ಕಡೆಗೆ ನೆಮ್ಮದಿಯ ನೋಟ.

ಸ್ಮ್ರತಿ

 

 

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.