
ನಯನ ಮನೋಹರ ದೇವರಾಯನ ದುರ್ಗ
ಬೆಂಗಳೂರಿನಿಂದ ತುಮಕೂರು ಹೋಗುವ ರಸ್ತೆಯಲ್ಲಿ ದಾಬಸ್ ಪೇಟೆಯ ಬಳಿ ಬಲಕ್ಕೆ ತಿರುಗಿ ಸುಮಾರು ೨೦ಕೀಮಿ ಡ್ರೈವ್ ಮಾಡಿದರೆ ಸಿಗುವದು ದೇವರಾಯನ ದುರ್ಗ. ಬೆಂಗಳೂರಿನಿಂದ ಬೆಳಿಗ್ಗೆ ಹೋದರೆ ಸಂಜೆ ಬರಬಹುದಾದ ತಾಣ. ಅಲ್ಲೇ ಹತ್ತಿರ ಇನ್ನೂ ೨೭ ಕಿಮಿ ದೂರದಲ್ಲಿ ಗೊರವನಹೞಿ ಲಕ್ಷ್ಮಿ ದೇವಸ್ಠಾನಕ್ಕೆ ಸಹ ಹೋಗಿ ಬರಬಹುದು.
ದುರ್ಗದ ಕೆಳಗೆ ಭೋಗ ಲಕ್ಷ್ಮಿನರಸಿಂಹ ಮೇಲೆ ಯೋಗ ಲಕ್ಷ್ಮಿ ನರಸಿಂಹ ದೇವಸ್ಥಾನವಿದೆ. ಕೆಳಗಿನ ದೇವಸ್ಥಾನಕ್ಕೆ ಗಾಡಿ ಹೋಗುತ್ತದೆ. ಆದರೆ ಮೇಲಿನ ದೇವಸ್ಥಾನಕ್ಕೆ ಸುಮಾರು ೨೫೦ ಕ್ಕೂ ಹೆಚ್ಚು ಮೆಟ್ಟಿಲು ಹತ್ತಲೇ ಬೇಕು. ವಯಸ್ಸಾದವರಿಗೆ ಕಷ್ಟ ಎನಿಸಬಹುದು.
ದುರ್ಗದಲ್ಲಿ ಮಂಗಗಳ ಕಾಟ ಜಾಸ್ತಿ. ಆದ್ದರಿಂದ ಕೈಯಲ್ಲಿರುವ ವಸ್ತುಗಳ ಬಗ್ಗೆ ಕಾಳಜಿ ಇರಲಿ. ಕೆಳಗಿನ ದೇವಸ್ಥಾನದ ಬಳಿ ಅನ್ನಸಂತರ್ಪಣೆ ಇದೆ. ಅಲ್ಲಿ ಮದ್ಯಾಹ್ನ ಪ್ರಸಾದ ಊಟ ಮಾಡಬಹುದು. ಗುಡ್ಡ ಹತ್ತುವಾಗ ಸುತ್ತಲಿನ ರಮಣೀಯ ದೃಶ್ಯ ನೋಡಲು ಮರೆಯದಿರಿ.
ಮೇಲಿನ ಚಿತ್ರ ದೇವರಾಯನ ದುರ್ಗದ ಒಂದು ನೋಟ. ಕೆಳಗಿನ ಚಿತ್ರ ಭೋಗ ಲಕ್ಷ್ಮಿನರಸಿಂಹ ದೇವಸ್ಥಾನ.
ದೇವರಾಯನದುರ್ಗದ ಮೆಟ್ಟಿಲುಗಳು
ಮೇಲಿನಿಂದ ಕೆಳಗೆ ಕಾಣುವ ಒಂದು ನೋಟ
ಮೇಲಿರುವ ಯೋಗ ಲಕ್ಷ್ಮಿನರಸಿಂಹ ದೇವಸ್ಥಾನ
ಕಲ್ಯಾಣಿ
ಯೋಗ ಲಕ್ಷ್ಮಿನರಸಿಂಹ ದೇವಸ್ಥಾನದ ಇನ್ನೊಂದು ನೋಟ
ದುರ್ಗದ ಒಂದು ನೋಟ
ನೀವೂ ಇಲ್ಲಿಗೆ ಹೋಗಿದ್ರಾ?
ಸಾಲುಗಳು
- Add new comment
- 1225 views
ಅನಿಸಿಕೆಗಳು
ಹೌದು ನಾವು ಕೂಡ ಮೂರು ವರ್ಷದ
ಹೌದು ನಾವು ಕೂಡ ಮೂರು ವರ್ಷದ ಹಿಂದೆ ದೇವರಾಯನದುರ್ಗಕ್ಕೆ ಹೋಗಿದ್ವಿ. ತುಂಬಾ ಚೆನ್ನಾಗಿದೆ ನೋಡಬೇಕಾದ ಸ್ಥಳ. ಮೇಲೆ ಹತ್ತಿ ಹೋಗಲು
ಆಗದವರು ಆಟೋ ಸಿಗುತ್ತಿದ್ದೋ ಆಗ ಮೇಲಿನ ಮೆಟ್ಟಿನ ದಾಟಿ ಮಂಟಪದವರೆಗೂ ಆಟೋದಲ್ಲಿ ಹೋಗಬಹುದಾಗಿತ್ತು. ಮತ್ತು ಮೇಲಿನ ಲಕ್ಷ್ಮೀ ನರಸಿಂಹ ದೇವಸ್ಥಾನದ ಕಲ್ಯಾಣಿ ಹತ್ತಿರ
ಒಂದು ಗವಿ ತರಹ ಇದೆ ಯಾವಾಗಲೂ ಬೀಗ ಹಾಕಿರುತ್ತದೆ. ಅದರೊಳಗೆ ಹರಿಯುತ್ತಿರುವ ನೀರಿಗೆ ಜಾರುತ್ತೆ ಅಂತ
ಒಳಗೆ ಬೆಳಕಿನ ಪ್ರವೇಶ ಇರುವುದಿಲ್ಲವಾದ್ದರಿಂದ ಒಂದು ಸಲಕ್ಕೆ 10 ಜನ ಮಾತ್ರ ಬ್ಯಾಟರಿ ಸಹಾದಿಂದ ಒಳಗೆ ಕಳುಹಿಸುತ್ತಾರೆ. ನೀರು ಸಿಹಿಯಾಗಿದೆ. ಒಟ್ಟಾರೆ ನೋಡಬೇಕಾದ ಸ್ಥಳ
ಸ್ವಂತ ವಾಹನ ಇದ್ದರೆ ಇನ್ನೂ ಮಜಾ ಇರುತ್ತೆ. ಬಸ್ಸಲ್ಲಾದರೆ ವಾಪಸ್ಸು ಬರಲು ಕೊರಟಗೆರೆಗೆ ಹೋಗಬೇಕಾಗುತ್ತೆ. ಸ್ವಲ್ಪ ರಿಸ್ಕಿ ಅನ್ನಿಸುತ್ತೆ ವಾಪಸ್ಸು ಬರುವಾಗ. ತುಂಬಾ ಚೆನ್ನಾಗಿದೆ.