Skip to main content

ನ್ಯಾಯ ವ್ಯವಸ್ಥೆ ಇನ್ನು ಜೀವಂತ

ಇಂದ KTR
ಬರೆದಿದ್ದುOctober 13, 2014
noಅನಿಸಿಕೆ

ಮಾನ್ಯರೆ,

ತಪ್ಪು ಮಾಡಿದವರು ಯಾರೇ ಆಗಲಿ ಅವರಿಗೆ ಶಿಕ್ಷ ಕಟ್ಟಿಟ್ಟ ಬುತ್ತಿ. ತಪ್ಪು ಮಾಡಿದವರಲ್ಲಿ ಹಲವರು ತಪ್ಪಿಸಿಕೊಳ್ಳಬಹುದು, ಮತ್ತೆ ಕೆಲವರು ಸಿಕ್ಕಿ ಬೀಳಬಹುದು. ಆದರೆ ಒಂದಲ್ಲೊಂದು ದಿನ ತಪ್ಪು ಮಾಡಿದವರೆಲ್ಲರೂ ಶಿಕ್ಷೆಯನ್ನು ಅನುಭವಿಸಲೇ ಬೇಕು. ಅದಕ್ಕೆ ದೊಡ್ಡವರು ಹೇಳಿರುವುದು ಖಉಪ್ಪು ತಿದ್ದಮೇಲೆ ನೀರು ಕುಡಿಯಲೇಬೇಕುಖ ಎಂದು.
ಈಗ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ರವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷಿಗೆ ಗುರಿಯಾಗಿರುವುದು ಭ್ರಷ್ಟರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಶಿಕ್ಷೆ ಪ್ರಕಟಣೆಗೆ ಸುಮಾರು 18 ವರ್ಷಗಳ ಸುರ್ದೀ ಕಾಲ ತೆಗದುಕೊಂಡರು ಸಹ ಸತ್ಯಕ್ಕೆ ಜಯ ಸಿಕ್ಕಿದೆ. ಇದು ಭಾರತ ನ್ಯಾಯಾಂಗ ವ್ಯವಸ್ಥೆಯ ಜೀವಂತಿಕೆಯಾಗಿರುವುದಕ್ಕೆ ಒಂದು ನಿದರ್ಶನ.

ಭಾರತದ ವಿವಿಧ ರಾಜ್ಯಗಳಲ್ಲಿರುವ ಹಲವಾರು ಗಣ್ಯರು/ರಾಜಕೀಯ/ಪ್ರಭಾವಿ ವ್ಯಕ್ತಿಗಳ ಮೇಲೆ ಇಂತಹ ಹಲವಾರು ನ್ಯಾಯಾಂಗ ಪ್ರಕರಣಗಳಿಗೆ ಇವುಗಳನ್ನು ಸಹ ತ್ವರಿತ ಗತಿಯಲ್ಲಿ ಮುಗಿಸಿ, ಅವರಿಗೂ ಶಿಕ್ಷೆಯನ್ನು ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕು. ಆಗ ಜನಸಾಮಾಜ್ಯರಿಗೂ ನ್ಯಾಯಾಂಗ ವ್ಯವಸ್ಥೆ(ಕಾನೂನಿನ) ಬಗ್ಗೆ ಗೌರವ ಮೂಡುತ್ತದೆ ಹಾಗೂ ಅನೇಕ ವರ್ಷಗಳಿಂದ ಧೂಳು ಹಿಡಿದಿರುವ ಅನೇಕ ಕಡತಗಳಿಗೆ ಮುಕ್ತಿದೊರೆತಂತಾಗುತ್ತದೆ. ಭಾರತದಲ್ಲಿ ನ್ಯಾಯ ಎನ್ನಿದರೂ ಶ್ರೀಮಂತ ವ್ಯಕ್ತಿಗಳಿಗೆ ಎನ್ನುವ ಕಾಲ ಹೋಗಿ ಬಡವರಿಗೂ ಶೀ್ರವಾಗಿ ನ್ಯಾಯ ದೊರಕುವ ಕಾಲ ಬರಬೇಕಾಗಿದೆ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿಗಳು ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ಮಾಡಿ ಶೀ್ರ ನ್ಯಾಯದಾನ ಮಾಡಬೇಕಾದ ಅನಿವಾರ್ಯತೆಯೂ ಸಹ ಇದೆ.
- ಕೆ.ಟಿ.ಆರ್.
ಬೆಂಗಳೂರು
7899324533

ಲೇಖಕರು

KTR

ಸ್ನೇಹಜೀವಿ

ಸ್ನೇಹ ಜೀವಿ... ಗೆಳೆತನ ಮಾಡುವುದು ಎಂದರೆ ಇಷ್ಟ. ಜೊತೆಗೆ ಆಟದೊಂದಿಗೆ ಹೊಸ ವಿಚಾರಗಳನ್ನು ಕಲಿಯುವುದು ನನ್ನ ಬಯಕೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.