Skip to main content

ಭಾರತದಲ್ಲಿ ಹಲವಾರು ಪರೀಕ್ಷೆಗಳು(ಉದಾಃ ಸಿ.ಎ,  ಸಿ.ಎಸ್)  ಬರೀ ಹಿ೦ದಿ/ಆ೦ಗ್ಲ ಭಾಷೆಯಲ್ಲೇ ಇರತ್ವೆ..ಕರ್ನಾಟಕದಲ್ಲಾದ್ರು ಕನ್ನಡದಲ್ಲಿ ಉತ್ತರ ಬರೆಯೋ ಸೌಲಭ್ಯ ಇದ್ರೆ ಹೇಗೆ??

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಸೋಮ, 09/22/2014 - 06:39

ಸ್ಪೂರ್ತಿ ಅವರೇ, ನಾವು ಮೊದಲು ಫೌಂಡೇಶನ್ ಅಂದ್ರೆ ಅಡಿಪಾಯ ಮೊದಲು ಸರಿಪಡಿಸಬೇಕು. ಆಮೇಲೆ ಮನೆ ಕಟ್ಟುವದು. ಇಂದು ಕನ್ನಡದ ಹೆಚ್ಚು ಮಕ್ಕಳೆಲ್ಲ ಇಂಗ್ಲೀಷ್ ಮಾಧ್ಯಮಕ್ಕೆ ಯಾಕೆ ಹೋಗುತ್ತಿದ್ದಾರೆ? ಆ ಅನಿವಾರ್ಯತೆ ಏನು?

ಅದನ್ನು ಪ್ರಶ್ನಿಸಿದ್ದೇವೆಯೇ? ಉಹುಂ. ಕೇವಲ ಕನ್ನಡಿಗರಿಗೆ ಭಾಷಾಭಿಮಾನವಿಲ್ಲ ಎಂದು ಜರೆದರೆ ಮುಗಿಯಿತು. ನಾವು ಕನ್ನಡವನ್ನು ಸಾಹಿತ್ಯ/ಸಿನಿಮಾ ಬಿಟ್ಟು ಬೇರೆ ಕಡೆ ಬೆಳೆಸಲು ಪ್ರಯತ್ನಿಸಿಲ್ಲ.

ಇಂದು ನಾವು ದಿನನಿತ್ಯ ಬಳಸುವ ಅನೇಕ ವಸ್ತುಗಳಲ್ಲಿ ಕನ್ನಡ ಇಲ್ಲ. ಅದನ್ನು ನಾವು ನಿರ್ಲಕ್ಷಿಸಿದ್ದೇವೆ. ಅದನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಕನ್ನಡ ಹೊಟ್ಟೆ ಪಾಡು ಭಾಷೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಅದರ ಪರಿಣಾಮ ನಮ್ಮ ಮಕ್ಕಳನ್ನೆಲ್ಲ ಆಂಗ್ಲ ಮಾಧ್ಯಮಕ್ಕೆ ಸೇರಿಸುವ ಅನಿವಾರ್ಯತೆ.

ಅದರ ಪರಿಣಾಮ ಮುಂದಿನ ಪೀಳಿಗೆಗೆ ಕನ್ನಡದಲ್ಲಿ ಬರೆಯುವ ಓದುವ ಸಾಮರ್ಥ್ಯ ಇನ್ನೂ ಕಡಿಮೆ ಆಗಲಿದೆ. ಆದ್ದರಿಂದ ಕನ್ನಡದಲ್ಲಿ ಸಿಎ/ಸಿಎಸ್ ಬರೆಯಲು ಅವಕಾಶ ನೀಡಿದರೂ ಬಳಸುವದು ಕಡಿಮೆ.

ಹಾಗೂ ಹೀಗೂ ಹೋರಾಡಿ ಕನ್ನಡದಲ್ಲಿ ಬಂದು ಕನ್ನಡದಲ್ಲಿ ಬರೆದರೆ ಅದು ಅವರಿಗೆ ಕಂಪನಿಗಳಲ್ಲಿ ಕೆಲಸ ಪಡೆಯಲು ಕಷ್ಟ. ಯಾವ ದೊಡ್ಡ ಕಂಪನಿಯಲ್ಲೂ ಲೆಕ್ಕ ಪತ್ರಗಳನ್ನು ಕನ್ನಡದಲ್ಲಿ ನಡೆಸಲ್ಲ.

ಕನ್ನಡದಲ್ಲಿ ಕಿರಾಣಿ ಅಂಗಡಿಯ ವಸ್ತುಗಳಲ್ಲಿ ಕನ್ನಡ ಬಯಸದ ಜನ ನಾವು. ಇಂದು ಕನ್ನಡಿಗರೇ ತಯಾರಿಸುವ ವಸ್ತುಗಳಲ್ಲಿ ಲೇಬಲ್ ಕನ್ನಡದಲ್ಲಿರುವದಿಲ್ಲ. ಬ್ಯಾಂಕ್, ಇನ್ಶೂರನ್ಸ್, ಕಂಪನಿ ವ್ಯವಹಾರದಲ್ಲಿ ಕನ್ನಡದ ಕೋರಿಕೆ ಇಡದೇ ಬೇಡದ ಕಡೆ ಭಾರೀ ಹೋರಾಟ ನಡೆಸುವ ನಮ್ಮ ತಪ್ಪೇ ಕನ್ನಡಕ್ಕೆ ಮುಳುವಾಗಿರುವದು.

ಹೇಳಿ ಈ ಮೇಲಿನ ವಿಷಯಕ್ಕೆ ಇಂದು ಯಾವ ಕನ್ನಡ ಹೋರಾಟಗಾರ ಬೀದಿಗೆ ಬಂದು ನಿರಶನ ನಡೆಸಿದ್ದಾನೆ?

 

 

 

 

Spurthikashyap ಧ, 10/29/2014 - 20:36

ಹೌದು, ನೀವ್ ಹೇಳೋದ್ ಸರಿಯಾಗೆ ಇದೆ...ಆದ್ರೆ ಯಾವ್ ರೀತಿ ಇದಿಕ್ಕೆ ಪರಿಹಾರ ತರೊದು?

 

  • 872 views