Skip to main content

ದೊಂಬರಾಟ.

ಇಂದ ವಸಂತ್
ಬರೆದಿದ್ದುJuly 28, 2014
noಅನಿಸಿಕೆ

ಎತ್ತಲೋ
ಹಾರಿಹೋಗುತ್ತಿವೆ

ನನ್ನ
ಭಾವನೆಗಳು


ಬಾಂದಳದ
ಕದವ ತಟ್ಟಿ,

ಮೇರು
ಪರ್ವತದ

ಹಿಮ
ರಾಶಿಯು ಕರಗಿದಂತೆ

ಸೊರಗಿ
ಹೋಗುತ್ತಿವೆ

ತಣ್ಣನೆ ಮನವ ಮುಟ್ಟಿ

 

ಚೂರು
ಪಾರಿನ ಆಸೆಗಳು

ಕವಿದ
ಕತ್ತಲೊಳ ಕನಸ್ಸುಗಳು

ಬೆನ್ನ
ತಟ್ಟಿ ಮತ್ತೆ ಮತ್ತೆ

ಎಚ್ಚರಿಸಿ
ಕಾಡುತಿವೆ,

ನಲುಗಿದೆಯ
ನೋಟ

ಬಿಗಿದ
ಬಿಸುಪಿನ ಆಟ

ಎತ್ತಲೋ
ಸುಳಿದು ಸುಮ್ಮನಾಗಿದೆ.

 

ಯಾರೋ
ಕರೆದರು ನನ್ನ

ಮೆದುವಾಗಿ
ಮೃದುವಾಗಿ,

ಹೊರಟು
ಬಿಡಬೇಕಿದೆ

ಸ್ಥಾವರವ ತೊರೆದು.

 

ಮಾಗಿದೆದೆಯ
ಮುಗ್ಧ

ಮೌನ
ವಿಡಿದೆಳೆಯುತ್ತಿದೆ

ಬೇಡ
ಬೇಡವೇ ನನಗೆ

ಇಲ್ಲಿನ ದೊಂಬರಾಟ.


ಚಿತ್ರ: koolcampus.files.wordpress.com                                                          

                                                                                  -ವಸಂತ್ ಕೋಡಿಹಳ್ಳಿ

                                                                                          ಮಾಲೂರು

ಲೇಖಕರು

ವಸಂತ್

ವಸಂತ್

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನ ಹವ್ಯಾಸ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಮತ್ತು ಕೆಲಸ ಮಾಡುವುದಿದ್ದೆ ಇದೆ. ಆದರೆ ನಾನು ಯಾವುದರಲ್ಲು ಪರಿಪಕ್ವವನ್ನುಗಳಿಸಲು ಸಾಧ್ಯವಾಗಲಿಲ್ಲ. ನನ್ನ ಬರಹಗಳು ನನಗೆ ಪೂರ್ಣವಾಗಿ ವಿಶ್ವಾಸವನ್ನು ತಂದುಕೊಟ್ಟ ನಂತರವೇ ಮುಂದಿನ ಮಾತನ್ನು ಹೇಳಬಲ್ಲೆ. ಆದರೂ ಸದಾ ನನ್ನ ಪ್ರಯತ್ನ ಮುಂದುವರೆಯುತ್ತಲೆ ಇರುತ್ತದೆ. ಆ ಪ್ರಯತ್ನವನ್ನೆ ಈ ಬ್ಲಾಗಿನಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮಗೆ ಇಷ್ಟವಾದರೂ ಓದಿ ಅಥವಾ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ. ನಿಮ್ಮ ಸಲಹೆಗಳನ್ನು ನನ್ನ ಇ ಮೇಲ್ ವಿಳಾಸಕ್ಕೆ ಬರೆಯಲು ಮರೆಯದಿರಿ. ಇಂತಿ ನಿಮ್ಮ ವಸಂತ್. (vasanth3117@gmail.com) ಮತ್ತು ಇದು ನನ್ನ ಬ್ಲಾಗ್ ವಿಳಾಸ (vasanthrr.blogspot.com)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.