Skip to main content

ಕನ್ನಡ ಪೌರಾಣಿಕ ದಾರಾವಾಹಿಗಳು ಇನ್ನೂ ಹಳೆಯ ಕಾಲದಲ್ಲಿವೆಯೇ?

ಬರೆದಿದ್ದುJune 8, 2014
1ಅನಿಸಿಕೆ

ನಿನ್ನೆ ಈ ಟಿವಿ ಕನ್ನಡದಲ್ಲಿ ಶ್ರೀನಿವಾಸ ಕಲ್ಯಾಣ ನೋಡುತ್ತಿದ್ದೆ. ಆಗ ನನ್ನ ಗಮನ ಸೆಳೆದಿದ್ದು ಅದರ ನಾಟಕೀಯ ಡೈಲಾಗ್  ಡೆಲಿವರಿ. ತೀರಾ ಕೃತಕ ಹಾಗೂ ಗದ್ಯವನ್ನು ಓದಿದಂತೆ ಎನಿಸುವ ಈ ಡೈಲಾಗ್ ಅನ್ನು ಕೇಳಿದಾಗ ಆಕಳಿಕೆ ಬರುವದು ಒಂದೇ ಬಾಕಿ! ಕೆಲವೊಂದು ಕಡೆ ನಾಟಕ ನೋಡಿದಂತೆ ಭಾಸವಾಗುತಿತ್ತು.  ಅದಕ್ಕೆ ತಕ್ಕಂತೆ ನಿದಾನಗತಿಯ ನಿರೂಪಣೆ. ಹಳೆಯ ೧೯೬೦ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ ಕಂಡ ಹಾಗೆ ಅನುಭವ. ನನ್ನ ಅನಿಸಿಕೆ ಏನೆಂದರೆ ಕಾಲಮಾನಕ್ಕೆ ತಕ್ಕಂತೆ ಸಂಭಾಷಣೆ, ನಿರೂಪಣೆ ಬದಲಾಗಬೇಕು. ಕಡಿಮೆ ತಾಳ್ಮೆ ಹೊಂದಿರುವ ಈಗಿನ ಯುವ ಪೀಳಿಗೆಗಳನ್ನು ಸೆಳೆಯಲು ವೇಗದ ನಿರೂಪಣೆ, ಸುಲಭ ಸಂಭಾಷಣೆ ಅತ್ಯಗತ್ಯ.

ಇದೇ ಮಾತು ಕನ್ನಡ ಮಹಾಭಾರತಕ್ಕೆ ಕೂಡಾ ಅನ್ವಯಿಸುತ್ತದೆ. ಆ ಸಿರಿಯಲ್ ಕೂಡಾ ನಾನು ಕೆಲವೊಮ್ಮೆ ನೋಡಿದ್ದೇನೆ. ಅಲ್ಲಿಯೂ ನಾಟಕೀಯ ನಿರೂಪಣೆ. ಇನ್ನೂ ಆ ದಾರಾವಾಹಿ ಪ್ರಸಾರವಾಗುವ ಸಮಯ ನನ್ನಂತಹ ೭ಗಂಟೆಗೆ ಮನೆಗೆ ಬರುವವರಿಗೆ ನೋಡಲು ಸೂಕ್ತವಲ್ಲ.

ಇದೇ ಮಾತು ಹಿಂದಿಯಲ್ಲಿ ಸ್ಟಾರ್ ಪ್ಲಸ್ ಅಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ್ ಗೆ ಅನ್ವಯವಾಗುವದಿಲ್ಲ. ಅಲ್ಲಿ ಸಹಜ ಅನ್ನಿಸುವಂತಹ ಮಾತು, ವೇಗದ ನಿರೂಪಣೆ ಅಷ್ಟೇ ದೃಶ್ಯ ವೈಭವ ಇದೆ. ನಾವು ಅವುಗಳಿಂದ ಕಲಿಯಬೇಕಾದದ್ದು ತುಂಬಾ ಇದೆ.

ಇನ್ನೊಂದು ವಿಷಯ ಏನೆಂದರೆ ಹಿಂದಿಯಲ್ಲಿ ೮ ವರ್ಷಗಳ ಹಿಂದೆ ಬಂದ ಫುಲ್ ಎಚ್ ಡಿ ಫಾರ್ಮಾಟ್ ಅಲ್ಲಿ ಹೈ ಕ್ವಾಲಿಟಿ ವಿಡಿಯೋದಲ್ಲಿ ಪ್ರಸಾರವಾದರೆ ಕನ್ನಡದಲ್ಲಿ ಅಜ್ಜನ ಕಾಲದ ಸಾದಾ ಎಚ್ ಡಿ ಫಾರ್ಮಾಟ್ ಬಳಸುತ್ತಿರುವದು! ಕನ್ನಡದ ವಿಡಿಯೋ ಸುಧಾರಿಸಲು ಇನ್ನೆಷ್ಟು ವರ್ಷ ಬೇಕು?

ಕನಿಷ್ಟ ಮುಂದಿನ ದಿನಗಳಲ್ಲಾದರೂ ಕನ್ನಡ ಪೌರಾಣಿಕ ಅಥವಾ ಕೌಟುಂಬಿಕ ದಾರಾವಾಹಿ ನಿರ್ದೇಶಕರು ಮಾತನ್ನು ಸಹಜ ಹಾಗೂ ಸರಳ ನಾಟಕೀಯ ಅಥವಾ ಗ್ರಾಂಥಿಕ ಅನ್ನಿಸದಂತೆ ಮಾಡಲು ಪ್ರಯತ್ನಿಸುತ್ತಾರೆಂದು ಬಯಸೋಣ. ನಿಮ್ಮ ಅನಿಸಿಕೆ ಏನು?

ಶ್ರೀನಿವಾಸ ಕಲ್ಯಾಣ ಹಾಗೂ ಹಿಂದಿ ಮಹಾಭಾರತದ ವಿಡಿಯೋ ನಿಮ್ಮ ಹೋಲಿಕೆ ಮಾಡಲು ಅನುಗುಣವಾಗುವಂತೆ ನೀಡಲಾಗಿದೆ. ಅದರ ಡೈಲಾಗ್ ಡೆಲಿವರಿ ವ್ಯತ್ಯಾಸ ಗಮನಿಸಿ. ಕನ್ನಡ ಮಹಾಭಾರತದ ಡೈಲಾಗ್ ಡೆಲಿವೆರಿ ಕೂಡಾ ಹೆಚ್ಚು ಕಡಿಮೆ ಶ್ರೀನಿವಾಸ ಕಲ್ಯಾಣದಂತೆಯೇ ಇದೆ.

 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ಶಿವರಾಂ ಎಚ್ ಮಂಗಳ, 06/10/2014 - 09:32

ರಾಜೇಶ್ ಹಗಡೆಯವರೇ,

ನಿಮ್ಮ ಹೇಳಿರುವುದು ಸರಿಯಾಗಿಯೇ ಇದೆ. ಕನ್ನಡ ಧಾರಾವಹಿಗಳು ಹೀಗೇಕೆ...? ಎಂದು ಅನಿಸುತ್ತದೆ. 

ನಾನು ಒಬ್ಬ ಲೇಖಕನಾಗಿ ಹೇಳಬೇಕೆಂದರೆ, ಪೌರಾಣಿಕ ಕಥೆಗಳೆಂದರೆ, ಕೇವಲ ಹಳೆಯ ಮೌಢ್ಯದ ಕಥೆಗಳೇನಲ್ಲ,

ಅವುಗಳ ಒಳ ಹೊಕ್ಕು ನೋಡಿದರೆ, ಮೂಲ ಕಥೆಗೆ ಚ್ಯುತಿಬಾರದಂತೆ, ಇಂದಿನ ಆಧುನಿಕ ಜೀವನಕ್ಕೆ ಕನ್ನಡಿ ಹಿಡಿಯಬಲ್ಲ ಸಾಮಾಜಿಕ ಮೌಲ್ಯಗಳಿರುತ್ತವೆ. ಅವುಗಳನ್ನು ಚಿತ್ರ ಕಥೆ ಸಂಭಾಷಣೆಯಲ್ಲಿ ಖಂಡಿತ ನಿರೂಪಿಸಲು ಸಾಧ್ಯವಿದೆ ಎಂಬುದು ನನ್ನ ಹದಿನಾರುವರುಷಗಳ ಅಧ್ಯಯನದ ಫಲವೇ ಆದ ನನ್ನ ಪೌರಾಣಿಕ ಕೃತಿ- "ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ"  ಇದು ಶ್ರೀನಿವಾಸ ಕಲ್ಯಾಣ ಕಥೆಯನ್ನೇ ಪುನರ‍್ ಚಿಂತನೆಗೆ ಹಚ್ಚುವ ಸಮಕಾಲೀನ ಜೀವನ ಮೌಲ್ಯಗಳನ್ನು ಒಳಗೊಂಡಿರುವ ಕೃತಿಯಾಗಿದೆ.  ಧಾರಾವಾಹಿಯಾಗಿ ನಿರ್ಮಿಸಲು ಸೂಕ್ತವಾಗಿವೆ ಎಂದರೆ, ನನ್ನ ಕೃತಿಯ ಬಗ್ಗೆ ನಾನೇ ಹೊಗಳಿಕೊಂಡಂತೆ. ಆದರೆ, ಆಸಕ್ತರು ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ ಪುಸ್ತಕವನ್ನು ತರಿಸಿಕೊಂಡು ಪರಿಶೀಲಿಸಬಹುದೆಂದು ವಿನಂತಿಸುತ್ತೇನೆ.

-ಎಚ್.ಶಿವರಾಂ, ಬೆಂಗಳೂರು

ritershivaram@gmail.com

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.