Skip to main content

ಸಿದ್ದೆಗೌಡನ ಮದುವೆ : ಬಳ್ಳಾರಿ ಹಳ್ಳಿಯ ಕನ್ನಡ ಭಾಷೆ

ಬರೆದಿದ್ದುMay 30, 2014
noಅನಿಸಿಕೆ

            ಅಜ್ಜಿ ಮೊಮ್ಮಗನನ್ನು ಕುರಿತು "ಎದ್ದೇಳೋ ಇನ್ನು ಎಷ್ಟೊತ್ತು ಹಾಸಿಗೆ ಮೇಲೆ ಬಿದ್ದಿರುತೀ? ಮುಸಿಡಿಗೆ ನೀರ್ಹಾಕೋ ಕಾಪಿ  ಮಾಡಿನಿ ಕುಡಿದು ದನಗಳಿಗೆ ಮೇವು ಹಾಕು, ಮುಸಿರಿ ನೀರು ಕುಡಿಸು, ಹೊಲಕ್ಕೆ ಹೋಗಬೇಕು, ಆಳು ಬಂದಾವ ನೋಡು" ಮೊಮ್ಮಗ ಮುಖ ತೊಳೆದುಕೊಂಡು ಕಾಪಿ ಕುಡಿದು ದನಗಳ ಕೆಲಸ ಮಾಡಿ ಚಂಬು ತೆಗೆದುಕೊಂಡು ಹೊರಗಡೆ ಹೋಗಿ ಬರುತ್ತಾನೆ. 

ಮನೆಗೆ ಬಂದವನೇ "ಯಂಗೆ ನೀರು ಕಾದಾವ, ಯರಕೊಂಡುತೀನಿ" ಅಜ್ಜಿ " ಸೋಬ್ಬು ಅಲ್ಲೇ ಇದೆ ಬಿರ್ರನೆ ಬಾ,ನಿನಗಂತ ಮಜ್ಜಿಗೆ ಕಟ ಅಂಬಲಿ ಮಾಡಿನಿ, ಬುತ್ತಿಗೆ ನವಣೆ ಅನ್ನ, ತೊವೆ ಮಾಡಿನಿ,ಜೊತೆಗೆ ಕಡ್ಲೆಪುಡಿ, ಗುರಲು ಪುಡಿ ಐತಿ," 
ರಾತ್ರಿಗೆ ಅಜ್ಜಿ ಮೊಮ್ಮಗನಿಗೆ ರೊಟ್ಟಿ, ಹೆಣ್ಬಬದನೆ ಕಾಯಿ, ಚವಳೇ ಕಾಯಿ ಮಾಡಿರುತ್ತಾಳೆ. ಅಜ್ಜಿ " ಗಂಗಳ ಟೋಗೊ, ಗಡದ್ದಾಗಿ ಊಟ ಮಾಡು, ನಿನಗೆ ಒಂದು ಪಿಳ್ಳೆ ನೋಡಿನಿ, ನಿನ್ನ ಲಗ್ನ ಜಲ್ದಿ ಮಾಡಬೇಕು, ನನಗು ವಯಸಯಿತು" " ಯವ್ವ ಯಾರಕಿ?" ಅಜ್ಜಿ ಅದೇ ಬಂಡೆಗೌಡನ ಮಗಳು ಎಂಟುನೆ ಕ್ಲಾಸ್ ಒದಳಂತೆ ಬೆಶಾಗಿ ಅಡಿಗಿ ಮಾಡತ್ತಳಂತೆ, ಅಸಿಟ್ಟು, ಮಂಡಾಲ ವಗ್ಗರಿಣಿ ಹಿಟ್ಟಚಿದ ಮೆನಸಿನಕಾಯೇ  ಯಲ್ಲ ಮಾಡುತ್ತಾಳಂತೆ, ಹುಡಿಗ್ಗೆ ಕಾಸಿನ ಸರ, ಅವಲಕ್ಕಿ ಸರ, ನಿನಗೆ ವಾಚು ಉಂಗರ ಕೊಡುತ್ತಾರಂತೆ"
ಕನ್ಯೆ ಯನ್ನು ನೋಡಿದರು, ಮದುವೆ ನಿರ್ಧಾರ ಆಯಿತು. ಅಜ್ಜಿ ಮನೆ ವರಸಿನ ಮೇಲೆ ಕುಳಿತು " ಮನಿಗೆ ಸುಣ್ಣ ವಡಿಸಬೇಕು,ಮನೆಗೆ  ಚಟ್ಟ ನಿನ್ನ ಸೋದರತ್ತೆಗೆ ಹೇಳಬೇಕು,ಮ್ಯಾಳ ದವರಿಗೆ ಹೇಳಬೇಕು, ಅಗಸರಿಗೆ, ಬಳೆಗಾರನೆಗೆ ಹೇಳಬೇಕು ಇತ್ತ್ಯಾದಿ " ಹೇಳುತಿದ್ದಳು.
ಮದುವೆ ಮುಗಿತು ಆರಕ್ಷತೆ ಮಾಡುವಾಗ ಗಂಡ ಹೆಂಡತಿ ಹೆಸರು, ಹೆಂಡತಿ ಗಂಡನ ಹೆಸರು ಹೇಳಬೇಕು. ಇಲ್ಲಿ ಮೊದಲು ಹೆಂಡತಿ ಗಂಡನ ಹೆಸರು ಹೇಳಿದಳು.
ನಮ್ಮೂರು ದಾಗ ಬಹಳ ಬಿಸಿಲು,
ಹಾಕೊಂಡಾರ ತಲಿಗೆ ರುಮಾಲು,
ಮಾಡ್ತಾರಂತೆ ನಂಗ ಕಮಾಲು,
ಸಿದ್ದೆ ಗೌಡ್ರುಗೆ ನಾನೇ ಸವಾಲು 
ಈಗ ಗೌಡನ ವಡಪು, ಪಾಪ ಗೊತ್ತಿಲ್ಲ ವಡಪು ಹೇಳಲು, ಸ್ನೇಹಿತರು ಬೇಡವಲ್ಲರು,ಒಂದು ತೆಲುಗು ಸಿನಿಮಾ ಹಾಡು ನೆನಪಾಯಿತು.
ಆ ಅಂದ್ರೆ ಅಮಲಾಪುರ,
ಈ ಅಂದ್ರೆ ಇಮಲಾಪುರ,
ಬಾ ಅಂದ್ರೆ ಭಾಗ್ಯಶ್ರಿ 

 

ಲೇಖಕರು

Manjunath Bangar

ವಿಶ್ವ ಮಾನವ ನಾನು, ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.