Skip to main content

ಕಾಡುವ ಹುಡುಗಿಗೆ ಕಾದಿದೆ ಮನ

ಇಂದ ಋಣಿ
ಬರೆದಿದ್ದುMarch 10, 2014
noಅನಿಸಿಕೆ

 

ಕಾಡುವ ಹುಡುಗಿಗೆ ಕಾದಿದೆ ಮನ  ಮನ  

ಕಾಡುವ ಹುಡುಗಿಗೆ ಕಾದಿದೆ ಮನ //

ನೋಡಬಲ್ಲನೆ ಒಂದು ದಿನ, ಅವಳೊಂದಿಗೆ ನಡೆಯಬಲ್ಲನೆ ಅನುಕ್ಷಣ //

ಕಾಡುವ ಹುಡುಗಿಗೆ ಕಾದಿದೆ ಮನ.. 

ಕಾದು ಕುಳಿತ ಮನದ ತಳಮಳ ಎದೆಯೋಳಗಿಂದು ಹಾಡುತಿದೆ,//

ಕನಸ ಕಾಣದ ಕಣ್ಣುಗಳೊಳಗೆ ಅವಳನೇ ಬಿಂಬಿಸೋ ಹಠವಿದೆ 

ಎದುರಾಗುವಳೋ ಅವಳು ಎದೆ ಸೇರುವಳೋ ಅವಳು 

ಎಲ್ಲಿ ಹುಡುಕಲಿ  ಅವಳ ನಾ , ಅವಳಲಿ  ಹೇಗೆ ತಿಳಿಸಲಿ ಒಲವನ (ಕಾಡುವ ಹುಡುಗಿಗೆ )

 

ಸಾವಿರ ಮನಗಳು ಸನಿಹವಿದ್ದರು ಅವಳದೇ ಚಿಂತೆ ಕಾಡುತಿದೆ //

ಕಾಣದ ಊರಲಿ ಕಾಡುತ ಹೀಗೆ ಕುಳಿತವಳು ಅವಳಂತೆ 

ಅಸ್ಪಷ್ಟತೆ,ಅಪರಿಚಿತತೆ

ಕೂಗಿ ಕರೆದಿದೆ ನನ್ನ ಎದೆ  , ಹಾಗೆ ನೀ ತಿರುಗಿ ಹೋದೆಯ ಗುರುತಿಸದೆ..  (ಕಾಡುವ ಹುಡುಗಿಗೆ)

 

ಹಗಲು ಬೆಳಕಿನಲ್ಲಿ ಹೊಳೆಯಲೊರಟಿರುವ ಮಿಂಚುಹುಳುವು ನಾನು 

ಒಮ್ಮೆಯಾದರು, ಒಮ್ಮೆಯಾದರು, ಒಮ್ಮೆಯಾದರು   ನಿನ್ನ ಮುಂದೆ ಹೊಳೆಯ ಬಲ್ಲನೆನು  

ಹಗಲು ಬೆಳಕಿನಲ್ಲಿ ಹೊಳೆಯಲೊರಟಿರುವ ಮಿಂಚುಹುಳುವು ನಾನು 

ಒಮ್ಮೆಯಾದರು ಬಣ್ಣದ ಬೆಳಕಲಿ ಸೆಳೆಯಬಲ್ಲನೆನು, ಸೆಳೆಯಬಹುದೇ ನಾನು  ಅವಳ ಬದುಕಿನಲಿ ಉಳಿಯಬಹುದೇ ನಾನು,  ಉಳಿಯಬಹುದೇ ನಾನು,   ಉಳಿಯಬಹುದೇ ನಾನು...

(G S ಶಿವರುದ್ರಪ್ಪ ರವರ ಭಾವನೆ ಬರಹಕ್ಕೆ ನನ್ನದೇ ಆದ ಅಕ್ಷರ ರೂಪ ನೀಡಿದ್ದೇನೆ,

C ಅಶ್ವತ್ ರವರ ರಾಗ ಸಂಯೋಜನೆಯಾ ಗೀತೆಯೊಂದಿಗೆ ಗುನುಗಿಕೊಂಡರೆ ಚೆಂದವೆನಿಸಬಹುದು..

ಒಂದು ವೇಳೆ ಅಭಾಸವೆನಿಸಿದರೆ ಅದಕ್ಕಾಗಿ ಕ್ಷಮೆ ಇರಲಿ )

 

 

ಲೇಖಕರು

ಋಣಿ

ನಿರೀಕ್ಷೆ

ಸಾಮಾನ್ಯ ಹೆಸರು, ಸಾದಾರಣ ರೂಪು, ಸಪ್ಪೆ ಅನಿಸುವ ಭಾವನೆವುಳ್ಳ ಸೋಮಾರಿ..........

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.