Skip to main content

ಹುಚ್ಚಾಗಿ ಹಚ್ಚಿಕೊಳ್ಳಲು ನೀನ್ಯಾರು ನನಗೆ..?

ಇಂದ radhika bhat
ಬರೆದಿದ್ದುFebruary 11, 2014
noಅನಿಸಿಕೆ

ನನ್ನಲ್ಲಿ ಇದ್ದಿದ್ದು ಮೌನದ ಕಾಲ
ನಗುವೊಂದಿತ್ತು ಭಾವ ಬಂಧ ಮರೆಯಲು..
ಕಳೆದ ಖುಷಿ ಹೊಸ ನೋವು ನಿನಗಾಗಿ ಕೊಡಲು ಏನಿಲ್ಲ ಎನ್ನಲ್ಲಿ..

ಮತ್ತದೇ ಕಾರಣವಿಲ್ಲದ ನಗು..
ನನ್ನೊಳಗಿನ ನೋವ ಮರೆಸಲು..
ಬೇರೆ ಯಾರಿದ್ದರು..ನನ್ನೊಂದಿಗೆ..ಹೆಸರಿಗೆ ಬಿಟ್ಟರೆ..
ನೀನಿಲ್ಲದಿದ್ದರೂ ಬದುಕುತ್ತಿದ್ದೆ ಹಳೆಯ ನೆನಪುಗಳೊಂದಿಗೆ..
ಬಂದಾಗ ಈಗ ಹೇಗಿರಲಿ ನೀ ಇಲ್ಲದೆ..
ಹೆಗಲಾಸರೆ ಇಲ್ಲದೆ ಧರೆಗುರುಳುವೆ ನಾನು..
ಬೇಕಿತ್ತೆ ಎನಗೆ ಹುಚ್ಚು ನಗುವೊಂದೆ ಸಾಕಿತ್ತು..
ಈಗ ನೀ ಇಲ್ಲದೆ ಹೇಗಿರಲಿ ಒಂಟಿ ಪಯಣಿಗಳಾಗಿ..
ಹುಚ್ಚಾಗಿ ಪ್ರೀತಿಸಲು ನೀನ್ಯಾರು ನನಗೆ..?

ಲೇಖಕರು

radhika bhat

ಹಂಸಧ್ವನಿ

ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
www.manjinahadi.blogspot.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.