Skip to main content

 ಗಂಡಸರು ಏಕಾಂಗಿಯಾಗಿದ್ದರೆ ಯಾರೂ ತಲೆಕೆಡಿಸಿಕ್ಕೊಳ್ಳೊಲ್ಲ ಅವನಿಷ್ಟ ಬಿಡು ಅಂತಾರೆ ಅದೇ, ಹೆಣ್ಣು ಒಂಟಿಯಾಗಿದ್ರೆ

ಪ್ರತಿಯೊಬ್ಬರೂ  ಅವಳ ಬದುಕಿಗೆ ಜೊತೆಯಾಗೋಕೋ  ಅಥವಾ ಅವಳ ಕಷ್ಟಗಳಿಗೆ ಸ್ಪಂದಿಸೋಕೆ ನೋಡುತ್ತಾರೆ ಅವಳ ಪಾಡಿಗೆ ಅವಳನ್ನ

ಬದುಕೋಕೆ ಬಿಡಲ್ಲ ಯಾಕೆ?

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

RKUMAR ಭಾನು, 01/05/2014 - 17:38

 

ಪ್ರಪಂಚದಲ್ಲಿ ನಿಥ್ಯ ನಡಯುವ ಸಾಮನ್ಯ ಸುದ್ದಿಗಳು    

Vinaya.g ಶನಿ, 01/11/2014 - 14:08

ಯಾಕೆಂದರೆ ಅವಳು ಹೆಣ್ಣು .................

ಈ ಪ್ರಪಂಚದಲ್ಲಿ ಹೆಣ್ಣಿಗೆ ಒಂಟಿಯಾಗಿರಲು ನಮ್ಮ ಸುತ್ತ ಮುತ್ತ ಜನ ಬಿಡುವುದಿಲ್ಲ ಅದು ಅವರ ಕೆಳವರ್ಗದ ಮನಸ್ಸು ಹೇಮರವರೇ

ಹೇಮಾವತಿ ಗುರು, 01/30/2014 - 13:13

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು  ಕುಮಾರ್ ಮತ್ತು ವಿನಯ್ ರವರೇ.

 

chidanand g. wali ಶನಿ, 05/17/2014 - 01:46

ಅದೆ ಸಮಸ್ಯೆಯಾಗಿರೊದು. ಕೆಲ್ಸ್ ಬಿಟ್ಟು ಬೇರೆನೆ ಯೊಚನೆ ಮಾಡೊ ಗಂಡಸರು ಇರೊದ್ರಿಂದ ಹಾಗಾಗತ್ತೆ.

ರವಿಶಾಂತ್ ಶನಿ, 07/12/2014 - 12:34

ಆತೀಯ ಹೇಮರವರೆ,

ನಮ್ಮದು ಪುರುಷ ಪ್ರದಾನ ಸಂಸ್ಕೃತಿಯಲ್ಲವೆ,

ಹಾಗಾಗಿ "ಹೆಣ್ಣು" ಒಬ್ಬೊಂಟಿಯಾಗಿ ತನ್ನ ಬದುಕನ್ನು ಸಾರ್ಥಕಗೊಳಿಸುವುದನ್ನು ಸಹಿಸದ ಹಲವರು,

ಅವಳ ಚಿಂತನಾಶಕ್ತಿಗೆ, ಅಥವ ಕಲ್ಪನಾಶಕ್ತಿಗೆ, ತನ್ನದೇನಾದರು ಸಹಾಯವಿರಲಿವೆಂಬ ಪರಿಕಲ್ಪನೆಯು ಇರಬಹುದು.

ಇಲ್ಲಿ ಅಂದರೆ ವಾಸ್ತವವಾಗಿ ಹೇಳುವುದಾದರೆ, ಎರಡು ರೀತಿಯಲ್ಲಿ ಗಮನಿಸಿ,

ಪ್ರಥಮವಾಗಿ.) ಹೆಣ್ಣಿನ ಬಗ್ಗೆ ಗೌರವವಿರುವವರು ಆಕೆಗೆ ಇರುವ ಸಮಸ್ಯೆಯನ್ನು ಅರಿತು ಅವಳಿಗೆ ಸಹಾಯ ಹಸ್ತನೀಡಬಯಸುತ್ತಾರೆ.

ದುಷ್ಕರ್ಮಿಗಳಿಂದ ಅವಳಿಗೇನಾದರು ಆಗಬಹುದೆಂಬ ಆತಂಕದಿಂದ ಕರುಣೆಯಿಂದ ಕಾಳಾಜಿವಹಿಸಬಹುದು.

ದ್ವಿತೀಯವಾಗಿ,) ಹೆಣ್ಣನ್ನು ಭೋಗದವಸ್ತುವಾಗಿ ಕಾಣುವವರು, ಆಕೆ ಏಕಾಂಗಿಯಾಗಿ ಸಿಗುವುದನ್ನೆ ಕಾಯುತ್ತಿರುತ್ತಾರೆ,

ಇವರಲ್ಲಿ ಕಾಮತುಂಬಿದ ಕರುಣೆಯ ಕಪಟನಾಟಕವಿರುತ್ತೆ,

ಇದರಮದ್ಯೆ ಮತ್ತೇನನ್ನು ಹೇಳಲು ನನಗರಿವಿಲ್ಲ.

ತಪ್ಪಿದಲ್ಲಿ ಕ್ಷಮೆ ಇರಲಿ.

ದನ್ಯವಾದಗಳೊಂದಿಗೆ,

ರವಿಶಾಂತ್.

Vass ಧ, 07/16/2014 - 12:10

ಹೇಮಾವತಿಯವರೆ, 

ನಮ್ಮ ಪುರುಷ ಪ್ರಧಾನ ಸಂಸ್ಕ್ರುತಿಯ ಪ್ರಭವದಿಂದಲೇನೊ ನೀವು ಇಲ್ಲಿ ಎತ್ತಿರುವ ಸಮಸ್ಯೆ ನಿಜ ಇರಬಹುದು.

ಆದರೆ ಕಾಲ ಬದಲಾಗುತ್ತಿದೆ. ಇವತ್ತಿನ ಮಟ್ಟಿಗೆ ಯಾರೊಬ್ಬರು ತಮ್ಮಷ್ಟಕ್ಕೆ  ತಾವೆಂಬಂತೆ  ಬದುಕಲು ಸಾಧ್ಯವಿಲ್ಲದಷ್ಟು ಜಂಜಡಗಳನ್ನು ನಾವೇ

ಹೇರಿಕೊಂಡಿದ್ದೇವೆ. ಹಾಗಾಗಿ ಏಕಾಂತದ ಕೊರತೆ ಎಲ್ಲರಿಗೂ ಇದ್ದದ್ದೆ, ಅದಕ್ಕೆ ಗಂಡು ಹೆಣ್ಣು ಎಂಬ ಭೇದವಿಲ್ಲ. ಅಷ್ಟಕ್ಕು ಏಕಾಂತವೆಂಬುದು 

ಸಿಗುವುದಂತದ್ದಲ್ಲ ಸ್ಱುಷ್ಟಿಸಿಕೊಳುವಂತದ್ದು. ಪರರ ಚಿಂತೆಯನು  ಮರೆತು ತನ್ನ ತಾ ಅರಿತವನಿಗೆ ಯಾವುದರ ಕೊರತೆ ಕಾಡುವುದು ಹೇಳಿ?

ಪ್ರಯತ್ನಿಸಿ ನೋಡಿ.

ಧನ್ಯವಾದಗಳು.

ಹೇಮಾವತಿ ಗುರು, 07/17/2014 - 10:45

ಧನ್ಯವಾದಗಳು ರವಿಶಾಂತ್  ರವರೇ ,ನಿಮ್ಮ ಈ ಅನಿಸಿಕೆ ನಿಮ್ಮ ಸಹೃದಯಕ್ಕೆ ಹಿಡಿದ ಕನ್ನಡಿಯಂತೆ .  ನಮ್ಮ ಪುರುಷ ಪ್ರದಾನ ಸಂಸ್ಕೃತಿಯಲ್ಲಿ ಎಲ್ಲಾ ಪುರುಷರೂ   ಮಹಿಳೆಯರ ಬಗ್ಗೆ

ಈ ರೀತಿ  ಒಳ್ಳೆಯ ಭಾವನೆಗಳನ್ನು ಹೊಂದಿದ್ದರೆ ನಮ್ಮಸಮಾಜದಲ್ಲಿ ದಿನನಿತ್ಯ  ಹೆಣ್ಣಿನ ಮೇಲೆ ನಡೆಯುತ್ತಿರುವ ಎಷ್ಟೋ  ದೌಜ್ಯನ್ಯಗಳು ಎಷ್ಟೋ ಹಿಂಸೆಗಳನ್ನು ತಡೆಗಟ್ಟಬಹುದು.

ನಮ್ಮ ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಹಿರಿಯಣ್ಣನಂತೆ ಮಾದರಿಯಾದ ಸಂಸ್ಕೃತಿ ಅಂತ  ನಾಡಿನ ನಾವುಗಳು ಇಂದು ವಿಶ್ವಕ್ಕೆ ಎಂತಹ ಸಂದೇಶ ಸಾರುತ್ತಿದ್ದೇವೆ.

 ನೆನೆಸಿದರೆ ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಆತಂಕ ಶುರು ಆಗುತ್ತದೆ.

 

ಹೇಮಾವತಿ ಗುರು, 07/17/2014 - 10:53

ಧನ್ಯವಾದಗಳು Vass  ರವರೇ,  ನಿಮ್ಮ ಅನಿಸಿಕೆ 100ರಷ್ಟು ಸರಿಯಾಗಿದೆ. ನಮ್ಮ  ಏಕಾಂತ ನಮ್ಮ ಕಷ್ಟ, ಸುಖ ಎಲ್ಲದಕ್ಕೂ ನಾವೇ ಕಾರಣರರು. ನಮ್ಮ ಭವಿಷ್ಯದ ಶಿಲ್ಪಿಗಳು

ನಾವೇ ಎಂಬ ವಿವೇಕಾನಂದರ ಮಾತನ್ನು ನಂಬಿ ನಡೆಯುವವಳು ನಾನು. ಆದುದರಿಂದ ನಿಮ್ಮ ಅನಿಸಿಕೆ ನನಗೆ 100 ರಷ್ಟು ಅನ್ವಯಿಸುತ್ತದೆ.

  • 1739 views