Skip to main content

ಎಲ್ಲೋ ಎಡವಿದೆ..!!

ಇಂದ shyamili
ಬರೆದಿದ್ದುDecember 18, 2013
noಅನಿಸಿಕೆ

ನೋವು-ನಲಿವಿನ ಗುಣಾಕಾರ


ಭಾಗಾಕಾರಗಳ ಅನಂತ ಗಣಿತದ ಸ್ತರ


-ದಲ್ಲಿ ಎಲ್ಲೋ ತಪ್ಪಿಹೋಗಿದೆ!!


ನೋವು ಗುಣಾಕಾರವಾಗಿದೆ!?


 ನಲಿವು ಭಾಗಾಕಾರವಾಗಿದೆ?!


ಚಿಂತೆ ಸಂಕಲನವಾದರೆ,ಮನಸ್ಸೇ ವ್ಯವಕಲನ!!


ಬಹುಶಃ ಈ ಲೆಕ್ಕಾಚಾರವೇ ಗೋಜಲುಗೊಂಡಿದೆ॥


ಮಾಡಿದ್ದೇ ಒಂದು  ಉತ್ತರವೇ ಶೂನ್ಯ!


ನನ್ನ  ಉತ್ತರಗಳಿಗೂ ಈ ಉತ್ತರಗಳಿಗೂ ಹೋಲಿಕೆಯೇ ಮೌನ!!


ಒಂದು ಸ್ವಲ್ಪ ಹೊತ್ತು ಮನಮನದೊಳಗೆ ಮಮ್ಮಲಧ್ಯಾನ॥


ಕೇಳಲೆಂತು ಹೇಳಲೆಂತು??


ಯಾವ ಲೆಕ್ಕ ಮಾಸ್ತರರ ಬಳಿ ಹೋಗಲಿ..


ಉತ್ತರ ತಪ್ಪೆಂದು??


ಹೇಗೆ ಕಲಿಯಲಿ ಈ ಗಣಿತವ ಆದಶ್ಟು ಬೇಗ!?


ಸಾಬೀತು ಪಡಿಸಲು ಲೆಕ್ಕ ಸರಿಯೆಂದು!!

ಲೇಖಕರು

shyamili

ಪ್ರಣತಿ

ನಾನು ಪ್ರೋಗ್ರಾಮರ್(ಸಾಫ್ಟ್ವೇರ್ ಡೆವಲಪರ್) ಆಗಿ ಕೆಲಸ ಮಾಡುತ್ತಿದ್ದೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.