Skip to main content
Submitted by Vinaya.g on ಮಂಗಳ, 12/10/2013 - 15:01

ಪ್ರಿಯ ಸ್ನೇಹಿತರೇ ನನಗೆ ತಿಳಿಸಿ ಕಲ್ಲಿನ ಬಿಂಬಕ್ಕೆ , ಮಣ್ಣಿನ ಹುತ್ತಕ್ಕೆ ಹಾಲನ್ನು ಎರೆವ ಜನ ಎದುರು ಸರ್ಪ ಬಂದೊಡನೆ ಕಲ್ಲು ಹೊಡೆದು ಕೊಲ್ಲುವರು ಯಾಕೆ ಆ ಪ್ರಾಣಿಯು ನಮ್ಮಂತೆ ಒಂದು ಜೀವವಲ್ಲವೇ ಅದಕ್ಕು ಪ್ರಾಣವಿದೆ ಅಲ್ಲವೇ ಸ್ನೇಹಿತರೇ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರವಿಶಾಂತ್ ಶನಿ, 07/12/2014 - 13:00

ಸ್ನೇಹಿತರೆ, ತಮಗೊಂದು ಈ ಕಿರಿಯನ ನಮನ,

ನಿಮ್ಮ ಚರ್ಚೆಗಾಗಿ ಶರಣ ಬಸವಣ್ಣರ ವಚನಯೊಂದಿದೆ,

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;
ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋಜನವ ಇಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!.

ಆತ್ಮೀಯರೆ, ಜಗದೊಳು ಕ್ರಿಯೆಗೆ ಪ್ರತಿಕ್ರಿಯೆ ಇದ್ದೆಇರುತ್ತೆ,  "ತಾನೊಂದು ಬಗೆದೆಡೆ ದೈವವೊಂದು ಬಗೆವುದು"

ಈ ವಾಕ್ಯ ಎಷ್ಟರ ಮಟ್ಟಕ್ಕೆ ಸರಿಯೆಂಬುದನ್ನ ವಿವರಿಸು ಅಗತ್ಯವಿಲ್ಲವೆಂಬುದು ನನ್ನ ಅನಿಸಿಕೆ,

ಹಾಗೆಯೆ, ಮಾನವ ತನಗೆ ಮುಂದೆ ಒದಗುವ ದುಷ್ಪರಿಣಾಮದ ಬಗ್ಗೆ ಆ ಕ್ಷಣದಲ್ಲಿ ಚಿಂತಿಸುತ್ತಾನೆ ಹೊರತು, 

ತನ್ನಿಂದ ಯಾವುದೆ ಕ್ರಿಯೆಇಲ್ಲದೆ ಪ್ರತಿಕ್ರಿಯೆ ಬರಲಾರದು ಎಂಬುದನ್ನ ಆ ಕ್ಷಣದಲ್ಲಿ ಮರೆಯುತ್ತಾನೆ,

"ಮರೆವು ಸಕಲ ಮಾನವರ ದೈವ ಸಿದ್ದಿಯಲ್ಲವೆ".

ದನ್ಯವಾದಗಳೊಂದಿಗೆ,

ರವಿಶಾಂತ್.

  • 633 views