
ನೀನಿಲ್ಲದೆ ನನ್ನೊಳಗೆ.......
ಜಗತ್ತಿನ ಯಾವ ಹೆಣ್ಣಿನ ಮುಖವು ನಿನ್ನ ಹಾಗಿಲ್ಲ, ಕೇಳಸಿಗುವ ದ್ವನಿಗಳಿಂದೆ ಎಲ್ಲಿಯೂ ನೀನಿರುವುದಿಲ್ಲ,ನಿನ್ನಂತಹ ನೆರಳು ಇ ಪ್ರಕೃತಿಯಲ್ಲೆಲ್ಲಿಯು ಇಲ್ಲ,
ಮುಂದೊಂದು ದಿನ ಪ್ರತಿ ಮುಂಜಾವು ನಿನ್ನ ತೆಕ್ಕೆಯಲ್ಲೇ ಬಿಚ್ಚಿಕೊಳ್ಳುತಿತ್ತು, ಹಾಗೆಯೇ ಪ್ರತಿ ರಾತ್ರಿಯೂ ನಿನ್ನ ಬಂದನದೊಳಗೆಯೇ ಕಳೆದು ಹೋಗಲಿದ್ದವು, ಎಂಬುದು ಎಷ್ಟು ಸತ್ಯವೋ.... ಬೇರೊಬ್ಬರ ನೋಟದೊಂದಿಗೆ ಬೆರೆಯಲಾರದ ನನ್ನ ಕಣ್ಣುಗಳೊಳಗೆ ಇಂದು ನಿನ್ನ ಚಿತ್ರವು ಉಳಿದಿಲ್ಲ ಎನ್ನುವುದು ಅಷ್ಟೇ ಸತ್ಯ.
ಹಾಗೇ ಮತ್ತ್ಯಾವ ಪಿಸುಮಾತನ್ನು ಆಲಿಸಲೊಲ್ಲದ ಕಿವಿಯೊಳಗೆ ನಿನ್ನ ದ್ವನಿಯು ಅಪರಿಚಿತವಾಗಿದೆ ಎನ್ನುವುದು ನನಗೆ ಎಲ್ಲಿಲ್ಲದ ಸಮಾದಾನ, ನಿನ್ನ ನೆರಳಿಲ್ಲದೆ ಸುಟ್ಟ ಬಿರುಬಿಸಿಲು, ಸುರಿದ ಮಹಾಮಳೆ, ಸುಳಿದ ಕುಳುಗಾಳಿ ನಿನ್ನ ನೆನಪಿಸದೇ ಇರುವುದು ಖುಷಿಯಲ್ಲದೆ ಮತ್ತೇನು ? ಎಂದಿಗೂ ನಿನಗಾಗಿ ಹಾತೊರೆಯದ ರಾತ್ರಿಗಳು, ಮೈಮುರಿಯದ ಹಗಲುಗಳು ಇಂದಿಗೂ ನನ್ನೀ ಶಾಂತ ಚಿತ್ತಕ್ಕೆ ಕಾರಣವೆಂದರೆ ತಪ್ಪಲ್ಲ !
ಯಾವುದೋ ಅಮೂರ್ತ ಗಳಿಗೆಯಲ್ಲಿ ಬದುಕು ನಿನ್ನೊಂದಿಗೆ ತಳುಕು ಹಾಕಿಕೊಂಡ ಮಾತ್ರಕ್ಕೆ ಜೀವನ ಪೂರ್ತಿ ಜತೆಗಿರು ಎಂದು ಗೋಗರೆಯುವ ಜಾತಿಯವನಲ್ಲ ನಾನು. ನಡೆಯುವ ಕಾಲು ಎಡುವುವುದು ಸಹಜ ಹಾಗಂತ ಕಲ್ಲು ಸರಿಸಬೇಕೆ ಹೊರತು ಕಾಲ ಕತ್ತರಿಸುವುದು ಮೂರ್ಖತನ. ಇಷ್ಟಕ್ಕೂ ಮುರಿದು ಬಿದ್ದಿರುವುದು ಸಂಬಂದವೇ ಹೊರತು ನನ್ನೊಳಗಿನ ಆತ್ಮ ವಿಶ್ವಾಸವಲ್ಲ, ಸರಿದುಹೊಗಿರುವುದು ನೀನಷ್ಟೇ ಹೊರತು ಎದೆಯೊಳಗಿನ ಅನುರಾಗವಲ್ಲ.. ಉಳಿದುಕೊಂಡಿರುವ ಸ್ವಚ್ಚ ವ್ಯಕ್ತಿತ್ವಕ್ಕೆ ನೀನಿಲ್ಲದೆಯು ಈ ಬದುಕಿಗೊಂದು ಚಂದನೆಯ ಚೌಕಟ್ಟು ಕಟ್ಟಿಕೊಡಬಲ್ಲ ತಾಕತ್ತಿದೆ ಕಟ್ಟಿಕೊಂಡ ಚೌಕಟ್ಟಿನ ಮೇಲೆ ಇಂದಲ್ಲ ನಾಳೆ ಗೌರವಯುತ ಬದುಕೊಂದು ಎದ್ದು ನಿಲ್ಲುತ್ತದೆ ಅಂದು ನೀನಲ್ಲದಿದ್ದರು ಖುದ್ದು ಸಮಾಜವೇ ಪ್ರಶಂಸಿಸುತ್ತದೆ.
ಅಲ್ಪಜ್ಞಾನಿ
ಸಾಲುಗಳು
- 416 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ