Skip to main content

ಏಕಾಂಗಿತನ...!

ಇಂದ SATHISH GOWDA S
ಬರೆದಿದ್ದುSeptember 28, 2013
3ಅನಿಸಿಕೆಗಳು

ಏನನ್ನಾದರೂ ಬರೆಯಬೇಕೇಂದು ಎಲ್ಲಾ ಸಿದ್ದತೆಗಳನ್ನು ಮಾಡಿಕೋಂಡು ನಾಲ್ಕು ಗೋಡೆಯ ಮಧ್ಯದಲ್ಲಿ ಓಬ್ಬಂಟಿಯಾಗಿ ಕುಳಿತೇ, ಆ ನಾಲ್ಕು ಗೋಡೆಯ, ಒಂದು ಗೋಡೆಯಲ್ಲಿರುವ ಬಾಗಿಲನ್ನು

ಮುಚಿದ ತಕ್ಷಣ ನನಗನ್ನಿಸಿದ್ದು ಈ ಏಕಾಂಗಿತನದ ಬಗ್ಗೇ ಬರಯಬೇಕೆಂದು, ಏಕೆಂದರೆ ಇದನ್ನು ಬರೆಯಲು ಪ್ರಾರಂಬಿಸಿದ್ದು ಏಕಾಂಗಿಯಾಗಿ,,

ಮನುಷ್ಯ ಹುಟ್ಟುವಾಗ ಒಬ್ಬನೇ, ಸಾಯುವಾಗ ಒಬ್ಬನೇ,  ಈ ಹುಟ್ಟು ಸಾವಿನ ಮಧ್ಯದ ಜೀವನದಲ್ಲಿ ಅವನಿಗೆ ಎಷ್ಟೇ ಆಪ್ತರಿದ್ದರೂ, ಸಾಯುವಾಗ ಜೊತೆಯಲ್ಲಿ ಯಾರು ಬರುವುದಿಲ್ಲ,

ಏಕೆಂದರೆ ಪ್ರತಿಯೊಬ್ಬ ಮನುಷ್ಯನು ಏಕಾಂಗಿಯಾಗೇ ಸಾಯಬೇಕೆನ್ನುವುದು ಧೈವ ಇಚ್ಹೇ...

ಈ ಹುಟ್ಟು ಸಾವಿನ ನಡುವಿನ ಜೀವನದಲ್ಲಿ ನಮ್ಮ ಏಕಾಂಗಿತನವನ್ನು ದೂರ ಮಾಡುವುದೆ ಪ್ರೀತಿ ಮತ್ತು ಸ್ನೇಹ..

ಹೌದು ಈ ನಮ್ಮ ನಾಲ್ಕು ದಿನದ ಜೀವನದಲ್ಲಿ ನಾವು ಪ್ರೀತಿಯಿಂದ ಪಡೆಯುವುದು ಸ್ನೇಹ, ಅದೇ ಸ್ನೇಹದಿಂದ ಪಡೆಯುವುದು ಪ್ರೀತಿ,

ನಮಗೆ ತಿಳಿಯದ ಯಾವುದೋ ಒಬ್ಬ ಅಪರಿಚಿತ ವ್ಯಕ್ತಿ, ಪರಿಚಿತವಾದ ಮೇಲೆ ಅವರಿಬ್ಬರ ನಡುವಿನ ಸಂಭದಕ್ಕೇ ನಾವಿಡುವ ಹೆಸರೆ, ಸ್ನೇಹ.

ಅದೇ ಸ್ನೇಹದಿಂದ ತುಂಬಾ ಆತ್ಮಿಯವಾಗಿ, ಗೌರವದಿಂದ, ಭಾವನಾತ್ಮಕವಾಗಿ, ತುಂಬಾ ಸಲುಗೆಯಿಂದ ಅವರ ಜೋತೆಯಲ್ಲಿ ನಾವಿದ್ದರೇ ಆ ನಡುವಿನ ಸಂಭಂದಕ್ಕೆ ನಾವಿಡುವ ಹೆಸರೆ ಪ್ರೀತಿ.

ಮನುಷ್ಯನ ಜೀವನದಲ್ಲಿ ಈ ಏಕಾಂಗಿತನವನ್ನು ಹೊಗಲಾಡಿಸಲು ನಮ್ಮ ಜೊತೆ ಸದಾ ಇರುವ ಇ ಸ್ನೇಹ ಮತ್ತು ಪ್ರೀತಿ ಎಂಬ ಎರಡೂ ಅಸ್ತ್ರಗಳನ್ನು ಎಂದಿಗೂ ಕಳೆದುಕೊಳ್ಲಬಾರದು,

ಇಂತಹ ಸ್ನೇಹ-ಪ್ರೀತಿ ಸಂಬಂದಗಳಿಗೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ, ಇತ್ತೀಚಿನ ದಿನಗಳಲ್ಲಿ ಕೆಲ ವ್ಯಕ್ತಿಗಳು ಯಾವುದೋ ಬೇರೆ ಬೇರೆ ಕಾರಣಗಳಿಗೆ ದ್ರುತಿಗೆಟ್ಟು, ನಾನು ಒಬ್ಬಂಟಿಯೆಂದು ಭಾವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ,

ಇತ್ತೀಚೆಗೆ ಈ ಪ್ರಕರಣಗಳು ಜಾಸ್ತಿಯಾಗುತ್ತಿವೆ, ಅವರಿಗೆ ಈ ರೀತಿಯ ಮನೋರೋಗ ಕಾಡುತ್ತಿರುವುದೆ ಅವರ ಒಂಟಿತನದಿಂದ, ಮೊದಲು ಆ ಏಕಾಂಗಿತನದಿಂದ ಹೊರಬನ್ನಿ,

ನಿಮ್ಮ ಸುತ್ತವಿರುವುದು ಕೆಟ್ಟ ಪ್ರಪಂಚವಾಗಿದ್ದರೂ ಪರವಾಗಿಲ್ಲ, ನಿಮ್ಮ ಧ್ಯಾನ ಶಕ್ತಿಯಿಂದ ನಿಮ್ಮ ಪ್ರೀತಿಯಿಂದ, ನಿಮ್ಮ ಸ್ನೇಹದಿಂದ, ನಿಮ್ಮ ಮನಸಲ್ಲಿ ಈ ಕೆಟ್ಟ ಪ್ರಪಂಚವಿರುವುದೇ ಈಗೆಂದು, ಅದನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ಭಾವಿಸಿ,

ಮನಸ್ಸಿನಲ್ಲಿ ಅದನ್ನು ಸುಂದರವಾಗಿಸಿ, ಆಗ ನಿಮಗೆ ಆತ್ಮಶ್ಥರ್ಯ ಬರುವುದು, ಹೆಚ್ಹು ಜನರ ಸಂಪರ್ಕ ಹೊಂದಿ, ಅವರನ್ನು ಸ್ನೇಹಿತರನ್ನಾಗಿಸಿಕೊಳ್ಲಿ, ಒ೦ದು ತಾಸಿನಲ್ಲಿ ಮುಕ್ಕಾಲು ಗಂಟೆ  ಹಾಸ್ಯದ ಮಾತುಗಳನ್ನಾಡಿ, ಉಳಿದ ಸಮಯದಲ್ಲಿ

ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮ್ಮ ಸ್ನೇಹಿತರು ಸ್ಪಂದಿಸುವಂತೆ, ನಿಮ್ಮ ಸಮಸ್ಯೇಗಳನ್ನು ಅವರ ಹತ್ತಿರ ನಿವೇದಿಸಿಕೊಳ್ಲಿ, ಈ ರೀತಿ ಮಾಡುವುದರಿಂದ ನಿಮ್ಮ ಏಕಾಂಗಿತನ ಹಂತ ಹಂತವಾಗಿ ದೂರವಗುತ್ತದೆ, ಹೆಚ್ಹಿನ ಪುಸ್ತಕಗಳನ್ನು ಓದಿ,

ಹೊಸ ಹೊಸ ವಿಷಯಗಳನ್ನು ತಿಳಿದುಕೋಳ್ಲಿ, ನಿಮ್ಮ ಮನಸ್ಸಿನ ಸಮಸ್ಯೇಗಳನ್ನು ನಿಮ್ಮ ಸ್ನೇಹಿತರ ಜೊತೆ ವಿನಿಮಯ ಮಾಡಿಕೊಳ್ಲಿ, ಇದರಿಂದ ಅವರಿಗೆ ತಿಳಿದ ಮಟ್ಟಿಗೆ ನಿಮ್ಮ ಸಮಸ್ಯೇಗಳಿಗೆ ಪರಿಹಾರ ನೀಡುತ್ತಾರೆ,

ಇಲ್ಲವಾದರೆ ಯಾವುದೇ ವಿಷಯಗಳಿಗೆ, ಯಾವುದೆ ಸಮಸ್ಯೇಗಳಿಗೆ, ಪರಿಹಾರಗಳು ಸಿಗದೇ, ನನ್ನವರು ಯಾರು ಇಲ್ಲ, ನಾನು ಒಬ್ಬಂಟಿ, ನಾನು ಏಕಾಂಗಿ ಎಂಬ ಮನೋರೋಗಕ್ಕೆ ಖಂಡಿತವಾಗಿ ತುತ್ತಾಗುತ್ತಿರಿ,

ಜೀವನದ ಪ್ರತಿಯೋಂದು ಸಮಸ್ಯೇಗಳಿಗೆ ಏಕಾಂಗಿತನ ಪರಿವಾರವಲ್ಲ, ಏಕಾಂಗಿತನದಿಂದ ಹೊರಬಂದು, ಸಮಸ್ಯೇಗಳಿಗೆ ಪರಿಹಾರ ಕಂಡುಕೊಳ್ಲಿ.

(ಭಾವನೆಗಳಿಗೆ ಬೆಲೆ ಕೊಡುವವರು ಸಿಗುವವರೆಗೂ ನಾ ಏಕಾಂಗಿಯೆ..... ಸತೀಶ್ ಗೌಡ)

ಲೇಖಕರು

SATHISH GOWDA S

ನಗುವೇ ಜೀವನ....?

ನನ್ನ ಬಗ್ಗೇ ಹೇಳೊಕೆ ಅ೦ತ ಸ್ಪೆಷಲ್ ನನ್ನಲ್ಲಿ ಏನೂ ಇಲ್ಲ, ಯಾವಗಲೂ ನಮ್ಮ ಜನರ ಬಗ್ಗೇ, ನಮ್ಮ ಊರಿನ ಬಗ್ಗೇ, ನನ್ನ ಗೆಳೆಯರ ಬಗ್ಗೇ, ಚಿ೦ತೆ ಮಾಡೊನು ನಾನು, ರಾಜಕೀಯದ ಬಗ್ಗೇ ತು೦ಬಾ ಆಸಕ್ತಿ ಜಾಸ್ತಿ, ರಾಜಕಿಯ ಮಾಡಬೇಕ೦ದ್ರೆ ಮಾರಬೇಕು ಆಸ್ತಿ... ಅದಕ್ಕೆ ಸುಮ್ಮನಿದಿನಿ..

ಅನಿಸಿಕೆಗಳು

Pattar ಗುರು, 10/24/2013 - 15:16

ಸ್ನೇಹ ಪ್ರೀತಿಗಳ ಬಗ್ಗೆ ಎಷ್ಟೆಲ್ಲಾ ತಿಳಿದುಕೊ೦ಡಿರುವ ನೀವು, ಏಕಾ೦ಗಿತನದ ವೇದನೆಯನ್ನೂ ಅರಿತಿರುವ ನೀವು ನಿಮ್ಮ ಬರಹದಲ್ಲಿ ಕೊನೆಯ ಸಾಲನ್ನೇಕೆ ಬರೆದಿರಿ? ಭಾವನೆಗಳಿಗೆ ಬೆಲೆ ಕೊಡದೇ ಇರುವ ಜೀವಿ ಈ ವಿಸ್ಮಯನಗರಿಯಲ್ಲಿ ಯಾರೊಬ್ಬರೂ ಇಲ್ಲ, ಏಕೆ೦ದರೆ ಇದು ಭಾವನೆಗಳ ಲೋಕ.

sapna ಶುಕ್ರ, 10/25/2013 - 16:19

E jagadalli yaru ekangi alla.nimma jote vismaya nagari eruva varege nivu onti alla."DON,T WARRY  BE HAPPY."Ok

SATHISH GOWDA S ಶುಕ್ರ, 12/16/2016 - 04:32

THANKS

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.